ಕುವೆಂಪುರವರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ: ಒಂದು ಚಿಂತನೆ

Authors

  • ರಂಗಲಕ್ಷ್ಮಿ ಪಿ. ಎ. ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಆರ್. ಟಿ. ನಗರ, ಬೆಂಗಳೂರು.

Keywords:

ಕುವೆಂಪು, ಸಾಮಾಜಿಕ ಪ್ರಜ್ಞೆ, ವೈಚಾರಿಕತೆ, ಪ್ರಕೃತಿ, ಸಮಾನತೆಯ ಧೋರಣೆ

Abstract

ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ ಅವರು ಕುವೆಂಪು ಎಂಬ ಹೆಸರಿನಲ್ಲಿ ಪ್ರಸಿದ್ದವಾಗಿರುವ ಕವಿ. ಕನ್ನಡ ಸಾಹಿತ್ಯದ ಎಲ್ಲಾ ಪ್ರಕಾರಗಳಲ್ಲಿಯೂ ಕೆಲಸ ನಿರ್ವಹಿಸಿದ್ದಾರೆ. ಈ ಲೇಖನದಲ್ಲಿ ಕವಿ ಕುವೆಂಪು ಅವರ ಸಾಹಿತ್ಯದಲ್ಲಿ ಕಂಡು ಬಂದಿರುವ ಸಾಮಾಜಿಕ ಕಳಕಳಿ ಹೇಗೆ ಮೂಡಿಬಂದಿದೆ ಎಂದು ಕೆಲವು ಪದ್ಯಗಳ ಉದಾಹರಣೆಯನ್ನು ತೆಗೆದುಕೊಂಡು ವಿವರಿಸಲಾಗಿದೆ. ಸುಂದರವಾದ ಮಲೆನಾಡಿನ ಕುಪ್ಪಳ್ಳಿಯಲ್ಲಿ ಕವಿ ಕುವೆಂಪು ಅವರ ಜನನ 1904 ನೇ ಇಸವಿ ಡಿಸೆಂಬರ್ 29 ರಂದು ಆಯಿತು. ಆ ಕಾಲದ ಮಲೆನಾಡು ಈಗಿನಂತೆ ತೆಳ್ಳಗಿರಲಿಲ್ಲ. ಸಹ್ಯಾದ್ರಿ ಶ್ರೇಣಿ ಎಂದು ಕರೆಯುವ ಪ್ರದೇಶದಲ್ಲಿ ದಟ್ಟವಾದ ಅರಣ್ಯವಿತ್ತು. ಇಂಥಹ ಮಲೆನಾಡಿನ ಗರ್ಭದಲ್ಲಿ ಜನ್ಮತಾಳಿದ ಕವಿ ಕುವೆಂಪುವಿಗೆ ಪೂರ್ವ ಜನ್ಮದ ಪುಣ್ಯವೇ ಮೈವೆತ್ತಂತೆ ಅನಿಸಿತು. ಚಿಕ್ಕವಯಸ್ಸಿನಿಂದಲೂ ಪ್ರಕೃತಿಯ ಜೊತೆಯಲ್ಲಿಯೇ ಬೆಳೆದ ಕವಿಗೆ ನಿತ್ಯವೂ ಹೊಸದಾಗಿಯೇ ಗೋಚರಿಸುವ ದೃಷ್ಯಗಳು. ಕುವೆಂಪು ಅವರ ವೈಚಾರಿಕತೆಯು ಅವರ ಸಾಹಿತ್ಯದಲ್ಲಿ ಮೂಡಿಬಂದಿದೆ.

References

ರಹಮತ್ ತರೀಕೆರೆ. (1993). ಪ್ರತಿ ಸಂಸ್ಕೃತಿ. ಅಭಿನವ ಪ್ರಕಾಶನ. ಬೆಂಗಳೂರು.

ನಾಗಭೂಷಣ ಡಿ. ಎಸ್. (ಸಂ). (2005). ಕುವೆಂಪು ಒಂದು ಪುನರನ್ವೇಷಣೆ. ಗೀತಾಜಲಿ ಪುಸ್ತಕ ಪ್ರಕಾಶನ. ಶಿವಮೊಗ್ಗ.

ಸಿ.ಪಿ.ಕೆ. (2012). ಕುವೆಂಪು ಸಾಹಿತ್ಯ ಸಂವಾದ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾನಿಲಯ. ಮೈಸೂರು.

ದೇ.ಜ.ಗೌ. (2003). ಅಭಿಜಾತ ವಿಡಂಬನಾಕಾರ ಕುವೆಂಪು. ಸಹ್ಯಾದ್ರಿ ಪ್ರಕಾಶನ. ಮೈಸೂರು.

ಕುವೆಂಪು. (2018). ಜಲಗಾರ. ಉದಯ ರವಿ ಪ್ರಕಾಶನ. ಮೈಸೂರು.

ಕುವೆಂಪು. (2020). ಶೂದ್ರತಪಸ್ವಿ. ಉದಯ ರವಿ ಪ್ರಕಾಶನ. ಮೈಸೂರು.

Downloads

Published

02.10.2024

How to Cite

ರಂಗಲಕ್ಷ್ಮಿ ಪಿ. ಎ. (2024). ಕುವೆಂಪುರವರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ: ಒಂದು ಚಿಂತನೆ . AKSHARASURYA, 5(01), 128 to 133. Retrieved from https://aksharasurya.com/index.php/latest/article/view/517

Issue

Section

ಪ್ರಬಂಧ. | ESSAY.