ಮೈಸೂರು ಸಂಸ್ಥಾನದಲ್ಲಿನ ರಾಜಾಶ್ರಯದ ಕ್ರೀಡೆಗಳು: ಒಂದು ನೋಟ

Authors

  • VASANTHA POORNIMA

Keywords:

ಗಂಜೀಫ, ಬೋರ್ಡ್ ಆಟಗಳು, ಬೇಟೆ, ಕುಸ್ತಿ, ಪೋಲೋ, ಚೌಗಾನ್

Abstract

ಹೆಸರೇ ಹೇಳುವಂತೆ ‘ಮೈ ಮನ ಸೂರೆಗೊಳ್ಳುವ’ ಮೈಸೂರು ಜಗದ್ವಿಖ್ಯಾತವಾಗಿರುವುದು ತನ್ನ ವಿಶಿಷ್ಟ ಸಾಂಸ್ಕೃತಿಕ ಕೊಡುಗೆ ಹಾಗೂ ಸಾಮಾಜಿಕ ಸುಧಾರಣೆಗಳಿಂದ. ಬ್ರಿಟಿಷ್ ಪ್ರಭುತ್ವದಡಿಯಲ್ಲೋ ಅಥವಾ ತನ್ನ ಆಧುನಿಕ ಸುಧಾರಣಿಗಳಿಂದಲೋ ಮೈಸೂರಿನ ಸರ್ವತೋಮುಖ ಅಭಿವೃದ್ಧಿಗೆ ನೆರವಾದ ಮೈಸೂರಿನ ಆಳರಸರು ಬಹುತೇಕ ಎಲ್ಲಾ ಕ್ಷೇತ್ರಗಳಲ್ಲಿ ತಮ್ಮದೇ ಆದ ಛಾಪು ಮೂಢಿಸಿದ್ದಾರೆ. ರಾಜ ಪ್ರಭುತ್ವ ಕಾಲದಲ್ಲಿ ಯುದ್ದ ವಿದ್ಯೆ ಅಥವಾ ಸೈನಿಕ ಕಲೆಗಳೆನಿಸಿಕೊಂಡಿದ್ದ ಕುದುರೆ ಸವಾರಿ, ಕತ್ತಿವರಸೆ, ಕುಸ್ತಿ, ಬಿಲ್ಲುಗಾರಿಕೆ, ಭರ್ಜಿ ಎಸೆತ, ಪೋಲೋ, ಕವಾಯಿತು, ವ್ಯಾಯಾಮ ಮೊದಲಾದವು ಇಂದು ಕ್ರೀಡಾಕ್ಷೇತ್ರಕ್ಕೆ ಸೇರ್ಪಡೆಗೊಂಡು ದೈಹಿಕ ಹಾಗೂ ಬೌದ್ದಿಕ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರವಹಿಸುತ್ತಿದೆ. ಈ ನಿಟ್ಟಿನಲ್ಲಿ ಮೈಸೂರು ಸಂಸ್ಥಾನ ತೆಗೆದುಕೊಂಡ ನಿಲುವುಗಳು ನಿಜಕ್ಕೂ ಅಧ್ಯಯನಕ್ಕೆ ಅರ್ಹವಾದವು. ದಸರಾ ಹಬ್ಬದ ಸಂದರ್ಭದಲ್ಲಿ ವಿಶೇಷ ಕ್ರೀಡಾಕೂಟಗಳನ್ನು ಏರ್ಪಡಿಸಿ ದೇಶ ವಿದೇಶಗಳಿಂದ ಕ್ರೀಡಾಪಟುಗಳನ್ನು ಆಮಂತ್ರಿಸುವ ಮೂಲಕ ಸಮಕಾಲೀನ ಸಂಸ್ಥಾನಗಳ ನಡುವೆ ವಿಭಿನ್ನವಾಗಿ ನಿಲ್ಲುವ ಮೈಸೂರು, ಆಂಗ್ಲೋ ಮೈಸೂರು ಯುದ್ದಗಳ ನಂತರ ಬ್ರಿಟಿಷರ ಪ್ರಭಾವಕ್ಕೆ ಒಳಗಾಗಿ ಆಧುನೀಕರಣಕ್ಕೆ ಬಹಳ ಬೇಗ ಒಗ್ಗಿಕೊಂಡು ಕ್ರೈಸ್ತ ಮಿಷನರಿಗಳ ಹಾದಿಯಲ್ಲಿಯೇ ಶಿಕ್ಷಣ ಕ್ಷೇತ್ರದ ಸುಧಾರಣೆಗೆ ಮುಂದಾಗಿ ಇದರಲ್ಲಿ ದೈಹಿಕ ಶಿಕ್ಷಣದ ಅಗತ್ಯತೆಯನ್ನು ಮನಗಂಡು ಅದನ್ನು ಶಾಲಾ ಕೋರ್ಸ್ ನ ಭಾಗವೆಂದು ಪರಿಗಣಿಸಿ ಇದಕ್ಕೆ ಪ್ರತ್ಯೇಕ ಶಿಕ್ಷಕ ಹಾಗೂ ತರಬೇತಿಯನ್ನು ಕಡ್ಡಾಯಗೊಳಿಸಿತಲ್ಲದೇ ಅಂತರ ಶಾಲಾ ಕ್ರೀಡಾಕೂಟದ ಆಯೋಜನೆಗೆ ಅವಕಾಶ ಕಲ್ಪಿಸಿಕೊಟ್ಟತು. ಇಂತಹ ಅಭಿವೃದ್ದಿ ಪರ ಸಂಸ್ಥಾನದಲ್ಲಿ ಪುರಾತನ ಕ್ರೀಡೆಗಳು ಬೆಳೆದು ಬಂದ ಬಗೆಯ ಕಿರು ನೋಟ ನೀಡುವಂತಹ ಪ್ರಯತ್ನವನ್ನು ಮಾಡುವ ಉದ್ದೇಶವನ್ನು ಈ ಲೇಖನ ಒಳಗೊಂಡಿದೆ.

Downloads

Published

01.04.2024

How to Cite

VASANTHA POORNIMA. (2024). ಮೈಸೂರು ಸಂಸ್ಥಾನದಲ್ಲಿನ ರಾಜಾಶ್ರಯದ ಕ್ರೀಡೆಗಳು: ಒಂದು ನೋಟ. AKSHARASURYA, 3(04), 181 to 187. Retrieved from https://aksharasurya.com/index.php/latest/article/view/357