ಆಧುನಿಕ ಕನ್ನಡ ಸಾಮಾಜಿಕ ನಾಟಕಗಳು: ವಾಸ್ತವಿಕ ಪ್ರಜ್ಞೆಯ ನೆಲೆಗಳು

Authors

  • ಮಲ್ಲಯ್ಯ ಸಂಡೂರು ಅಧ್ಯಾಪಕರು, ಕನ್ನಡ ಅಧ್ಯಯನ ವಿಭಾಗ, ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರ, ಜ್ಞಾನ ಸರೋವರ, ನಂದಿಹಳ್ಳಿ, ಸಂಡೂರು.

Keywords:

ನಾಟಕ, ಸಾಹಿತ್ಯ, ರಂಗಭೂಮಿ, ಸಾಮಾಜಿಕ ಪ್ರಜ್ಞೆ, ವಾಸ್ತವಿಕ ಪ್ರಜ್ಞೆ

Abstract

ಉತ್ತರ ಕನ್ನಡ ಜಿಲ್ಲೆಯ ಪ್ರಾದೇಶಿಕತೆಯ ಕಥಾಹಂದರವನ್ನು ಒಳಗೊಂಡಿರುವ ‘ಇಗ್ಗಪ್ಪ ಹೆಗ್ಗಡೆಯ ಪ್ರಹಸನ’ (1887) ನಾಟಕ ವಾಸ್ತವಿಕತೆಯನ್ನು ಕುರಿತು ಚರ್ಚಿಸುವಾಗ ಮುನ್ನೆಲೆಗೆ ಬರುತ್ತದೆ. ಉತ್ತರ ಕನ್ನಡದ ಜನರ ಸಾಮಾಜಿಕ ಹಿನ್ನೆಲೆಯಲ್ಲಿ ರಚಿತವಾದ ಈ ನಾಟಕವನ್ನು ವಾಸ್ತವಿಕ ರಂಗಭೂಮಿಯ ಪ್ರಪ್ರಥಮ ಸ್ವತಂತ್ರ ಕೃತಿ ಎನ್ನುವುದುಂಟು. ಇಳಿಯ ವಯಸ್ಸಿನ ಹವ್ಯಕ ಬ್ರಾಹ್ಮಣ ಇಗ್ಗಪ್ಪ ಹೆಗಡೆಯ ವಿಷಮ ವಿವಾಹ, ಅದರ ದುರಂತತೆ ಈ ನಾಟಕದ ವಸ್ತು. ಸ್ವತಂತ್ರವಾದ ಸಾಮಾಜಿಕ ವಸ್ತುವನ್ನು ಒಳಗೊಂಡು, ಅಪ್ಪಟ ಆಡುಮಾತನ್ನೇ ಬಳಸಿಕೊಂಡು ಬರೆದ ಈ ನಾಟಕ ಒಂದು ನೈಜವಾದ ಸಾಮಾಜಿಕ ಚಿತ್ರಣದಿಂದ ಕೂಡಿದೆ.


