ಗ್ರಂಥಸಂಪಾದನಾ ಕ್ಷೇತ್ರಕ್ಕೆ ವೈ. ಸಿ. ಭಾನುಮತಿಯವರ ಜನಪದೀಯ ಕೊಡುಗೆ

Authors

  • ಮಾನಸ ಎಂ. ಸಂಶೋಧನಾರ್ಥಿ, ಹಸ್ತಪ್ರತಿಶಾಸ್ತ್ರ ವಿಭಾಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

Keywords:

ವೈ.ಸಿ. ಭಾನುಮತಿ, ಗ್ರಂಥಸಂಪಾದನೆ, ಜನಪದಸಾಹಿತ್ಯ, ವಕ್ತೃಗಳ ವಿವರ, ಸಾಂಸ್ಕೃತಿಕ ಅಂಶ

Abstract

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಸೃಜನಶೀಲ ಸಾಹಿತ್ಯಕ್ಕೆ ಹೆಚ್ಚು ಒತ್ತುಕೊಡುವ ಕಾಲದಲ್ಲಿ ಗ್ರಂಥಸಂಪಾದನ ಕ್ಷೇತ್ರದ ಆಲಸ್ಯ ಕಾಣಬಹುದು. ಇಂತಹ ಆಲಸ್ಯತನಕ್ಕೆ ಈಡಾಗಬಹುದಾದಂತಹ ಗ್ರಂಥಸಂಪಾದನಾ ಕ್ಷೇತ್ರದಲ್ಲಿ ಸೃಜನಶೀಲ ಸಾಹಿತ್ಯಕ್ಕಿಂತ ಗ್ರಂಥಸಂಪಾದನಾ ಕ್ಷೇತ್ರ ಮುಖ್ಯವೆಂದು ಭಾವಿಸಿ ಹಲವಾರು ಪ್ರಾಚೀನ ಹಳಗನ್ನಡ ಕೃತಿಗಳನ್ನು ಸಂಗ್ರಹಿಸಿ, ಸಂಪಾದಿಸಿ, ಪರಿಷ್ಕರಿಸಿ, ಪ್ರಕಟಣೆ ಮಾಡಿದಂತಹ ಹಲವಾರು ವಿದ್ವಾಂಸರ ಪಟ್ಟಿ ಇದೆ. ಇಂತಹ ವಿದ್ವಾಂಸರಲ್ಲಿ ಅದರಲ್ಲೂ ಮಹಿಳಾ ಗ್ರಂಥಸಂಪಾದಕರ ಸಾಲಿನಲ್ಲಿ ವೈ.ಸಿ. ಭಾನುಮತಿ ಅವರು ಪ್ರಮುಖವಾಗಿ ಕಾಣಿಸಿಕೊಳ್ಳುತ್ತಾರೆ. ಭಾನುಮತಿಯವರು ಹಳಗನ್ನಡ ಗ್ರಂಥಸಂಪಾದನೆಗೆ ಸಂಬಂಧಿಸಿದಂತೆ ಹಾಗೂ ಸಂಶೋಧನೆಗೆ ಸಂಬಂಧಿಸಿದಂತೆ ಒಟ್ಟು 50ಕ್ಕೂ ಹೆಚ್ಚು ಗ್ರಂಥಗಳನ್ನು ಪ್ರಕಟಿಸಿದ್ದಾರೆ. ಭಾನುಮತಿಯವರ ಆಸಕ್ತಿ ಜನಪದ ಕ್ಷೇತ್ರ. ಇವರು ಜನಪದ ಕ್ಷೇತ್ರದಲ್ಲಿ ನಡೆಸಿದ ಸಂಪಾದನೆಯನ್ನು ಇವರ ಕೃತಿಗಳಲ್ಲಿ ವ್ಯಕ್ತವಾಗಿರುವ ಸಾಂಸ್ಕೃತಿಕ ಚಹರೆಯನ್ನು ಕ್ಷೇತ್ರಕಾರ್ಯದ ಮೂಲಕ, ವಕ್ತೃಗಳ ಮೂಲಕ ವಿಷಯ ಸಂಪಾದನೆಮಾಡಿ ದಾಖಲಿಸಿ, ಪ್ರಕಟಿಸಿರುವುದನ್ನು ಗುರುತಿಸಬಹುದಾಗಿದೆ. ಇದರಿಂದ ಓದುಗರಿಗೆ ಜನಪದ ಕ್ಷೇತ್ರ, ಸಂಪಾದನಾ ಕ್ಷೇತ್ರದ ಮಹತ್ವ ತಿಳಿಯುತ್ತದೆ.

References

ಭಾನುಮತಿ ವೈ.ಸಿ. (1989). ಇಬ್ಬೀಡಿನ ಜನಪದ ಕಥೆಗಳು. ಕೇಶವ ಪ್ರಕಾಶನ. ಮೈಸೂರು.

ಭಾನುಮತಿ ವೈ.ಸಿ. (1994). ಮಲೆನಾಡು ಶೈವ ಒಕ್ಕಲಿಗರು ಜಾನಪದೀಯ ಅಧ್ಯಯನ. ಕೇಶವ ಪ್ರಕಾಶನ. ಮೈಸೂರು.

ಭಾನುಮತಿ ವೈ.ಸಿ. (2008). ಜಾನಪದ ಚಹರೆ. ರೂಪ ಪ್ರಕಾಶನ. ಮೈಸೂರು.

ಮೀನಾ. ಗ್ರಂಥ ಸಂಪಾದನೆಯಲ್ಲಿ ವಿಶಿಷ್ಠ ಹೆಸರು ಡಾ.ವೈ.ಸಿ.ಭಾನುಮತಿ. ಭೂಮಾತು ಪತ್ರಿಕೆ. 2018. ಸಂಪುಟ-2. ಸಂಚಿಕೆ-11.

Downloads

Published

11.08.2024

How to Cite

ಮಾನಸ ಎಂ. (2024). ಗ್ರಂಥಸಂಪಾದನಾ ಕ್ಷೇತ್ರಕ್ಕೆ ವೈ. ಸಿ. ಭಾನುಮತಿಯವರ ಜನಪದೀಯ ಕೊಡುಗೆ. AKSHARASURYA, 4(04), 63 to 67. Retrieved from https://aksharasurya.com/index.php/latest/article/view/456

Issue

Section

ಸಂಶೋಧನಾ ಲೇಖನಗಳು. | RESEARCH ARTICLE.