ದಿವಾಕರ ಬಲ್ಲಾಳರ ‘ಸವೆದ ಹಾದಿಯ ಪಯಣ’: ಗಡಿನಾಡ ಪ್ರತಿಭೆಯ ಕನ್ನಡ ಪ್ರಜ್ಞೆಯ ದ್ಯೋತಕ
Keywords:
ಅಧ್ಯಾತ್ಮ, ರಾಷ್ಟ್ರೀಯತೆ, ನಾಡು-ನುಡಿ, ಪ್ರಜಾಪ್ರಭುತ್ವ, ನೀತಿಸೂಕ್ತ, ಕರ್ತವ್ಯಪ್ರಜ್ಞೆAbstract
ಕೇರಳ ರಾಜ್ಯದ ಕಾಸರಗೋಡು ಜಿಲ್ಲೆ ಬಹುಭಾಷಾ ಸಂಗಮ ಭೂಮಿ. ತುಳು, ಕನ್ನಡ, ಕೊಂಕಣಿ, ಮರಾಠಿ, ಮಲೆಯಾಳ, ಬ್ಯಾರಿ, ಮಾವಿಲತುಳು, ಹವ್ಯಕ, ಕರಾಡ ಮುಂತಾದ ಅನೇಕ ಭಾಷೆಗಳನ್ನಾಡುವ ಜನರಿದ್ದಾರೆ. ಆದರೆ ಇವರ ಓದಿನ ಭಾಷೆ ಕನ್ನಡ. ಆದ್ದರಿಂದ ಇವರು ಕನ್ನಡ ತಾಯಿಯ ಮಕ್ಕಳು. ಕನ್ನಡ ಭಾಷೆ, ಆಚಾರ, ವಿಚಾರ, ಸಂಸ್ಕೃತಿಗಳಿಗೆ ಹೊಂದಿಕೊಂಡು ಕಾಸರಗೋಡಿನಲ್ಲಿ ತಲೆತಲಾಂತರದಿಂದ ಬಾಳಿ ಬದುಕುತ್ತಾ ಬಂದಿದ್ದಾರೆ. ಇಲ್ಲಿ ಕನ್ನಡ ಮತ್ತು ತುಳು ಭಾಷೆಗಳು ಒಂದೇ ನಾಣ್ಯದ ಎರಡು ಮುಖಗಳಂತಿವೆ.
ದಿವಾಕರ ಬಲ್ಲಾಳ್ ಎ. ಬಿ. ಗಡಿನಾಡ ಕನ್ನಡಿಗ. ಕೇರಳ ರಾಜ್ಯದ ಮಂಜೇಶ್ವರ ತಾಲೂಕು ಕುಂಜತ್ತೂರಿನ ಸರಕಾರಿ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕನ್ನಡ ಅಧ್ಯಾಪಕ. ವಿದ್ಯಾರ್ಥಿ ಜೀವನದಿಂದಲೇ ನಾಟ್ಯ, ನಾಟಕ, ಗಮಕ, ಗಾಯನ, ಯಕ್ಷಗಾನಗಳಲ್ಲಿ ತೊಡಗಿಸಿಕೊಂಡ ಬಹುಮುಖ ಪ್ರತಿಭೆ. ಇದರ ಜೊತೆಗೆ ಕವನ ಬರೆದು ಒಡಲಿನ ಸಾಹಿತ್ಯದ ಹಸಿವನ್ನು ನೀಗಿಸಿಕೊಂಡು ತೃಪ್ತಿ ಪಡೆಯುವ ಭಾವಜೀವಿ, ಯುವಕವಿ.
ಇದು ಹೊಗಳಿಕೆಯ ಮಾತಲ್ಲ. ತನ್ನೊಳಗಿನ ಭಾವ ತೀವ್ರತೆಯನ್ನು ಪ್ರಕಟಪಡಿಸಿದ ‘ಸವೆದ ಹಾದಿಯ ಪಯಣ’ ಕವನ ಸಂಕಲನ ಇದಕ್ಕೆ ಸಾಕ್ಷಿ.
References
ಬಲ್ಲಾಳ್ ಎ.ಬಿ., (2023), ಸವೆದ ಹಾದಿಯ ಪಯಣ, ಕಲಾಶ್ರೀ, ಮಂಗಳೂರು.
ಧನಂಜಯ ಕುಂಬ್ಳೆ, ಆನಂದ ಯಂ. ಕಿದೂರು (ಸಂ), (2022), ಪಾವಂಜೆ ಗುರುರಾಯರು ಸಂಪಾದಿಸಿರುವ ಕನಕದಾಸರ ಕೀರ್ತನೆಗಳು, ಕನಕದಾಸ ಅಧ್ಯಯನ ಪೀಠ, ಕನಕದಾಸ ಸಂಶೊಧನ ಕೇಂದ್ರ, ಮಂಗಳೂರು ವಿಶ್ವವಿದ್ಯಾನಿಲಯ, ಮಂಗಳಗಂಗೋತ್ರಿ.
ಬಸವರಾಜ ಸಬರದ, (2003), ಸಮಗ್ರ ದಾಸ ಸಾಹಿತ್ಯ: ಸಂಪುಟ-3; ಭಾಗ-2; ಪುರಂದರ ದಾಸರ ಕೀರ್ತನೆಗಳು, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು.
Downloads
Published
How to Cite
Issue
Section
License
Copyright (c) 2025 ಅಕ್ಷರಸೂರ್ಯ (AKSHARASURYA)

This work is licensed under a Creative Commons Attribution 4.0 International License.