ಕನ್ನಡ ನಾಟಕದಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿ ಹೊಸ ಯುಗವನ್ನೇ ಸೃಷ್ಟಿಸಿದ ಕೀರ್ತಿ ಟಿ. ಪಿ. ಕೈಲಾಸ ಹಾಗೂ ಶ್ರೀರಂಗರಿಗೆ ಸಲ್ಲುತ್ತದೆ. ಇದಕ್ಕಿಂತ ಮೊದಲು ಮಾಡಿದ್ದರೂ ಹೆಚ್ಚು ಪ್ರಚುರಕ್ಕೆ ಬಂದದ್ದು ಈ ಇಬ್ಬರೂ ನಾಟಕಗಳಿಂದ ಎನ್ನಬಹುದು. ಇಗ್ಗಪ್ಪ ಹೆಗಡೆ ಪ್ರಹಸನದಂತೆ ಇವರ ನಾಟಕಗಳೂ ಸಮಾಜ ಸುಧಾರಣೆಯ ಪ್ರವಚನವನ್ನೇ ಉಕ್ಕಿಸುವುದರಿಂದ ಅವು ಹೆಚ್ಚು ಕಲಾತ್ಮಕತೆ ಸಾಧಿಸಲಿಲ್ಲ. ಪತಿತೋದ್ಧಾರದ ರಚನೆ ತೀರಾ ಜಾಳಾಗಿದ್ದು, ಅತಿಮುಗ್ಧ ಕಲ್ಪನೆಯಿಂದ ಕೂಡಿದೆ. ನಾಟಕದ ವಸ್ತು ಹೊಸತಾದರೂ ಅದರ ವಿನ್ಯಾಸದಲ್ಲಿ ನಾಟಕಕಾರ ಹೆಚ್ಚು ಸ್ಪಷ್ಟವಾದ ನವೀನತೆಯನ್ನಾಗಲೀ ಆತ್ಮಪ್ರತ್ಯಯವನ್ನಾಗಲೀ ಸಾಮಾಜಿಕ ಕಾಳಜಿಯನ್ನಾಗಲೀ ತೋರುವಂತೆ ಕಾಣುವುದಿಲ್ಲ. ಆದರೆ ನಿಜವಾದ ಸಾಮಾಜಿಕ ಅರಿವನ್ನು ನಾವು ಗುರುತಿಸುವುದು ಕೈಲಾಸಂ ಹಾಗೂ ಶ್ರೀರಂಗರ ನಾಟಕಗಳಲ್ಲಿ. ಇಬ್ಬರೂ ಪ್ರೌಢ ಶಿಕ್ಷಣದ ಸಲುವಾಗಿ ಕಡಲಾಚೆ ಪ್ರವಾಸ ನಡೆಸಿದಾಗ ಪಾಶ್ಚಾತ್ಯ ರಂಗಭೂಮಿಯ ಹಾಗೂ ಹೊಸ ಕಾಲದ ಜೀವನದ ಪ್ರಭಾವಗಳಿಗೆ ಮನವೊಡ್ಡಿ, ಅಲ್ಲಿ ಮೊಗೆದು ತಂದ ಸಂವೇದನೆ, ಪರಿಣತಿಗಳನ್ನು ಕನ್ನಡ ನಾಟಕಕ್ಕೆ ತುಂಬಿಸಿಕೊಟ್ಟರು. ಆಗ ಇಂಗ್ಲೆಂಡಿನಲ್ಲಿ, ಇಬ್ಸೆನ್ನನ ನಾಟಕದಿಂದ ಪ್ರೇರಿತರಾಗಿದ್ದ ಷಾ, ಗಾಲ್ಸ್ ಅಂತಹವರ ಪ್ರಭಾವ ಕೈಲಾಸಂ, ಶ್ರೀರಂಗರ ಮೇಲೂ ಬೀರಿರಬೇಕು. ಆದರೆ ಸಂಸ್ಕೃತದಲ್ಲಿ ಅಪಾರ ಪಾಂಡಿತ್ಯ ಪಡೆದ ಅವರಿಬ್ಬರೂ ನಾಡಿನ ಪರಂಪರೆಯನ್ನು ಗಮನವಿಟ್ಟುಕೊಂಡೇ ನಾಟಕ ಬರೆದರು. ಹೊಸ ಪ್ರಭಾವ, ಅಂತರ್ಗತವಾದ ಪ್ರತಿಭೆಯೊಡನೆ ಸೇರಿ ಕನ್ನಡ ನಾಟಕ ಸಾಹಿತ್ಯದಲ್ಲಿ ಹೊಸ ಮನ್ವಂತರಕ್ಕೆ ಕಾರಣವಾಯಿತು. ಈ ಹಿನ್ನೆಲೆಯಲ್ಲಿ ಆಧುನಿಕ ಕನ್ನಡ ಸಾಮಾಜಿಕ ನಾಟಕಗಳಲ್ಲಿ ವಾಸ್ತವಿಕ ಪ್ರಜ್ಞೆಯ ನೆಲೆಗಳನ್ನು ಶೋಧಿಸಲು ಈ ಲೇಖನದಲ್ಲಿ ಪ್ರಯತ್ನಿಸಲಾಗಿದೆ.

References

ಕೃಷ್ಣಮೂರ್ತಿ ವಿ. ಜಿ. (1988). ಕೈಲಾಸಂ. ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ. ಮೈಸೂರು.

ಪರಮಶಿವಯ್ಯ ಜೀ. ಶಂ. ರಾಜೇಗೌಡ ಹ. ಕ. & ಭಟ್ಟ ಪ. ಸು. (ಸಂ). ಜವರೇಗೌಡ ದೇ. (ಪ್ರ.ಸಂ.). (1975). ಕಬ್ಬಿನ ಹಾಲು: ಶ್ರೀ ಕೆ.ವಿ. ಶಂಕರಗೌಡ ಅಭಿನಂದನ ಗ್ರಂಥ. ಶ್ರೀ ಕುವೆಂಪು ವಿದ್ಯಾವರ್ಧಕ ಟ್ರಸ್ಟ್. ಮೈಸೂರು.

ಮರುಳಸಿದ್ಧಪ್ಪ ಕೆ. (2018). ಆಧುನಿಕ ಕನ್ನಡ ನಾಟಕ. ಸಪ್ನ ಬುಕ್ ಹೌಸ್. ಬೆಂಗಳೂರು.

