ಗೀತನಾಟಕ ಪ್ರವೇಶ: ಸಂಸ್ಕೃತ ನಾಟಕ ಮತ್ತು ನಾಟಕದಲ್ಲಿ ಸಂಗೀತ

Authors

  • ಎಂ. ಭೈರಪ್ಪ ಕನ್ನಡ ಸಹಾಯಕ ಪ್ರಾಧ್ಯಾಪಕರು, ಸಮಾಜ ವಿಜ್ಞಾನ ಮತ್ತು ಭಾಷೆಗಳ ವಿಭಾಗ, ಕ್ರಿಸ್ತು ಜಯಂತಿ ಕಾಲೇಜು (ಸ್ವಾಯತ್ತ), ಕೆ.ನಾರಾಯಣಪುರ, ಕೊತ್ತನೂರು ಅಂಚೆ, ಬೆಂಗಳೂರು.
  • ವಿಜಯಲಕ್ಷ್ಮೀ ಸುಬ್ಬರಾವ್

Keywords:

ಸಂಸ್ಕೃತ ನಾಟಕ, ಗೀತನಾಟಕ, ಸಂಗೀತ, ನಾಟ್ಯಶಾಸ್ತ್ರ, ವೇದ, ಮಹಾಕಾವ್ಯ

Abstract

ಬಹುಮುಖ ಪ್ರತಿಭೆಯ ಡಾ. ವಿಜಯಾ ಸುಬ್ಬರಾಜ್


ಬಹುಮುಖ ಪ್ರತಿಭೆಯ ಡಾ.ವಿಜಯಾ ಸುಬ್ಬರಾಜ್ ಅವರು ಹುಟ್ಟಿದ್ದು ಬೆಂಗಳೂರಿನಲ್ಲಿ. ತಾಯಿ ಲಕ್ಷ್ಮಿ, ಹಾಗೂ ತಂದೆ ಸೀತಾರಾಂ ಅವರು. ಓದಿದ್ದು ಬೆಂಗಳೂರಿನಲ್ಲೇ. ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಎಂ.ಎ ಮತ್ತು ಎಲ್.ಎಲ್.ಬಿ. ಪದವೀಧರೆಯಾದವರು. ಫ್ರೆಂಚ್ ಭಾಷೆಯ ಡಿಪ್ಲೊಮ ಪದವಿಯನ್ನೂ ಹಿಂದಿ ಸಾಹಿತ್ಯರತ್ನ ಪದವಿಯನ್ನೂ ಅಧ್ಯಯನ ಮಾಡಿದವರು. ಎಂ.ಇ.ಎಸ್. ಕಾಲೇಜಿನಲ್ಲಿ ಸುದೀರ್ಘ ಕಾಲ ಪ್ರಾಧ್ಯಾಪಕ ಹುದ್ದೆ ನಿರ್ವಹಿಸುತ್ತಲೇ ನಿರಂತರವಾಗಿ ಹಲವು ಮಾಧ್ಯಮಗಳಲ್ಲಿ ತಮ್ಮ ಪ್ರಯೋಗಶೀಲತೆಯನ್ನು ದುಡಿಸಿಕೊಂಡವರು, ಕಥೆ, ಕವಿತೆ, ನಾಟಕ, ಕಾದಂಬರಿ, ಪ್ರವಾಸ ಕಥನ, ಅನುವಾದ, ವೈಚಾರಿಕ ಬರೆಹ, ವಿಮರ್ಶೆ, ಸಂಶೊಧನೆ ಮುಂತಾದ ವಿಭಿನ್ನ ಪ್ರಕಾರಗಳಲ್ಲಿ ಅವರ ಶಕ್ತಿ, ಪ್ರತಿಭೆಗಳು ಬೆಳಗಿವೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ಓದುವ ಬರೆಯುವ ಹವ್ಯಾಸ ರೂಢಿಸಿಕೊಂಡವರು. ಅವರ ಹಲವಾರು ಲೇಖನಗಳು, ಕಥೆ, ಕವನ, ನಾಟಕಗಳು ನಾಡಿನ ಎಲ್ಲ ಪ್ರಸಿದ್ಧ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಆಕಾಶವಾಣಿ, ದೂರದರ್ಶನಕ್ಕಾಗಿ ಶಬ್ದ ಚಿತ್ರಗಳು, ಭಾಷಣಗಳು, ಲೇಖನಗಳು, ವಿಮರ್ಶೆ, ಚಿಂತನೆಗಳು, ನಾಟಕಗಳು, ಸಂದರ್ಶನಗಳು ಹೀಗೆ ವೈವಿಧ್ಯಪೂರ್ಣ ಕೊಡುಗೆ ನೀಡಿದ ಸಾಧಕಿ ವಿಜಯಾ ಸುಬ್ಬರಾಜ್ ಅವರು.

