ಚಾರಿತ್ರಿಕ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಮತ್ತು ಲಿಪಿಯ ಹುಟ್ಟು

Authors

  • ಭವ್ಯ ಆರ್. ಸಂಶೋಧನಾ ವಿದ್ಯಾರ್ಥಿ, ಇತಿಹಾಸ ವಿಭಾಗ, ಮೈಸೂರು ವಿಶ್ವವಿದ್ಯಾನಿಲಯ, ಮಾನಸ ಗಂಗೋತ್ರಿ, ಮೈಸೂರು.

Keywords:

ಪುನ್ನಾಟ, ಕದಂಬರು, ಗಂಗರು, ಕವಿರಾಜ ಮಾರ್ಗಕಾರ, ಡಿ.ಸಿ. ಸರ್ಕಾರ್

Abstract

ಕನ್ನಡ ಭಾಷೆಗೆ ಪ್ರಭುತ್ವದ ಹಿನ್ನೆಲೆ ಲಭಿಸಿದ ಕಾರಣದಿಂದಲೇ ಅದು ಆಡಳಿತ ಭಾಷೆಯಾಗಿ ರೂಪ ಪಡೆಯಲು ಅನೇಕ ಮಜಲುಗಳನ್ನು ದಾಟಿ ತನ್ನ ಸಾಂಸ್ಕೃತಿವಾದ ಹಿನ್ನೆಲೆಯ ಜೊತೆಗೆ ಮೇಳೈಸಿಕೊಂಡು ಲಿಪಿ ಸಹಿತ ಭಾಷೆಯಾಗಿ ಬಳಕೆಗೆ ಬರಬೇಕಾದರೆ ಸಾವಿರಾರು ವರ್ಷಗಳ ಬೆಳವಣಿಗೆಯನ್ನು ತನ್ನ ಒಡಲೊಳಗೆ ಹೊಂದಿರುತ್ತದೆ. ಪುನ್ನಾಟ, ಕದಂಬರು ಮತ್ತು ಗಂಗರು ಸಂಸ್ಕೃತ ಮತ್ತು ಕನ್ನಡ ಭಾಷೆಯನ್ನು ಬಳಸುವಲ್ಲಿ ಮಿಶ್ರ ರೂಪಿನ ಬಳಕೆಯನ್ನು ರೂಢಿಗೆ ತಂದರು. ಇಂದಿನ ನಗರ ವಾಸಿ ಜನ ಮಾತಿನಲ್ಲಿ ಕನ್ನಡ ಇಂಗ್ಲೀಷ್‌ ಬೆರಸಿ ಮಾತನಾಡುವಂತೆ ಅಂದಿನ ರಾಜ ಪ್ರಭುತ್ವದ ಭಾಷೆಯಲ್ಲಿ ಬರವಣಿಗೆಯಲ್ಲಿ ಕನ್ನಡ ಮತ್ತು ಸಂಸ್ಕೃತ ಪದಗಳ ಮಿಶ್ರಣಗೊಂಡು ರಚಿತವಾದ ಭಾಷೆಗಳನ್ನು ಗಮನಿಸಬಹುದು. ಆ ಕಾಲಕ್ಕಾಗಲೇ ಪ್ರಾಕೃತದ ಪ್ರಭಾವ ಕುಗ್ಗಿ ಅದರ ಸ್ಥಾನವನ್ನು ಸಂಸ್ಕೃತ ಪಡೆದುಕೊಳ್ಳುವ ಸರಿಸುಮಾರು ಕಾಲದಲ್ಲಿ – ಅಂದರೆ ೪ನೆಯ ಶತಮಾನದ ಆರಂಭದಲ್ಲಿನ ಸಂದರ್ಭದಲ್ಲಿ ಬ್ರಾಹ್ಮಿಸ್ಥಾನವನ್ನು ಕನ್ನಡಲಿಪಿ ಪಡೆದುಕೊಳ್ಳಲು ಮುಂದಾಗಿದ್ದುದನ್ನು ಚಾರಿತ್ರಿಕವಾಗಿ ಗುರುತಿಸಬಹುದು. ಕದಂಬರು ಸಂಸ್ಕೃತ ಭಾಷೆಯಲ್ಲಿ ಶಾಸನಗಳನ್ನು ಬರೆಸತೊಡಗಿದಾಗ ನೆಟ್ಟಿಗೆ ತಲೆಕಟ್ಟಿನ ದಕ್ಷಿಣ ಲಿಪಿಯನ್ನು ಅವರು ಬಳಸಿದರು. ಈ ಲಿಪಿಗೂ ಕನ್ನಡಲಿಪಿಗೂ ಗಾಢಸಂಬಂಧವಿದೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಟ್ಟರೆ, ಅದು ತುಂಬಾ ಗೌಣವೆಂದು ಇನ್ನು ಕೆಲವರು ವಾದಿಸಿರುವರು. ಇದು ಏನೇ ಇರಲಿ, ಪುನ್ನಾಟರು ಕನ್ನಡ ಲಿಪಿಯಲ್ಲಿ ಬರೆಸಿದ ಮೂರು ಶಾಸನಗಳಲ್ಲಿ ಒಂದು ಪೂರ್ಣ ಸಂಸ್ಕೃತ ಭಾಷೆಯಲ್ಲಿದ್ದರೆ ಇನ್ನೆರಡು ಕನ್ನಡ ಪದಗಳನ್ನು ಪೋಣಿಸಿಕೊಂಡ ಅಶುದ್ಧ ಸಂಸ್ಕೃತದಲ್ಲಿವೆ. ಇದೇ ನಮೂನೆಯನ್ನು ಕದಂಬರ, ಗಂಗರ ಶಾಸನದಲ್ಲಿ ಕಾಣಬಹದುದಾಗಿದೆ.

References

ಗೋಪಾಲ್ ಬಿ. ಆರ್. & ನಾಯಕ್‌ ಹ. ಮಾ. (ಸಂ). (1979). ಬೃಹತ್‌ ಕರ್ನಾಟಕ, ಕರ್ನಾಟಕ ವಿಷಯ ವಿಶ್ವಕೋಶ. ಮೈಸೂರು ವಿಶ್ವವಿದ್ಯಾಲಯ. ಮೈಸೂರು.

Sircar D. C. (1959). Kannadigas outside Karnataka down the ages.’ Studies in Education and Culture D. C. Pavate Felicitation Volume. Diamond Jubilee Celebration.

ಶೆಟ್ಟರ್ ಷ. (2010). ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ. ಅಭಿನವ. ಬೆಂಗಳೂರು.

Downloads

Published

13.08.2024

How to Cite

ಭವ್ಯ ಆರ್. (2024). ಚಾರಿತ್ರಿಕ ಹಿನ್ನೆಲೆಯಲ್ಲಿ ಕನ್ನಡ ಭಾಷೆ ಮತ್ತು ಲಿಪಿಯ ಹುಟ್ಟು. AKSHARASURYA, 4(05 (special Issue), 75 to 84. Retrieved from https://aksharasurya.com/index.php/latest/article/view/476