ರಂಗನಾಥ್ ಹೆಚ್. ಕೆ. (1978). ಕರ್ನಾಟಕ ರಂಗಭೂಮಿ. ಸುರುಚಿ ಪ್ರಕಾಶನ. ಮೈಸೂರು.

ಶ್ರೀರಂಗ. (2005). ಶ್ರೀರಂಗ ಸಾರಸ್ವತ-3: ನಾಟಕ ಸಂಪುಟ-1. ಕನ್ನಡ ಸಂಸ್ಕೃತಿ ನಿರ್ದೇಶನಾಲಯ. ಬೆಂಗಳೂರು.

ಶ್ರೀರಂಗ. (2005). ಶ್ರೀರಂಗ ಸಾರಸ್ವತ-4: ನಾಟಕ ಸಂಪುಟ-2. ಕನ್ನಡ ಸಂಸ್ಕೃತಿ ನಿರ್ದೇಶನಾಲಯ. ಬೆಂಗಳೂರು.

ಶ್ರೀರಂಗ. (2005). ಶ್ರೀರಂಗ ಸಾರಸ್ವತ-5: ನಾಟಕ ಸಂಪುಟ-3. ಕನ್ನಡ ಸಂಸ್ಕೃತಿ ನಿರ್ದೇಶನಾಲಯ. ಬೆಂಗಳೂರು.

ಶ್ರೀರಂಗ. (2005). ಶ್ರೀರಂಗ ಸಾರಸ್ವತ-6: ನಾಟಕ ಸಂಪುಟ-4. ಕನ್ನಡ ಸಂಸ್ಕೃತಿ ನಿರ್ದೇಶನಾಲಯ. ಬೆಂಗಳೂರು.

ಶ್ರೀರಂಗ. (2005). ಶ್ರೀರಂಗ ಸಾರಸ್ವತ-7: ನಾಟಕ ಸಂಪುಟ-5. ಕನ್ನಡ ಸಂಸ್ಕೃತಿ ನಿರ್ದೇಶನಾಲಯ. ಬೆಂಗಳೂರು.

ಶ್ರೀರಂಗ. (2006). ಶ್ರೀರಂಗ ಸಾರಸ್ವತ-8: ರಂಗ ಚಿಂತನ. ಕನ್ನಡ ಸಂಸ್ಕೃತಿ ನಿರ್ದೇಶನಾಲಯ. ಬೆಂಗಳೂರು.

ಶ್ರೀರಂಗ. (2006). ಶ್ರೀರಂಗ ಸಾರಸ್ವತ-9: ತತ್ವ ಚಿಂತನ ಸಂಪುಟ. ಕನ್ನಡ ಸಂಸ್ಕೃತಿ ನಿರ್ದೇಶನಾಲಯ. ಬೆಂಗಳೂರು.

ಶ್ರೀರಂಗ. (2006). ಶ್ರೀರಂಗ ಸಾರಸ್ವತ-10: ಸಾಹಿತ್ಯ ಚಿಂತನ ಸಂಪುಟ. ಕನ್ನಡ ಸಂಸ್ಕೃತಿ ನಿರ್ದೇಶನಾಲಯ. ಬೆಂಗಳೂರು.

ಕೈಲಾಸಂ ಟಿ. ಪಿ. (ಲೇ). ರಾಮರಾವ್ ಬಿ. ಎಸ್. (ಸಂ). (1970). ನಮ್ ಕಂಪ್‌ನಿ. ಬಿ. ಎಸ್. ರಾಮರಾವ್. ಬೆಂಗಳೂರು.

ಕೈಲಾಸಂ ಟಿ. ಪಿ. (ಲೇ). ರಾಮರಾವ್ ಬಿ. ಎಸ್. (ಸಂ). (1944). ವೈದ್ಯನವ್ಯಾಧಿ. ಮಾಧವ ಸನ್ಸ್. ಬೆಂಗಳೂರು.

ಶ್ರೀನಿವಾಸರಾಜು ಚಿ. (ಸಂ). (2003). ನಮ್ಮ ಕೈಲಾಸಂ ನೆನಪಿನ ಸಂಪುಟ. ಪ್ರೀಸಂ ಬುಕ್ಸ್. ಬೆಂಗಳೂರು.

Downloads

Published

02.10.2024

How to Cite

ಮಲ್ಲಯ್ಯ ಸಂಡೂರು. (2024). ಆಧುನಿಕ ಕನ್ನಡ ಸಾಮಾಜಿಕ ನಾಟಕಗಳು: ವಾಸ್ತವಿಕ ಪ್ರಜ್ಞೆಯ ನೆಲೆಗಳು. AKSHARASURYA, 5(01), 59 to 66. Retrieved from https://aksharasurya.com/index.php/latest/article/view/508

Issue

Section

ಸಂಶೋಧನಾ ಲೇಖನಗಳು. | RESEARCH ARTICLE.