ದುರಗಮುರಗಿಯರ ಸಾಂಸ್ಕೃತಿಕ ಬದುಕು: ಆಧುನಿಕತೆಯ ಪ್ರಭಾವ

Main Article Content

ಎಸ್.ಡಿ. ಕೆಂಗಲಗುತ್ತಿ

Abstract

ಉತ್ತರ ಕರ್ನಾಟಕದ ಗ್ರಾಮೀಣ ಭಾಗದ ವಿಶಿಷ್ಟ ಅಲೆಮಾರಿ ಸಮುದಾಯವಾದ ದುರಗಮುರಗಿಯರ ಸಾಂಸ್ಕೃತಿಕ ಬದುಕು ಮತ್ತು ಬದಲಾದ ಕಾಲಘಟ್ಟದಲ್ಲಿ ಅವರು ಎದುರಿಸುತ್ತಿರುವ ಸವಾಲುಗಳನ್ನು ಇಲ್ಲಿ ವಿಶ್ಲೇಷಿಸಲಾಗಿದೆ. ಶಕ್ತಿದೇವತೆಗಳಾದ ದುರ್ಗಮ್ಮ ಮತ್ತು ಮರಗಮ್ಮನ ಆರಾಧಕರಾದ ಇವರು, ಭಿಕ್ಷಾಟನೆಯನ್ನೇ ಮೂಲವೃತ್ತಿಯನ್ನಾಗಿ ಸ್ವೀಕರಿಸಿದವರು. ಬುರುಬುರು ವಾದ್ಯದೊಂದಿಗೆ ಪೋತರಾಜನು ಮಾಡುವ ಭಯಂಕರ ಕುಣಿತ, ಮೈಮೇಲೆ ಮಾಡಿಕೊಳ್ಳುವ ಗಾಯಗಳು ಮತ್ತು ಅವರು ಪಾಲಿಸುವ ಕಟ್ಟುನಿಟ್ಟಾದ ಸಂಪ್ರದಾಯಗಳು ಈ ಸಮುದಾಯದ ಅನನ್ಯತೆಯನ್ನು ಸಾರುತ್ತವೆ.  ಆದರೆ ಜಾಗತೀಕರಣ ಹಾಗೂ ಆಧುನಿಕತೆಯ ಪ್ರಭಾವದಿಂದಾಗಿ ಈ ಕಲೆಗೆ ಮನ್ನಣೆ ಕಡಿಮೆಯಾಗುತ್ತಿದ್ದು, ಹೊಟ್ಟೆಪಾಡಿಗಾಗಿ ಕೂಲಿ, ಕಾರ್ಖಾನೆ ಕೆಲಸಗಳಿಗೆ ವಲಸೆ ಹೋಗುವ ಅನಿವಾರ್ಯತೆ ಒದಗಿಬಂದಿದೆ. ಆರ್ಥಿಕ ಸಂಕಷ್ಟ ಮತ್ತು ಬದಲಾದ ಸಾಮಾಜಿಕ ದೃಷ್ಟಿಕೋನದಿಂದಾಗಿ ಈ ಶ್ರೀಮಂತ ಜಾನಪದ ಕಲೆಯು ನೇಪಥ್ಯಕ್ಕೆ ಸರಿಯುತ್ತಿರುವ ಆತಂಕವನ್ನು ಈ ಅಧ್ಯಯನವು ವ್ಯಕ್ತಪಡಿಸುತ್ತದೆ.

Article Details

Section

Research Articles

Author Biography

ಎಸ್.ಡಿ. ಕೆಂಗಲಗುತ್ತಿ

ಸಹಾಯಕ ಪ್ರಾಧ್ಯಾಪಕರು, ಬಸವೇಶ್ವರ ಕಲಾ ಮಹಾವಿದ್ಯಾಲಯ, ಬಾಗಲಕೋಟೆ.

How to Cite

ಎಸ್.ಡಿ. ಕೆಂಗಲಗುತ್ತಿ. (2026). ದುರಗಮುರಗಿಯರ ಸಾಂಸ್ಕೃತಿಕ ಬದುಕು: ಆಧುನಿಕತೆಯ ಪ್ರಭಾವ. ಅಕ್ಷರಸೂರ್ಯ (AKSHARASURYA), 12(06), 15 to 24. https://aksharasurya.com/index.php/latest/article/view/463

References

ತಿಪ್ಪೇರುದ್ರಸ್ವಾಮಿ ಎಚ್., (2003), ಕರ್ನಾಟಕ ಸಂಸ್ಕೃತಿ ಸಮೀಕ್ಷೆ, ಮೈಸೂರು: ಡಿ.ವಿ.ಕೆ. ಮೂರ್ತಿ ಪ್ರಕಾಶನ.

ಗೀತಾ ನಾಗಭೂಷಣ (ಸಂ), (1993), ದುರಗಮುರಗಿಯರ ಸಂಸ್ಕೃತಿ, ಬೆಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ.

ವಿವಿಧ ಲೇಖಕರು, (2011), ಸಾಮಾನ್ಯನಿಗೆ ಸಾಹಿತ್ಯ ಚರಿತ್ರೆ (ಸಂಪುಟ 1 ರಿಂದ 10), ಬೆಂಗಳೂರು: ಸ್ವಪ್ನ ಬುಕ್ ಹೌಸ್.

ಕೆಂಗಲಗುತ್ತಿ ಎಸ್.ಡಿ., (2019), ದೇಸೀ ಎಂಬ ಬೆಡಗು, ಬೆಂಗಳೂರು: ಚೇತನ ಪಬ್ಲಿಕೇಶನ್.

ಕ್ಷೇತ್ರಕಾರ್ಯ, ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಯ ಹಲವು ಪರಿಸರಗಳು.