ಲೇಖಕಿ ವಿಜಯಾ ಸುಬ್ಬರಾಜ್ ಅವರು ಕನ್ನಡ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃತಿ ರಚನೆ ಮಾಡಿದ್ದಾರೆ. ತ್ರಿಶಂಕು, ಏನು ಹೇಳಲಿ ಗೆಳೆಯ, ಹಾಡೇನ ಪಾಡೇನ, ಈ ತೆರದ ನಿರೀಕ್ಷೆಯಲ್ಲಿ, ವಸುಂಧರೆಯ ಪ್ರಾಯ ಮುಂತಾದವು ಅವರ ಕವನ ಸಂಕಲನಗಳು; ಪಾಂಚಾಲಿ, ಪಾದ್ರಿಯೊಬ್ಬನ ಕಥೆ, ನಗರವಧು ಸಾಲವತಿ, ಪ್ರೇಮ ಸಮಾಗಮ, ಮಿಲನ, ಮತ್ತೊಂದು ಮಹಾಭಾರತ, ದಂಗೆ ಎದ್ದವಳು ಮುಂತಾದವು ನಾಟಕಗಳು;. ತಪ್ಪಿದ ಹೆಜ್ಜೆಗಳು, ಬುವಿಯಿಂದ ಬಾನಿಗೆ, ಸೌರಭ ಸೇತು, ಹರಿದತ್ತ ಹರಿವ ಚಿತ್ತ, ನೂರ್ ಜಹಾನ್, ನಡು ವಯಸ್ಸಿನಲ್ಲಿ (ಚೀನಿ ಭಾಷಾಂತರ) ಶಾಲ್ಮಲಿ (ಹಿಂದಿ ಭಾಷಾಂತರ) ಮುಂತಾದವು ಕಾದಂಬರಿಗಳು; ಮಾನಿಷಾದ, ಕಾಣದ ದಿಕ್ಕಿನತ್ತ, ಅದೇ ಮುಖ, ಒಳದನಿ, ಚೀನಿ ಭಾಷೆಯಿಂದ ಅನುವಾದಿಸಿದ ಲುಷುನ್ ಅವರ 10 ಚೀನಿ ಕಥೆಗಳು ಮತ್ತು ಹುಚ್ಚನ ದಿನಚರಿ ಮುಂತಾದವು ಕಥಾ ಸಂಕಲನಗಳು; ಸ್ವರ್ಗ ದ್ವೀಪದ ಕನಸಿನ ಬೆನ್ನೇರಿ ಪ್ರವಾಸ ಕಥನ; ಸ್ಪಂದನ, ಸಮಾಲೋಚನ ಮುಂತಾದುವು ವಿಮರ್ಶಾ ಕೃತಿಗಳು; ನೊಬೆಲ್ ಪ್ರಶಸ್ತಿ ವಿಜೇತರಾದ ಗೇಬ್ರಿಯಲ್ ಗಾರ್ಸಿಯಾ ಮಾಕ್ವೇಜ್ ಅವರ ಕೃತಿಯನ್ನು ‘ಒಂದು ನೂರು ವರ್ಷಗಳ ಏಕಾಂತ’ ಎಂಬ ಹೆಸರಿನಿಂದ ಕನ್ನಡಕ್ಕೆ ತಂದಿದ್ದಾರೆ. ಬೇರೆ ಭಾಷೆಯಿಂದ ಅನುವಾದಿಸಿರುವ ಕೃತಿಗಳು ವಿಜಯಾ ಅವರ ವಿದ್ವತ್ತು, ಪಾಂಡಿತ್ಯ, ಭಾಷಾಜ್ಞಾನ ಮತ್ತು ಸಾಹಿತ್ಯಾಸಕ್ತಿಯ ಪ್ರತೀಕಗಳಾಗಿವೆ. ವಿಜಯಾ ಸುಬ್ಬರಾಜ್ ಅವರ ಸಾಧನೆಗೆ ಕನ್ನಡ ಸಾಹಿತ್ಯ ಪರಿಷತ್ತಿನ ಮಲ್ಲಿಕಾ ಪ್ರಶಸ್ತಿ, ಅತ್ತಿಮಬ್ಬೆ ಸಾಹಿತ್ಯ ಪ್ರಶಸ್ತಿ, ನೀಲಗಂಗ ಪ್ರಶಸ್ತಿ, ಕಂದಗಲ್ ಹನುಮಂತರಾವ್ ಪ್ರಶಸ್ತಿ, ದೊಂಬಿವಿಲಿ ಕರ್ನಾಟಕ ಸಂಘ (ಮುಂಬಯಿ) ಪ್ರಶಸ್ತಿ, ಕಡೆಂಗೋಡ್ಲು ಶಂಕರಭಟ್ಟ ಕಾವ್ಯ ಪ್ರಶಸ್ತಿ, ಗೊರೂರು ಸಾಹಿತ್ಯ ಪ್ರಶಸ್ತಿ, ಶಾರದಾ ಸಾಹಿತ್ಯ ಸ್ತ್ರೀ ಪ್ರಶಸ್ತಿ, ಪೆರ್ಲಕೃಷ್ಣಭಟ್ ಪ್ರಶಸ್ತಿ, ಸಂಜೆವಾಣಿ ಪ್ರಶಸ್ತಿ, ಆದರ್ಶ ಶಿಕ್ಷಕಿ ಪ್ರಶಸ್ತಿ ಮೊದಲಾದ ಗೌರವಗಳು ಸಂದಿವೆ.

