ಕನ್ನಡ ಶಾಸ್ತ್ರೀಯ ಸ್ಥಾನಮಾನದ ಅಧಿಕೃತ ಆಕರಗಳಾಗಿ ಪಂಪಪೂರ್ವಯುಗದ ಭಾಷಿಕ-ಸಾಹಿತ್ಯಕ ಮೌಲ್ಯವುಳ್ಳ ಶಾಸನಗಳು

Main Article Content

ಸಿ. ನಾಗಭೂಷಣ

Abstract

ಪ್ರಸ್ತುತ ಲೇಖನವು ಕನ್ನಡ ಭಾಷೆಯ ಶಾಸ್ತ್ರೀಯ ಸ್ಥಾನಮಾನವನ್ನು ದೃಢೀಕರಿಸುವಲ್ಲಿ ಪಂಪಪೂರ್ವ ಯುಗದ ಶಾಸನಗಳ ಸಾಹಿತ್ಯಕ ಮತ್ತು ಭಾಷಿಕ ಮೌಲ್ಯಗಳನ್ನು ವಿಶ್ಲೇಷಿಸುತ್ತದೆ. ಕ್ರಿ.ಶ. 450ರ ಹಲ್ಮಿಡಿ ಶಾಸನದಿಂದ ಆರಂಭಿಸಿ, ತಮಟಕಲ್ಲು, ಬಾದಾಮಿಯ ಕಪ್ಪೆ ಅರಭಟ್ಟ ಹಾಗೂ ಶ್ರವಣಬೆಳಗೊಳದ ನಿಷಧಿ ಶಾಸನಗಳು ಕನ್ನಡದ ಪ್ರಾಚೀನತೆ ಮತ್ತು ಪ್ರೌಢಿಮೆಗೆ ಅಧಿಕೃತ ಆಧಾರಗಳಾಗಿವೆ. ಕವಿರಾಜಮಾರ್ಗಕ್ಕಿಂತ ಹಿಂದೆಯೇ ಕನ್ನಡದಲ್ಲಿ ಗದ್ಯ-ಪದ್ಯಗಳ ಸೃಜನಶೀಲ ಬಳಕೆ ಇತ್ತೆಂಬುದನ್ನು ಈ ಶಾಸನಗಳು ಸಾಬೀತುಪಡಿಸುತ್ತವೆ. ಕೇಂದ್ರ ಸರ್ಕಾರ ನಿಗದಿಪಡಿಸಿದ 1500-2000 ವರ್ಷಗಳ ಇತಿಹಾಸದ ಮಾನದಂಡಕ್ಕೆ ಪೂರಕವಾಗಿರುವ ಈ ಶಾಸನಗಳು, ಕನ್ನಡದ ಸ್ವೋಪಜ್ಞತೆ ಮತ್ತು ನಿರಂತರತೆಯನ್ನು ಎತ್ತಿಹಿಡಿಯುವಲ್ಲಿ ಪ್ರಮುಖ ಪಾತ್ರ ವಹಿಸಿವೆ ಎಂಬುದನ್ನು ಲೇಖನವು ಸವಿಸ್ತಾರವಾಗಿ ಚರ್ಚಿಸುತ್ತದೆ.

Article Details

Section

Research Articles

Author Biography

ಸಿ. ನಾಗಭೂಷಣ

ಹಿರಿಯ ಪ್ರಾಧ್ಯಾಪಕರು, ಕನ್ನಡ ಅಧ್ಯಯನ ಕೇಂದ್ರ, ಬೆಂಗಳೂರು ವಿಶ್ವವಿದ್ಯಾಲಯ, ಬೆಂಗಳೂರು.

References

ನೇಗಿನಹಾಳ ಎಂ.ಬಿ., (1994), ಪೂರ್ವದ ಹಳಗನ್ನಡ ಶಾಸನಗಳ ಸಾಹಿತ್ಯಕ ಅಧ್ಯಯನ, ಧಾರವಾಡ: ಪ್ರಸಾರಾಂಗ, ಕರ್ನಾಟಕ ವಿಶ್ವವಿದ್ಯಾಲಯ.

ಶೆಟ್ಟರ್ ಷ. (ಸಂ), (2017), ಹಳಗನ್ನಡ: ಭಾಷೆ, ವಿಕಾಸ, ಭಾಷಾ ಬಾಂಧವ್ಯ, ಬೆಂಗಳೂರು: ಅಭಿನವ ಪ್ರಕಾಶನ.

ವೆಂಕಟಾಚಲ ಶಾಸ್ತ್ರೀ ಟಿ.ವಿ., (1999), ಶಾಸ್ತ್ರೀಯ ಸಂ. 2, ಬೆಂಗಳೂರು: ಸ್ವಪ್ನಬುಕ್ ಹೌಸ್.

ಶಾಮರಾವ್ ಜೆ.ಎನ್. (ಸಂ), (2012), ಕನ್ನಡ ಶಾಸ್ತ್ರೀಯ ಭಾಷೆ ನಡೆದು ಬಂದ ದಾರಿ, ಬೆಂಗಳೂರು: ಕನ್ನಡ ಅಭಿವೃದ್ಧಿ ಪ್ರಾಧಿಕಾರ.

ನಾಗಭೂಷಣ ಸಿ., (2020), ಕನ್ನಡ ಸಾಹಿತ್ಯ ಸಂಸ್ಕೃತಿ ಬಾಗಿನ, ಬೆಂಗಳೂರು: ಸ್ನೇಹಾ ಪ್ರಿಂಟರ್ಸ್.

ಶಿವರುದ್ರಪ್ಪ ಜಿ.ಎಸ್. (ಸಂ), (1974), ಸಮಗ್ರ ಕನ್ನಡ ಸಾಹಿತ್ಯ ಚರಿತ್ರೆ (ಸಂಪುಟ-1), ಬೆಂಗಳೂರು: ಪ್ರಸಾರಾಂಗ, ಬೆಂಗಳೂರು ವಿಶ್ವವಿದ್ಯಾಲಯ.

ನಾಯಕ ಹಾ.ಮಾ. (ಸಂ), (1975), ಕನ್ನಡ ಅಧ್ಯಯನ ಸಂಸ್ಥೆಯ ಸಾಹಿತ್ಯ ಚರಿತ್ರೆ (ಎರಡನೇ ಸಂಪುಟ), ಮೈಸೂರು: ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ.

ಮಾರುತಿ ಆರ್. ತಳವಾರ ಮತ್ತು ರಾಜಶೇಖರ ಮಠಪತಿ (ಸಂ), (2009), ಶಾಸನಗಳು ಮತ್ತು ಕನ್ನಡ ಶಾಸ್ತ್ರೀಯತೆ, ಬೆಂಗಳೂರು: ಕುಕ್ಕೆಶ್ರೀ ಪ್ರಕಾಶನ.