ವರ್ಗ ಸಂಘರ್ಷದ ನೆಲೆಯಲ್ಲಿ ಚಂದ್ರಶೇಖರ ಕಂಬಾರರ ನಾಯೀಕತೆ
Keywords:
ವರ್ಗ ಸಂಘರ್ಷ, ಪೊಳ್ಳುವ್ಯಕ್ತಿತ್ವ, ಶೋಷಿತವರ್ಗ, ಬಡತನ, ಜೀತದಾಳು, ಅತ್ಯಾಚಾರAbstract
ಚಂದ್ರಶೇಖರ ಕಂಬಾರ ಅವರ ನಾಟಕಗಳು ಗ್ರಾಮೀಣ ಪ್ರದೇಶದಲ್ಲಿ ಕಂಡುಬರುವ ಜಮೀನ್ದಾರಿ ವ್ಯವಸ್ಥೆಯಲ್ಲಿನ ಕ್ರೌರ್ಯ, ಪೊಳ್ಳುವ್ಯಕ್ತಿತ್ವ, ಗೌಡನ ನೀರ್ವಿರ್ಯತನವನ್ನು ಹೆಚ್ಚು ಅನಾವರಣಗೊಳ್ಳಿಸುತ್ತವೆ. ಶ್ರೀಮಂತಿಕೆಯ ಸೊಕ್ಕಿನಲ್ಲಿರುವ ಗೌಡ ಊರಿನಲ್ಲಿನ ಹೆಣ್ಣುಮಕ್ಕಳನ್ನು ಅನುಭವಿಸುವೆ ಎಂಬ ಭ್ರಮಾ ಲೋಕದಲ್ಲಿ ಬದುಕು ಸಾಗಿಸುವಂತವನು. ಅಂತಹ ಗೌಡ ಶಾರಿಯಂತಹ ಹೆಣ್ಣನ್ನು ಭೋಗಿಸಬೇಕೆಂದು ಮನೆಗೆ ಕರೆ ತಂದು ಅವಳು ಆ ಮನೆಯ ಆಳು ಮಗನೊಟ್ಟಿಗೆ ಓಡಿ ಹೋಗುವ ವಿಷಯವನ್ನು ಕಂಬಾರರ ನಾಯಿಕತೆ ಚಿತ್ರಿಸುತ್ತದೆ. ಇಲ್ಲಿ ಸೋಮಣ್ಣನು ಕಾಲಿನಿಂದ ತೋರಿಸಿದ ಕೆಲಸವನ್ನು ತಲೆ ಮೇಲೆ ಹೊತ್ತು ಮಾಡುತ್ತಿದ್ದ ನಾಯಿಮಗ, ಶಾರಿಯ ಮಾತಿಗಳಿಂದ ಪ್ರೇರಣೆ ಪಡೆದು ಅವಳನ್ನು ಕಾಪಾಡುವ ನೆಪದಲ್ಲಿ ಸೋಮಣ್ಣನಿಂದ ಸ್ವಾತಂತ್ರ್ಯ ಪಡೆದುಕೊಳ್ಳುತ್ತಾನೆ. ಶಾರಿ ಇಲ್ಲಿ ಒಂದು ಸಮುದಾಯದ ಉದ್ಧಾರಕ್ಕಾಗಿ ಬಂದ ಶಕ್ತಿಯಾಗಿ ವ್ಯಕ್ತವಾಗುತ್ತಾಳೆ. ಬಡವರ ಮುಗ್ಧತೆಯನ್ನು ದುರಪಯೋಗ ಮಾಡಿಕೊಳ್ಳುವ ಆಳುವ ವರ್ಗದ ಗುಣವನ್ನು ವಿರೋಧಿಸುವ ನೆಲೆಯಲ್ಲಿ ಶಾರಿ ಪಾತ್ರ ಸೃಷ್ಟಿಯಾಗಿದೆ. ಈ ಲೇಖನ ಸಮಾಜವು ವರ್ಗದ ಹಿನ್ನಲೆಯಲ್ಲಿ ತಳಸಮುದಾಯವನ್ನು ಹೇಗೆಲ್ಲಾ ಬಳಸಿಕೊಳ್ಳುತ್ತದೆ ಎನ್ನುವುದನ್ನು ಬಿಚ್ಚಿಡುವ ಉದ್ದೇಶವನ್ನು ಹೊಂದಿದೆ.
References
ಚಂದ್ರಶೇಖರ ಕಂಬಾರ, (2011), ನಾಯೀಕತೆ, ಅಂಕಿತ ಪುಸ್ತಕ ಪ್ರಕಾಶನ, ಬೆಂಗಳೂರು.
ಜ್ಯೋತಿ ಕೆ.ಎಸ್., (2015), ಗಿರೀಶ ಕಾರ್ನಾಡ ಮತ್ತು ಚಂದ್ರಶೇಖರ ಕಂಬಾರರ ನಾಟಕಗಳ ತೌಲನಿಕ ಅಧ್ಯಯನ (ಸಂಶೋಧನ ಮಹಾಪ್ರಂಬಂಧ), ಮೈಸೂರು ವಿಶ್ವವಿದ್ಯಾಲಯ, ಮೈಸೂರು.
Downloads
Published
How to Cite
Issue
Section
License
Copyright (c) 2025 ಅಕ್ಷರಸೂರ್ಯ (AKSHARASURYA)

This work is licensed under a Creative Commons Attribution 4.0 International License.