ಸಂಶೋಧನ ಲೋಕದ ಅಭಿಮತದಂತೆ, ಆಧುನಿಕ ಕನ್ನಡ ಸಾಹಿತ್ಯ ಚರಿತ್ರೆಯನ್ನು ಗಮನಿಸಿದಾಗ ನಾಟಕ ರಚಿಸಿರುವ ಮಹಿಳೆಯರು ತುಂಬಾ ಕಡಿಮೆ. “ನಾಟಕ’, ಅದರ ರಚನೆ, ನಟನೆ ಮೊದಲಾದ ಕ್ರಿಯೆಗಳನ್ನು ಕುರಿತು ನಮ್ಮ ಸಮಾಜ ಹೊಂದಿದ್ದ “ಭಾವನೆ’ ಇದಕ್ಕೆ ಕಾರಣ ಇದ್ದಿರಬಹುದು. ಇಂತಹ ಸಾಮಾಜಿಕ ನಿಲುವುಗಳು ಸಾಹಿತ್ಯ ಮತ್ತು ಸಾಂಸ್ಕೃತಿಕ ಅಭಿವ್ಯಕ್ತಿಗೆ ತೊಡಕಾಗಿ ಪರಿಣಮಿಸಿವೆ. ಅದರಲ್ಲೂ ಮಹಿಳೆ ತನ್ನ ಸೃಜನಶೀಲತೆಯ ಅಭಿವ್ಯಕ್ತಿಗೆ ಹರಸಾಹಸ ಮಾಡಿದ್ದು, ಮಾಡುತ್ತಿರುವುದು, ಮಾಡಬೇಕಾಗಿರುವುದು ಸತ್ಯ. ಹೀಗಿರುವಲ್ಲಿ “ನಾಟಕ’ದಂತ ಬಹುಮುಖಿ ಆಯಾಮದ ಪ್ರಕಾರವನ್ನು ಆಯ್ದುಕೊಂಡು, ಆ ಪ್ರಕಾರಕ್ಕೆ ಗಮನಾರ್ಹ ಕೊಡುಗೆ ನೀಡಿರುವ ವಿಜಯಾ ಸುಬ್ಬರಾವ್ ಅವರ ಸಾಧನೆ ಗಮನಾರ್ಹವಾದುದು.

