ಮಕ್ಕಳ ಸಾಹಿತ್ಯದಲ್ಲಿ ಶಿಷ್ಟ ಭಾಷಾ ಬಳಕೆಯ ಪರಂಪರೆ - ಸಂವಹನ

Main Article Content

ಗಂಗಯ್ಯ ಬಿ.ಎಸ್.

Abstract

ಕನ್ನಡ ಮಕ್ಕಳ ಸಾಹಿತ್ಯದ ಉಗಮ ಮತ್ತು ವಿಕಾಸವನ್ನು ಅವಲೋಕಿಸಿದಾಗ, ಆರಂಭದಿಂದಲೂ ಶಿಷ್ಟ ಕನ್ನಡದ ಬಳಕೆಯೇ ಪ್ರಧಾನವಾಗಿ ಕಂಡುಬರುತ್ತದೆ. ಕರ್ನಾಟಕದ ವಿವಿಧ ಪ್ರಾದೇಶಿಕ ಹಿನ್ನೆಲೆಯ ಮಕ್ಕಳಿಗೆ ಸಾಹಿತ್ಯವು ಸುಲಭವಾಗಿ ಅರ್ಥವಾಗಬೇಕು ಮತ್ತು ಸಂವಹನ ಪರಿಣಾಮಕಾರಿಯಾಗಿರಬೇಕು ಎಂಬ ಉದ್ದೇಶವೇ ಈ ಏಕರೂಪದ ಭಾಷಾ ಶೈಲಿಗೆ ಮುಖ್ಯ ಕಾರಣವಾಗಿದೆ. ಮುದ್ರಣ ಮಾಧ್ಯಮದ ಬೆಳವಣಿಗೆ ಮತ್ತು ಶೈಕ್ಷಣಿಕ ಪಠ್ಯಕ್ರಮಗಳು ಈ ಪ್ರಮಾಣ ಭಾಷೆಯ ಬಳಕೆಯನ್ನು ಮತ್ತಷ್ಟು ಗಟ್ಟಿಗೊಳಿಸಿವೆ. ಪಂಜೆ ಮಂಗೇಶರಾಯರು, ಕುವೆಂಪು ಮುಂತಾದವರಿಂದ ಹಿಡಿದು ಸಮಕಾಲೀನ ಲೇಖಕರವರೆಗೆ, ಪ್ರಾದೇಶಿಕ ಭಾಷಾ ವೈವಿಧ್ಯತೆಯ ನಡುವೆಯೂ ಎಲ್ಲರಿಗೂ ತಲುಪುವ ದೃಷ್ಟಿಯಿಂದ ಶಿಷ್ಟ ಮಾದರಿಯನ್ನೇ ಅನುಸರಿಸಿಕೊಂಡು ಬಂದಿರುವ ಬಗೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಮಕ್ಕಳ ಭಾಷಾ ಜ್ಞಾನ ಮತ್ತು ಪದಕೋಶವನ್ನು ವಿಸ್ತರಿಸುವಲ್ಲಿ ಹಾಗೂ ಸಾಹಿತ್ಯಿಕ ಮೌಲ್ಯಗಳ ಪ್ರಸರಣದಲ್ಲಿ ಈ ಶಿಷ್ಟ ಭಾಷಾ ಪರಂಪರೆಯು ನಿರ್ಣಾಯಕ ಪಾತ್ರ ವಹಿಸುತ್ತದೆ.

Article Details

Section

Research Articles

Author Biography

ಗಂಗಯ್ಯ ಬಿ.ಎಸ್.

ಸಹಾಯಕ ಪ್ರಾಧ್ಯಾಪಕರು, ಕನ್ನಡ ವಿಭಾಗ, ಕೃಪಾನಿಧಿ ವಾಣಿಜ್ಯ ಮತ್ತು ನಿರ್ವಹಣಾ ಕಾಲೇಜು, ಬೆಂಗಳೂರು.

How to Cite

ಗಂಗಯ್ಯ ಬಿ.ಎಸ್. (2026). ಮಕ್ಕಳ ಸಾಹಿತ್ಯದಲ್ಲಿ ಶಿಷ್ಟ ಭಾಷಾ ಬಳಕೆಯ ಪರಂಪರೆ - ಸಂವಹನ. ಅಕ್ಷರಸೂರ್ಯ (AKSHARASURYA), 12(06), 69 to 76. https://aksharasurya.com/index.php/latest/article/view/468

References

ಆನಂದ ವಿ. ಪಾಟೀಲ, (2010), ಕನ್ನಡ ಮಕ್ಕಳ ಸಾಹಿತ್ಯದಲ್ಲಿ ಇತ್ತೀಚಿನ ಒಲವುಗಳು, ಹಂಪಿ: ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ.

ನಾಗರಾಜ ಶೆಟ್ಟಿ ಟಿ.ಎಸ್., (1996), ಸಮಗ್ರ ಮಕ್ಕಳ ಕವಿತೆಗಳು, ತಿಪಟೂರು: ನಿರ್ಮಲ ಪ್ರಕಾಶನ.

ಪಳಕಳ ಸೀತಾರಾಮ ಭಟ್ಟ, (2007), ಪಳಕಳರ ಆಯ್ದ ಕವನಗಳು, ಕಿನ್ನಗೋಳಿ: ಯುಗಪುರುಷ ಪ್ರಕಟಣಾಲಯ.

ಪಂಜೆ ಮಂಗೇಶರಾಯ, (2015), ಪಂಜೆ ಮಂಗೇಶರಾಯ ಮಕ್ಕಳ ಕಥೆಗಳು, ಬೆಂಗಳೂರು: ಅಂಕಿತ ಪ್ರಕಾಶನ.

ಪಂಜೆ ಮಂಗೇಶರಾಯ, (2015), ಪಂಜೆ ಮಂಗೇಶರಾಯ ಮಕ್ಕಳ ಕಾವ್ಯಗಳು, ಬೆಂಗಳೂರು: ಅಂಕಿತ ಪ್ರಕಾಶನ.

ಲಕ್ಷ್ಮೀನಾರಾಯಣ ಭಟ್ಟ ಎನ್.ಎಸ್., (2005), ಭಾಳ ಒಳ್ಳೇವ್ರ ನಮ್ ಮಿಸ್ಸು, ಬೆಂಗಳೂರು: ಅಂಕಿತ ಪ್ರಕಾಶನ.

ವಿವಿಧ ಲೇಖಕರು, (1992), ಮಕ್ಕಳ ಸಾಹಿತ್ಯ ಸ್ವರೂಪ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ಶ್ರೀನಿವಾಸರಾವ್ ಎಸ್.ವಿ., (2006), ಮಕ್ಕಳ ಸಾಹಿತ್ಯದ ನೆಲೆ ಬೆಲೆ, ಬೆಂಗಳೂರು: ಕನ್ನಡ ಸಾಹಿತ್ಯ ಪರಿಷತ್ತು.