ಲಂಕೇಶರ ಕಣ್ಣಲ್ಲಿ ಗಾಂಧೀಜಿ
Keywords:
ಗಾಂಧೀಜಿ, ಸತ್ಯಾಗ್ರಹ, ಸರಳತೆ, ಟ್ರಸ್ಟೀಷಿಪ್, ಧಾರ್ಮಿಕತೆ, ಜಾತಿAbstract
ಗಾಂಧೀಜಿಯವರು ಹುಟ್ಟಿ 156 ವರ್ಷಗಳಾಗಿವೆ. ಅವರ ಬದುಕಿನ ಬಗೆಗೆ ಚರ್ಚೆ, ಬರಹ, ಸ್ಮರಣೆ-ಸ್ತುತಿ ನಡೆಯುತ್ತಲೇ ಇವೆ. ಭಾರತದ ಇತರೆ ವ್ಯಕ್ತಿಗಳು ಜಾತಿ, ಧರ್ಮ, ಪಂಥಗಳಿಗೆ ಒಳಗಾದಂತೆ ಮಹಾತ್ಮಗಾಂಧಿಯವರು ಸುಲಭಕ್ಕೆ ಒಳಗಾಗದೆ ಇರುವುದು ಅವರ ಬದುಕಿನ ರೀತಿಯನ್ನು ಬಿಂಬಿಸುವಂತದ್ದು. ದೀರ್ಘಕಾಲ ಭಾರತದ ರಾಜಕೀಯ, ಸಾಮಾಜಿಕ ಬದುಕಿನಲ್ಲಿದ್ದ ಗಾಂಧೀಜಿಯವರು ಇಂದಿಗೂ ʼಅನ್ಯʼರಾಗಿಯೇ ಇರುವಂತಾಗಿದೆ. ಅನ್ಯ ನಂತೆ ಕಂಡರೂ ಕೂಡ ಪ್ರಸ್ತುತದಲ್ಲಿಯೂ ಒಂದಲ್ಲಾ ಒಂದುರೀತಿಯಲ್ಲಿ ಪ್ರಸ್ತುತರಾಗುತ್ತಲೇ ಇದ್ಧಾರೆ. ಗಾಂಧೀಜಿಯವರ ಸತ್ಯಾಗ್ರಹ, ಉಪವಾಸ, ಶ್ರಮದ ಬದುಕು, ಅಸ್ಪೃಶ್ಯತೆಯ ನಿವಾರಣೆ, ಬ್ರಹ್ಮಚರ್ಯ, ಟ್ರಸ್ಟೀಶಿಪ್ ಹೀಗೆ ಹಲವು ನೆಲೆಗಳಲ್ಲಿ ಬದುಕಿದ್ಧ ಗಾಂಧೀಜಿಯವರ ಬದುಕು ಪರ-ವಿರೋಧ ಚರ್ಚೆಗಳಿಗೆ ಒಳಗಾಗುತ್ತಲೇ, ಪ್ರಸ್ತುತಕ್ಕೆ ಮುಖಾಮುಖಿಯಾಗುತ್ತಿರುತ್ತಾರೆ. ವಸಾಹತು ಬದುಕಿನ ಕ್ರಮಕ್ಕೆ ಒಳಗಾಗಿರುವ ಭಾರತೀಯರ ಬದುಕಿನ ಕ್ರಮವನ್ನು ಅರಿತ ಗಾಂಧೀಜಿ ಅವರ ಆಲೋಚನೆಗಳು ಮತ್ತೆ ಮುನ್ನೆಲೆಗೆ ಬರುವ ಅಗತ್ಯ ಈ ಹೊತ್ತಿನದು. ಭಾರತದಂತಹ ಜಾತಿವಾದಿ, ಕೋಮುಗ್ರಸ್ಥ ಮನಸ್ಥಿತಿಯ ದೇಶದಲ್ಲಿ ಕುವೆಂಪು, ಅಂಬೇಡ್ಕರ್, ಗಾಂಧೀಜಿ ಮುಂತಾದವರು ಇಂದು ಅವರದೇ ಹಿಂಬಾಲಕರ ಕೈಗೆ ಸಿಕ್ಕಿ ಅವರ ಆಲೋಚನೆಗಳು,ವ್ಯಕ್ತಿತ್ವ ಎಲ್ಲವೂ ಛಿದ್ರಗೊಳ್ಳುತ್ತಿರುವ ಹೊತ್ತಿನಲ್ಲಿ ಇಂತಹವರಿಂದ ರಕ್ಷಿಸಿಕೊಳ್ಳಬೇಕೆಂದು ಲಂಕೇಶ್ ಹೇಳುತ್ತಾರೆ. ಜಾತಿ, ಧರ್ಮಕ್ಕೆ ಇಂತಹ ವ್ಯಕ್ತಿಗಳನ್ನು ಆಲೋಚನೆಗಳನ್ನು ಸೀಮಿತಗೊಳಿಸುತ್ತಿರುವ ಅಂಬೇಡ್ಕರ್ವಾದಿ, ಕುವೆಂಪುವಾದಿ, ಗಾಂಧೀವಾದಿಗಳಿಂದ ವಿಮುಖರಾಗಿ ನೇರವಾಗಿ ಓದಿನ ಮೂಲಕ ತಮ್ಮದೇ ರೀತಿಯಲ್ಲಿ ಗಾಂಧೀಜಿಯನ್ನು ಕಟ್ಟಿಕೊಂಡವರು ಲಂಕೇಶ್. ಗಾಂಧೀಜಿ ಬದುಕಿನ ವಿವರಗಳನ್ನು ವಿಮರ್ಶೆಗೆ ಒಳಪಡಿಸಿದ್ದಾರೆ.
References
ಲಂಕೇಶ್ ಪಿ. (2014). ಬಿಟ್ಟು ಹೋದ ಪುಟಗಳು: ಸಂಪುಟ-1. ಲಂಕೇಶ್ ಪ್ರಕಾಶನ. ಬೆಂಗಳೂರು.
ಲಂಕೇಶ್ ಪಿ. (2010). ಟೀಕೆ-ಟಿಪ್ಪಣಿ: ಸಂಪುಟ-3. ಲಂಕೇಶ್ ಪ್ರಕಾಶನ. ಬೆಂಗಳೂರು.
ಲಂಕೇಶ್ ಪಿ. & ಶ್ರೀಧರ ವಿ. ಎಸ್. (ಸಂಯೋಜನೆ). (2010). ಸಾಹಿತಿ ಸಾಹಿತ್ಯ ವಿಮರ್ಶೆ. ಲಂಕೇಶ್ ಪ್ರಕಾಶನ. ಬೆಂಗಳೂರು.
ಲಂಕೇಶ್ ಪಿ. (2010). ಮರೆಯುವ ಮುನ್ನ: ಸಂಪುಟ 1 ರಿಂದ 5. ಲಂಕೇಶ್ ಪ್ರಕಾಶನ. ಬೆಂಗಳೂರು.
Downloads
Published
How to Cite
Issue
Section
License
Copyright (c) 2024 AKSHARASURYA
This work is licensed under a Creative Commons Attribution 4.0 International License.