ನಾಟಕ ಕ್ಷೇತ್ರದಲ್ಲಿ ಗುರುತರವಾದ ಕಾರ್ಯವನ್ನು ಕೈಗೊಂಡ ವಿಜಯಾ ಸುಬ್ಬರಾಜ್ ಅವರು ರಚಿಸಿರುವ ನಾಟಕಗಳಲ್ಲಿ (ಪಾಂಚಾಲಿ, ದಂಗೆ ಎದ್ದವಳು, ಪ್ರೇಮಸಮಾಧಿ, ಮತ್ತೊಂದು ಮಹಾಭಾರತ, ಮಿಲನ, ಪಾದ್ರಿಯೊಬ್ಬನ ಕತೆ, ನಗರವಧು ಸಾಲವತಿ) ಸದೃಢವಾಗಿರುವ ವಸ್ತು ಮತ್ತು ನಾವೀನ್ಯ ನಿರ್ವಹಣೆಯಿ೦ದ ಈ ಎಲ್ಲ ನಾಟಕಗಳು ಕನ್ನಡ ನಾಟಕಲೋಕಕ್ಕೆ ಅಮೂಲ್ಯ ಕಾಣ್ಕೆಗಳಾಗಿವೆ ಎನ್ನಬಹುದು. ರಂಗಶೋಧಕರಾದ ಡಾ.ಎಸ್.ಪ್ರಸಾದಸ್ವಾಮಿ ಅವರು ಗುರ್ತಿಸುವಂತೆ, “ವಿಜಯಾ ತಮ್ಮ ನಾಟಕಗಳ “ವಸ್ತು’ವಿನ ವೈವಿಧ್ಯ, ಪಾತ್ರ ವಿನ್ಯಾಸ, ಪೋಷಣೆ ಮತ್ತು ಅವುಗಳ “ವ್ಯಕ್ತಿತ್ತ’ ದರ್ಶನದಲ್ಲಿ ತೀವ್ರ ಗಮನ ಸೆಳೆಯುತಾರೆ. ನಾಟಕ ರಚನೆಯಲ್ಲಿ ಅವರಿಗೆ ಇಂಗ್ಲೀಷ್‌, ಸಂಸ್ಕೃತ, ಗ್ರೀಕ್‌ ಭಾಷೆಗಳ ಅತ್ಯುತ್ತಮ ನಾಟಕಗಳ ವಸ್ತು, ರಚನೆ, ಸಂವಿಧಾನ, ನಿರ್ವಹಣೆಗಳು ನೆರವಾಗಿವೆ; ಅರಿವಾಗಿವೆ; ವರವಾಗಿವೆ… ತಮ್ಮ ನಾಟಕಗಳಿಂದ ವಿಜಯಾ ಸುಬ್ಬರಾಜ್ ಅವರು ಕನ್ನಡದ ಅಪರೂಪದ ನಾಟಕಕಾರ್ತಿ ಎನಿಸಿದ್ದಾರೆ. ನವೋದಯ ಪೂರ್ವದ ನಾಟಕಕಾರ್ತಿಯರಾದ ತಿರುಮಲಾಂಬ, ಕಲ್ಯಾಣಮ್ಮ, ಗಿರಿಬಾಲೆ, ಶ್ಯಾಮಲಾ ಮೊದಲಾದವರು ಕನಸಿದ್ದ ವಸ್ತುವಿಗೆ ಒಂದು ರೂಪು ನೀಡಿದ ಸಾಧನೆ ವಿಜಯಾ ಅವರದ್ದು. ‘ವಸ್ತು’ ಕಡ ತಂದದ್ದೇ ಆದರೂ ‘ನಿರ್ವಚನ’ ಸ್ವಂತದ್ದು. ಸೃಜನಶೀಲತೆಯ ಇನ್ನೊಂದು ಮುಖ ‘ಅನ್ವಯ’. ವಿಜಯಾ ಅವರು ಈ ವಸ್ತುಗಳನ್ನು ಕನ್ನಡಕ್ಕೆ ಅನ್ವಯಗೊಳಿಸುವಲ್ಲಿ ಸಫಲರಾಗಿದ್ದಾರೆ.”

ನಾಟಕ ಕ್ಷೇತ್ರಕ್ಕೆ ತಮ್ಮ ಸೃಜನಶೀಲ ಕೃಷಿಯ ಮೂಲಕ ಅವಿಸ್ಮರಣೀಯ ಕೊಡುಗೆ ನೀಡಿರುವ ವಿಜಯಾ ಸುಬ್ಬರಾಜ್ ಅವರು ಸಂಶೋಧನೆಯ ಮೂಲಕವೂ ಅಮೂಲ್ಯವಾದುದನ್ನು ನೀಡಿದ್ದಾರೆ. “ಕನ್ನಡದಲ್ಲಿ ಗೀತನಾಟಕಗಳು - ಒಂದು ಅಧ್ಯಯನ” ಎಂಬುದು ಅವರ ಪಿಎಚ್‌ಡಿ ಮಹಾಪ್ರಬಂಧವಾಗಿದೆ. ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪನವರ ಮಾರ್ಗದರ್ಶನದಲ್ಲಿ ರೂಪುಗೊಂಡ ಈ ಮಹಾಪ್ರಬಂಧಕ್ಕೆ ಬೆಂಗಳೂರು ವಿಶ್ವವಿದ್ಯಾಲಯವು ಪಿಎಚ್.ಡಿ. ಪದವಿ ನೀಡಿದೆ. ಈ ಸಂಶೋಧನಾ ಕೃತಿಯು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ 1995ರಲ್ಲಿ ಮೊದಲ ಬಾರಿಗೆ ಪ್ರಕಟವಾಯಿತು; 2011ರಲ್ಲಿ ಇದರ ಎರಡನೆಯ ಆವೃತ್ತಿ ನೆಲಮೆನೆ ಪಬ್ಲಿಷಿಂಗ್ ಹೌಸಿನಿಂದ ಹೊರಬಂದಿರುವುದು ಈ ಕೃತಿಯ ಮೌಲಿಕತೆಗೆ ಸಾಕ್ಷಿಯಾಗಿದೆ. ಏಳು ಅಧ್ಯಾಯಗಳಿರುವ ಈ ಗ್ರಂಥದ ಹರಹು ವಿಶಾಲ: ಶಿವರಾಮ ಕಾರಂತ ಮತ್ತು ಪು.ತಿ.ನ. ಇವರುಗಳ ಗೀತನಾಟಕಗಳ ಸಂಪೂರ್ಣ ಅಧ್ಯಯನ ಈ ಗ್ರಂಥದ ಒಟ್ಟಾರೆ ಉದ್ದೇಶವಾದರೂ ಸಂಗೀತವನ್ನು ಪಯೋಗಿಸುವ ಸಂಸ್ಕೃತ ನಾಟಕಗಳು, ಭಾರತದ ವಿವಿಧ ಪ್ರಾಂತ್ಯಗಳಲ್ಲಿ ಜನಪ್ರಿಯವಾಗಿರುವ ಲೋಕಧರ್ಮೀ ರಂಗಪ್ರಭೇದಗಳು, ಪಾಶ್ಚಿಮಾತ್ಯ ಅಪೆರಾಗಳು-ಇತ್ಯಾದಿ ಅನೇಕ ಪ್ರದರ್ಶನ ಕಲೆಗಳ ವಿಸ್ತೃತ ಚರ್ಚೆ ಈ ಗಂಥದಲ್ಲಿದೆ. ಕನ್ನಡ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಗೀತನಾಟಕಗಳ ಬೆಳವಣಿಗೆ ಜೊತೆಗೆ ಭಕ್ತಿ ಪರಂಪರೆ, ಗೀತನಾಟಕಗಳ ಸಾಹಿತ್ಯಗುಣ, ಜಾನಪದ ರಂಗಭೂಮಿ, ರಂಗಪ್ರಯೋಗ, ಪರಿಣಾಮ ಮುಂತಾದ ವಿಷಯಗಳ ವಿವೇಚನೆ ಹಾಗೂ ವಿವರಣೆಗಳಿಂದ ಈ ಮಹಾಪ್ರಬಂಧ ಪರಿಪುಷ್ಟವಾಗಿದೆ.

