ಸಾಲಿ ವೆಂಕಣ್ಣಯ್ಯರ ‘ಗಿರಿಜಾಕಲ್ಯಾಣ’ ಯಕ್ಷಗಾನ ಕಾವ್ಯ ಒಂದು ಪಕ್ಷಿನೋಟ

Authors

  • ಎಂ. ಮಹಾದೇವಪ್ರಭು ಸಹ ಪ್ರಾಧ್ಯಾಪಕರು, ಕನ್ನಡ ವಿಭಾಗ, ಶ್ರೀ ಮಹದೇಶ್ವರ ಸ.ಪ್ರ.ದ.ಕಾಲೇಜು, ಕೊಳ್ಳೇಗಾಲ.

Keywords:

ಸಾಲಿವೆಂಕಣ್ಣಯ್ಯ, ಗಿರಿಜಾ ಕಲ್ಯಾಣ, ಬಯಲಾಟ, ಕಥೆಯ ನಿರೂಪಣೆ, ಹರಿಹರನ ಮೂಲ

Abstract

ಗಿರಿಜಾ ಕಲ್ಯಾಣ ಕಥೆಯು ಪುರಾಣ ಪ್ರಸಿದ್ಧವಾಗಿದೆ. ಸುಮಾರು 15 ಪುರಾಣಗಳಲ್ಲಿ ಅಲ್ಪ ಸ್ವಲ್ಪ ಮರ್ಪಾಡುಗಳಲ್ಲಿ ಕಂಡುಬರುವ, ಶಿವ ಪಾರ್ವತಿಯರ ವಿವಾಹ ವಸ್ತುವಿರುವ ಈ ಕಥೆಯನ್ನು ಕುರಿತು ಕಾಳಿದಾಸನು ಸಂಸ್ಕೃತದಲ್ಲಿ ಕುಮಾರಸಂಭವನ್ನು, ಕನ್ನಡದಲ್ಲಿ ಹರಿಹರ ಕವಿಯು ಗಿರಿಜಾಕಲ್ಯಾಣವನ್ನು ಬರೆದು ಪ್ರಸಿದ್ಧಗೊಳಿಸಿದ್ದಾರೆ. ಹಾಗೆಯೇ ಕನ್ನಡ ಸಾಹಿತ್ಯದ ತ್ರಿಪದಿ, ಷಟ್ಪದಿ, ಸಾಂಗತ್ಯ ಮುಂತಾಗಿ ಹಲವು ಪ್ರಕಾರಗಳಲ್ಲಿಯಲ್ಲದೆ ಜನಪದರ ಹಾಡು ಕಥೆಗಳಲ್ಲಿಯೂ, ಯಕ್ಷಗಾನ ಬಯಲಾಟಗಳ ರೂಪದಲ್ಲಿಯೂ ರಚನೆಯಾಗಿವೆ. ಈ ನಿಟ್ಟಿನಲ್ಲಿ ಸಾಲಿವೆಂಕಣ್ಣಯ್ಯರೂ ಕೂಡ ಯಕ್ಷಗಾನ ಬಯಲಾಟ ಪ್ರಕಾರದಲ್ಲಿ ಈ ಕಥೆಯನ್ನು ಬರೆದಿದ್ದಾರೆ. ಅವರ ಕಿರು ಪರಿಚಯದೊಂದಿಗೆ ಅವರ ಗಿರಿಜಾಕಲ್ಯಾಣ ಯಕ್ಷಗಾನ ಕೃತಿಯನ್ನು ಪರಿಚಯಿಸುವುದು ಮತ್ತು ಹರಿಹರನ ಗಿರಿಜಾಕಲ್ಯಾಣದೊಂದಿಗೆ ಈ ಕೃತಿಗೆ ಇರುವ ಆಕರಗಳನ್ನು ಪರಿಶೀಲಿಸುವುದು ಈ ಲೇಖನದ ಆಶಯವಾಗಿದೆ.

References

ದುರ್ಗಾದಾಸ್ ಕೆ. ಆರ್. & ನಾಗರಾಳ ಎಚ್. ಎಸ್. (ಸಂ.). (1995). ಸಾಲಿ ವೆಂಕಣ್ಣಯ್ಯ ಕೃತ ಗಿರಿಜಾ ಕಲ್ಯಾಣ ಬಯಲಾಟ. ಬೆಳಗಾವಿ.

ಹರಿಹರ. ನಂಜುಂಡಾರಾಧ್ಯ ಎಂ. ಜಿ. (ಗದ್ಯಾನುವಾದ). (2004). ಗಿರಿಜಾಕಲ್ಯಾಣ ಮಹಾಪ್ರಬಂಧ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

ಪಂಡಿತ ವೆಂಕಟರಾವ್. (1945). ಶಿವಮಹಾಪುರಾಣ: ಭಾಗ-4 ರುದ್ರಸಂಹಿತಾ ಪಾರ್ವತೀಖಂಡ. ಜಯಚಾಮರಾಜೇಂದ್ರ ಗ್ರಂಥಮಾಲ. ಮೈಸೂರು.

Downloads

Published

13.08.2024

How to Cite

ಎಂ. ಮಹಾದೇವಪ್ರಭು. (2024). ಸಾಲಿ ವೆಂಕಣ್ಣಯ್ಯರ ‘ಗಿರಿಜಾಕಲ್ಯಾಣ’ ಯಕ್ಷಗಾನ ಕಾವ್ಯ ಒಂದು ಪಕ್ಷಿನೋಟ. AKSHARASURYA, 4(05 (special Issue), 24 to 34. Retrieved from https://aksharasurya.com/index.php/latest/article/view/470