ಮಡಿವಾಳ ಮಾಚಿ ದೇವರವರ ಜೀವನ ಹಾಗೂ ಸಾಧನೆ

Authors

  • ವಾಣಿ ಡಿ. ಎಸ್. ಸಹಾಯಕ ಪ್ರಾಧ್ಯಾಪಕಿ, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಸಿದ್ದಾಪುರ, ಕುಮಟಾ ರಸ್ತೆ, ಉತ್ತರ ಕನ್ನಡ.

Keywords:

ಸಮತಾ ತತ್ವ, ವರ್ಣಾಶ್ರಮ, ಲಕ್ಷಿತ-ಅಲಕ್ಷಿತ, ದೇವಾಂಶ ಸಂಭೂತ, ವೀರಘಂಟೆ, ಕುಚೋದ್ಯ

Abstract

ಹನ್ನೆರಡನೇ ಶತಮಾನ ಭಾರತೀಯ ಹಾಗೂ ಕರ್ನಾಟಕದ ಇತಿಹಾಸದಲ್ಲಿ ಬಹುಮುಖ್ಯ ಕಾಲಘಟ್ಟ. ಆ ಕಾಲದ ಶಿವಶರಣರು ಜೀವನದ ಹೊಸ ಮೌಲ್ಯಗಳನ್ನು ಎತ್ತಿ ಹಿಡಿದು ವರ್ಣಾಶ್ರಮ, ಧರ್ಮಗಳ ಹಂಗನ್ನು ಕಿತ್ತು ಬಿಸುಟು ಸಮತಾ ತತ್ವದ ತಳಹದಿಯ ಮೇಲೆ ಸಮಾಜವನ್ನು ನಿರ್ಮಿಸಲು ಹೆಣಗಿದವರು. ಸೃಷ್ಟಿಯಲ್ಲಿ ಎಲ್ಲರೂ ಸಮಾನರು ಮೇಲು-ಕೀಳು, ಲಕ್ಷಿತ-ಅಲಕ್ಷಿತ, ಸ್ತ್ರೀ-ಪುರುಷರೆಂಬ ಬೇಧ ಭಾವವಿಲ್ಲ ಎಂಬ ತತ್ವವನ್ನು ಬೋಧಿಸಿ ತಮ್ಮದೇ ಆದ ವಿಶಿಷ್ಟ ಧರ್ಮವನ್ನು ಬಸವಾದಿ ಪ್ರಮಥರು ಸಾಧಿಸಿದರು. ತಮ್ಮ ವೃತ್ತಿಯ ಹಿನ್ನೆಲೆಯಲ್ಲಿ ವರ್ಗ, ವರ್ಣ, ಜಾತಿಗಳಿಲ್ಲದ ಸರ್ವ ಸಮಾನತೆಯ ಹೊಸ ಸಮಾಜದ ನಿರ್ಮಾಣಕ್ಕೆ ಅವರು ಶ್ರಮಿಸಿದರು. ಅಂತಹ ವಚನಕಾರ ಮತ್ತು ಕ್ರಾಂತಿಕಾರರಲ್ಲಿ ಪ್ರಮುಖರಾದವರು ಮಡಿವಾಳ ಮಾಚಿದೇವ. ಇವರು ಬಸವಣ್ಣನಂತಹ ಮಹಾನುಭಾವರೊಂದಿಗೆ ಜೊತೆಗೂಡಿ ಸಮಾಜವನ್ನು ತಿದ್ದುವಂತಹ ಕೆಲಸಕ್ಕೆ ಹೋರಾಟದ ಮೂಲಕ ಕೈ ಜೋಡಿಸಿದರು.

References

ಶಿವರಾಜಪ್ಪ ಎಸ್‌. (2010). ಶರಣ ದರ್ಶನ: ಸಮಗ್ರ ಸಾಹಿತ್ಯ-2. ವಿಜಯಲಕ್ಷ್ಮೀ ಪ್ರಕಾಶನ. ಮೈಸೂರು.

ಶ್ರೀನಿವಾಸಮೂರ್ತಿ ಎಂ. ಆರ್. (2023). ವಚನ ಧರ್ಮಸಾರ. ಕನ್ನಡ ಸಾಹಿತ್ಯ ಪರಿಷತ್ತು. ಬೆಂಗಳೂರು.

Downloads

Published

11.08.2024

How to Cite

ವಾಣಿ ಡಿ. ಎಸ್. (2024). ಮಡಿವಾಳ ಮಾಚಿ ದೇವರವರ ಜೀವನ ಹಾಗೂ ಸಾಧನೆ. AKSHARASURYA, 4(04), 144 to 150. Retrieved from https://aksharasurya.com/index.php/latest/article/view/464

Issue

Section

ಪ್ರಬಂಧ. | ESSAY.