ಜಾಗತಿಕವಾಗಿ ತಿಳಿದಿರುವಂತೆ, ಶ್ರವ್ಯ-ದೃಶ್ಯ ಕಲೆಗಳಲ್ಲೆಲ್ಲ ‘ನಾಟಕ’ ರೂಪವೇ ಅತ್ಯಂತ ಪರಿಪೂರ್ಣವೂ, ರಮ್ಯವೂ ಆಗಿದೆ. ನಾಟ್ಯ ಅಥವಾ ನಾಟಕವು ಕಾವ್ಯ ಸಂಗೀತ, ನೃತ್ಯ, ಶಿಲ್ಪ ಚಿತ್ರ ಇತ್ಯಾದಿ ಹಲವಾರು ಕಲಾರೂಪಗಳನ್ನು ಸಮಾವೇಶಗೊಳಿಸಿಕೂಂಡ ಸಂಕೀರ್ಣ ರೂಪವಾಗಿರುವುದೇ ಅಲ್ಲದೆ, ವಯಸ್ಸು ಬುದ್ದಿಯ ತಾರತಮ್ಯವಿಲ್ಲದೆ ಎಲ್ಲ ವರ್ಗದ ಜನರಿಗೆ ಏಕಕಾಲದಲ್ಲಿ ಅವರವರ ಮನೋಧರ್ಮ, ಸಂಸ್ಕಾರಗಳಿಗನುಗುಣವಾಗಿ ರಸಾನುಭೂತಿಯುಂಟು ಮಾಡುವುದರಿಂದ ಸರ್ವೋತ್ಕೃಷ್ಠ ಕಲಾರೂಪವೆಂಬ ಅಭಿಧಾನಕ್ಕ ಪಾತ್ರವಾಗಿದೆ. ಹೀಗಾಗಿ ನಾಟ್ಯ ಅಥವಾ ನಾಟಕ, ಸಂಗೀತ, ನೃತ್ಯ, ಚಿತ್ರ, ಶಿಲ್ಪಗಳ ರೂಪದಲ್ಲಿ ದೃಶ್ಯ ಮತ್ತು ಶ್ರವ್ಯಾಂಶಗಳೆರಡನ್ನೂ, ಒಳಗೊಂಡು, ಅನೇಕ ಪ್ರಭೇದಗಳಾಗಿ ಕವಲೊಡೆದು ಪದ್ಯ ನಾಟಕ, ಗದ್ಯ ನಾಟಕ, ನೃತ್ಯ ನಾಟಕ, ಗೀತ ನಾಟಕ ಇತ್ಯಾದಿ ಸಂಪ್ರದಾಯಗಳಾಗಿ ಮುಂದುವರೆದವು. ಕಾಲ ಮತ್ತು ಜನಾಭಿರುಚಿಗೆ ಅನುಗುಣವಾಗಿ, ನಾಟ್ಯಾಭಿವ್ಯಕ್ತಿಯ ಮಾಧ್ಯಮ ಪದ್ಯವೊ, ಗದ್ಯವೊ, ನೃತ್ಯವೊ, ಗೀತವೊ ಆಗಿ ಜನಮನ್ನಣೆಯನ್ನು ಪಡೆಯುತ್ತಲೇ ಬಂದಿದೆ. ಹೀಗೆ ಮೂಡಿಬಂದ ಗೀತನಾಟಕಗಳು ಕನ್ನಡ ರಂಗಚರಿತ್ರೆಯಲ್ಲಿ ಹೇಗೆ ತಮ್ಮದೇ ಆದ ಸ್ಥಾನಮಾನ ಸಾಧಿಸಿಕೊಂಡವು ಎಂಬುದನ್ನು ವಿಜಯಾ ಸುಬ್ಬರಾಜ್ ಅವರು ತಮ್ಮ ಸಂಶೋಧನ ಗ್ರಂಥದಲ್ಲಿ ಸಾಬೀತುಪಡಿಸಿದ್ದಾರೆ. ಒಂದು ನಿಗದಿತ ವ್ಯಾಪ್ತಿ ಹಾಗೂ ಸೂತ್ರದಲ್ಲಿ, ಕನ್ನಡದಲ್ಲಿ ಮೊದಲ ಬಾರಿಗೆ ಗೀತ ನಾಟಕಗಳ ಬೆಳವಣಿಗೆಯನ್ನು ಅವುಗಳಿಗೆ ದೊರೆತ ಪ್ರೇರಣೆ, ಪ್ರಭಾವಗಳನ್ನು ಸಾದ್ಯಂತವಾಗಿ ಶೋಧನೆಗೆ ಒಳಗು ಮಾಡಿದ್ದಾರೆ. ಇಂತಹ ಸಂಶೋಧನ ಮಹಾಪ್ರಬಂಧವನ್ನು ಕುರಿತು ಹಿರಿಯ ವಿಮರ್ಶಕರಾದ ಡಾ.ಸಿ.ಎನ್‌.ರಾಮಚಂದ್ರನ್ ಅವರು “ನೃತ್ಯ-ಗೀತ-ನಾಟಕ ಗೀತನಾಟಕಗಳ ಬಗ್ಗೆ ಕನ್ನಡದಲ್ಲಿ ಬಂದಿರುವ ಪ್ರಥಮ ಹಾಗೂ ವಿದ್ವತ್ಪೂರ್ಣ ಆಕರಗ್ರಂಥವೆಂದು ನಿಸಂಶಯವಾಗಿ ಹೇಳಬಹುದು” ಎಂದಿರುವುದು ವಿಜಯಾ ಸುಬ್ಬರಾಜ್ ಅವರ ಸಂಶೋಧನ ಕಾರ್ಯದ ಘನತೆಗೆ ಸಾಕ್ಷಿಯಾಗಿದೆ.

ಪ್ರಸ್ತುತ ಆಯ್ದುಕೊಂಡಿರುವ ಸಂಶೋಧನ ಬರೆಹವು ವಿಜಯಾ ಸುಬ್ಬರಾಜ್ ಅವರು ಈ ಸಂಶೋಧನ ಮಹಾಪ್ರಬಂಧದ ಮೊದಲನೆಯ ಅಧ್ಯಾಯವಾಗಿದೆ. ಭಾರತೀಯ ರಂಗಭೂಮಿಯ ಇತಿಹಾಸವನ್ನು ಭ್ರೂಣಾವಸ್ಥೆಯಿ೦ದ ಗಮನಿಸುತ್ತಾ ಬಂದಾಗ ಸಂಗೀತ ಪ್ರತಿಯೊಂದು ಬೆಳವಣಿಗೆಯ ಹಂತದಲ್ಲೂ ಉಪಯೋಗವಾಗುತ್ತಿದ್ದುದು ಕಂಡುಬರುತ್ತದೆ. ‘ನಾಟಕ’ ಧಾರ್ಮಿಕ ಪ್ರವೃತ್ತಿಯ ಹಿನ್ನೆಲೆಯಲ್ಲಿ ಬೆಳೆದು ಬಂದ ಕಲೆಯಾದ್ದರಿಂದ, ಗಾಯನ ನರ್ತನಗಳು ಅದರ ಅವಿಭಾಜ್ಯ ಅಂಗವಾದ್ದರಿಂದ, ಕಥೆಯ ನಿರ್ವಹಣೆಗೆ ಇವು ಅನಿವಾರ್ಯವಾದ್ದರಿಂದ ಸಂಗೀತ ನಾಟ್ಯದಿ೦ದ ಬೇರೆಯಾಗಿ ಕಳಚಿ ಉಳಿಯದೆ, ಅದು ನಾಟಕದ ಸಂಪ್ರದಾಯದ ಪ್ರಮುಖ ಲಕ್ಷಣವೋ ಎಂಬಂತೆ ಅದರೊಂದಿಗೆ ಬೆಳೆಯುತ್ತಾ ಬಂದು ಗೀತನಾಟಕಗಳು ರಂಗಭೂಮಿಗೆ ಪ್ರವೇಶ ಪಡೆದ ಸಂಗತಿಯನ್ನು ಅಧ್ಯಾಯಲ್ಲಿ ಅನೇಕ ಆಧಾರಗಳಿಂದ ಪ್ರಸ್ತುತಪಡಿಸಿರುವುದು ಕಾಣುತ್ತದೆ. ಯಾವುದೇ ಸಂಶೋಧನಯಾನದಲ್ಲಿ ವಸ್ತು-ಪರಿಕಲ್ಪನೆ ಸಂಬಂಧವಾಗಿ ಇರಬೇಕಾದ ಸದೃಢ ಶೋಧನೆ-ನಿರೂಪಣೆ ಹಾಗೂ ಖಚಿತತೆ-ನಿಶಿತತೆಗೆ ಮಾದರಿಯಾಗಿದೆ.

References

A.B. Keith. The Sankrit Drama. Page. 14

ಅದೇ. ಪು.ಸಂ. 15

ಅದೇ. ಪು.ಸಂ. 15

ಅದೇ. ಪು.ಸಂ. 23

ಅದೇ. ಪು.ಸಂ. 26

ಅದೇ. ಪು.ಸಂ. 28

ಅದೇ. ಪು.ಸಂ. 28

ಅದೇ. ಪು.ಸಂ. 28

ಅದೇ. ಪು.ಸಂ. 29

ಅದ್ಯರಂಗಾಚಾರ್. ಭಾರತೀಯ ರಂಗಭೂಮಿ. ಪು.ಸಂ. 69‌

A.B. Keith. The Sankrit Drama. Page. 30

ಅದೇ

ಕೃಷ್ಣಮಾಚಾರಿಯಾರ್. History of Sanskrit Literature. P. 541

ಅದೇ

A.B. Keith-Qtd. The Sankrit Drama. Page. 269

ಅದೇ

Indushekhar. Sanskrit Drama. P. 90

ಅದೇ. ಪು.ಸಂ. 83

ಅದೇ. ಪು.ಸಂ. 83

ನರಸಿಂಹ ಶಾಸ್ತ್ರಿ. ಭರತನ ನಾಟ್ಯ ಶಾಸ್ತ್ರ (ಅನು.) - ಅ.-1, ಶ್ಲೋಕ : 115

ಆದ್ಯರಂಗಾಚಾರ್. ಭಾರತೀಯ ರಂಗಭೂಮಿ. ಪುಟ: 70

G. Vander Leeuw-ಉದ್ದೈತ: Indushekhar-Sanskrit Drama and its origin: Page: 47

P. V. Kane. History of Sanskrit Peotics. P. 58

ಕೆ.ಎಲ್. ನರಸಿಂಹಶಾಸ್ತ್ರಿ. ಭರತನ ನಾಟ್ಯಶಾಸ್ತ್ರ (ಅನು)-ಪುಟ : 49 ಅ.5, ಶ್ಲೋಕ :163-ಪುಟ: 182

ಎ.ಆರ್. ಕೃಷ್ಣಶಾಸ್ತ್ರಿ. ಸಂಸ್ಕೃತ ನಾಟಕ-ಪೀಠಿಕೆ. ಪುಟ: 10

George Thomson. Marxism and Poetry. Page. 22

Hegel. Philosophy of Fine Art: Vol-III. Page. 352

Joseph Kerman. Opera as Drama. Page. 13

Kunjan Nambiar. ʼKathakalil and Dance Dramaʼ-Qtd. Readings on Music-Ed: Gauri Kuppaswamy

ಎ.ಆರ್. ಕೃಷ್ಣಶಾಸ್ತ್ರಿ-ಸಂಸ್ಕೃತ ನಾಟಕ-ಪುಟ :೨೨

ಶಾರ್ಙ್ಗದೇವ. ʼಸಂಗೀತ ರತ್ನಾಕರʼ. (ಅನು) ಆರ್. ಸತ್ಯನಾರಾಯಣ. ಸ್ವರಗತಾಧ್ಯಾಯ. ಪುಟ: 9

ಅದೇ. ಪುಟ: 22

ಧುಂಡಿರಾಜ ಶಾಸ್ತ್ರಿ. ಉದ್ಧೃತ. ಸಂಗೀತ ರತ್ನಾಕರ. (ಅನು.) ಆರ್. ಸತ್ಯನಾರಾಯಣ. ಪುಟ: 23

ಆರ್. ಸತ್ಯನಾರಾಯಣ. ʼಸಂಗೀತ ರತ್ನಾಕರʼ. (ಅನು). ಉದ್ದೈತ. ಪುಟ: 28

Indushekhar. Sanskrit Drama & its origin. Page: 83

George Thomson. Marxism & Poetry. Page: 37

Manmohan Ghosh. Natya Sastra (Tr.)-Vol-II-ch. 28. Page: 1 & 2

ಡಾ|| ವಿ. ರಾಘವನ್.‌ Qtd. Tarlekar. Studies in Natya Sastra. Page: 145

ಕೆ. ಎಲ್. ನರಸಿಂಹಶಾಸ್ತ್ರಿ. ಭರತನ ನಾಟ್ಯಶಾಸ್ತ್ರ (ಅನು). ಅ. 4, ಶ್ಲೋಕ: 273-276. ಪುಟ: 130-131

ಅದೇ

ಅದೇ. ಅಧ್ಯಾಯ 4. ಶ್ಲೋಕ: 280. ಪುಟ: 132

ಅದೇ. ಅಧ್ಯಾಯ 4. ಶ್ಲೋಕ: 285. ಪುಟ: 132

ಅದೇ. ಅಧ್ಯಾಯ 5. ಶ್ಲೋಕ: 12-15. ಪುಟ: 146

Prof. P. Sambamurthy. Historical Development of Indian Music

Tarlekar. Studies in Natya Sastra. Page: 172

Manmohan Ghosh. Natya Sastra-Vol. II-Ch. 32. Page: 11

Tarlekar. Studies in Natya Sastra. Page: 178

Deshpande. Music in Sanskrit Drama-Readings on Music. Page: 189

ಅದೇ

Indushekhar. Sanskrit Drama and its origin. Page: 139

Tarlekar. Studies in Natya Sastra. Page: 179

Dr. V. Raghavan-Qtd. Tarlekar. Studies in Natya Sastra. Page: 179-80

Abhinavaguptha-Qtd. Tarlekar. Studies in Natya Sastra. Page: 180

Hemachandra-Qtd. Tarlekar. Studies in Natya Sastra. Page: 180

Tarlekar. Studies in Natya Sastra. Page: 181

K. V. Ramachandran. Music & Dance in Kalidasa-Qtd. Tarlekar. Studies in Natya Sastra. Page: 181

T. S. Eliot-Qtd. George Cattul-‘T. S. Eliot’. Page: 88

Ibid

Ibid

ಕಾಳಿದಾಸ. ಮಾಲವಿಕಾಗ್ನಿ ಮಿತ್ರ-ಅಂಕ: 1. ಪದ್ಯ: 4

ಕೆ. ಎಲ್. ನರಸಿಂಹಶಾಸ್ತ್ರಿ. ಭರತನ ನಾಟ್ಯ ಶಾಸ್ತ್ರ (ಅನು): ಅಧ್ಯಾಯ 6, ಶ್ಲೋಕ: 10. ಪುಟ: 201

ಎ. ಆರ್. ಕೃಷ್ಣಶಾಸ್ತ್ರಿ. ಸಂಸ್ಕೃತ ನಾಟಕ: ಪೀಠಿಕೆ. ಪುಟ: 28

ಆದ್ಯರಂಗಾಚಾರ್. ಭಾರತೀಯ ರಂಗಭೂಮಿ. ಪುಟ: 69, 70, 71

ವರದಾವಚಾರಿ. ಉದ್ಧೃತ. History of Sanskrit Literature (Krishnamachari). Page: 134

Indushekhar. Sanskrit Drama & its Origin. Page: 140

Mahabhashya-Qtd. History of Sanskrit Literature (Krishnamachari). Page: 541

Indushekhar. Sanskrit Drama & its Origin.

S. K. De. History of Sanskrit Drama Literature-Qtd. Indushekhar. Sanskrit Drama & its Origin. Page: 140

Downloads

Published

02.10.2024

How to Cite

ಎಂ. ಭೈರಪ್ಪ, & ವಿಜಯಲಕ್ಷ್ಮೀ ಸುಬ್ಬರಾವ್. (2024). ಗೀತನಾಟಕ ಪ್ರವೇಶ: ಸಂಸ್ಕೃತ ನಾಟಕ ಮತ್ತು ನಾಟಕದಲ್ಲಿ ಸಂಗೀತ. AKSHARASURYA, 5(01), 01 to 32. Retrieved from https://aksharasurya.com/index.php/latest/article/view/504

Issue

Section

ಹಿಂದಣ ಹೆಜ್ಜೆ. | TRODDEN PATH

Most read articles by the same author(s)