ಕನ್ನಡ ಸಾಹಿತ್ಯಕ್ಕೆ ಮೈಸೂರು ಅರಸರ ಕೊಡುಗೆ

Authors

  • PRASANNA K. P.

Keywords:

ಚಿಕ್ಕದೇವರಾಜ, ಚಿಕ್ಕದೇವರಾಜ ಬಿನ್ನಪ, ಗೀತಾಗೋಪಾಲ, ಭಾರತ, ಭಾಗವತ, ಶೇಷಧರ್ಮ

Abstract

ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಇರುವ ಕನ್ನಡ ಸಾಹಿತ್ಯವನ್ನು ಆರಂಭದ ಕಾಲದಿಂದಲೂ ಅನೇಕ ರಾಜರು, ರಾಜಮನೆತನಗಳು ಪೋಷಿಸಿ ಪ್ರೋತ್ಸಾಹಿಸಿ ಬೆಳೆಸಿಕೊಂಡು ಬಂದಿವೆ. ಅದರಲ್ಲಿ ಸುಮಾರು ನಾನೂರು ವರ್ಷಗಳಷ್ಟು ಕಾಲ ಆಳ್ವಿಕೆ ಮಾಡಿದ ಮೈಸೂರು ಅರಸರು ಕನ್ನಡ ಸಾಹಿತ್ಯ ಮತ್ತು ಸಂಸ್ಕೃತಿಗೆ ತಮ್ಮದೇ ಆದ ಕೊಡುಗೆಗಳನ್ನು ನೀಡಿರುವುದು ಕಂಡುಬರುತ್ತದೆ. ಇವರ ಕಾಲಘಟ್ಟದಲ್ಲಿ ಅನೇಕ ಕವಿಗಳಿಗೆ, ವಿದ್ವಾಂಸರಿಗೆ, ಭಾಷಾಂತರಕಾರರಿಗೆ ಆಶ್ರಯ ನೀಡಿದ್ದಲ್ಲದೇ, ಅರಸರೇ ಸ್ವತಃ ಕವಿಗಳಾಗಿದ್ದು ಇವರ ಕಾವ್ಯಗಳೇ ಮೈಸೂರು ಅರಸರ ಐತಿಹ್ಯಕ್ಕೆ ಸಾಕ್ಷಿಯಾಗಿವೆ.

ಮೈಸೂರು ಒಡೆಯರಲ್ಲಿ ಪ್ರಪ್ರಥಮವಾಗಿ ಕಾವ್ಯರಚನೆ ಮಾಡಿಸಿದ ಕೀರ್ತಿ ರಾಜ ಒಡೆಯರಿಗೆ ಸಲ್ಲುತ್ತದೆ. ಇವರ ನಂತರ ಬಂದ ಚಾಮರಾಜ ಒಡೆಯರು (1617-1637) ‘ಚಾಮರಾಜೋಕ್ತಿ ವಿಲಾಸ’ ಮತ್ತು ‘ಮಣಿಪ್ರಾಕಾಶ’ ವೆಂಬ ಎರಡು ಗ್ರಂಥಗಳನ್ನು ಬರೆಸಿದ್ದಾರೆ. ಚಿಕ್ಕದೇವರಾಜ ಒಡೆಯರು (1672-1704) ಇವರ ಕಾಲವನ್ನ ಕನ್ನಡದ ಸುವರ್ಣಯುಗವೆಂದೆ ಕರೆಯಬಹುದು. ಇವರು ಸ್ವತಃ ಕವಿಗಳಾಗಿದ್ದಲ್ಲದೇ ಅನೇಕ ವಿದ್ವಾಂಸರಿಗೆ ಆಶ್ರಯ ನೀಡಿದ್ದಾರೆ. ಇವರ ಮಂತ್ರಿಮಂಡಲದಲ್ಲಿ ತಿರುಮಲಾರ್ಯ, ವಿಶಾಲಾಕ್ಷ ಪಂಡಿತ, ಚಿಕ್ಕುಪಾಧ್ಯಾಯ, ಕರಣಿಕ ಲಿಂಗಯ್ಯ ಮುಂತಾದವರು ಇದ್ದಂತೆ ಕಂಡುಬರುತ್ತದೆ. ‘ಚಿಕ್ಕದೇವರಾಜ ಬಿನ್ನಪ’, ‘ಗೀತಾಗೋಪಾಲ’, ‘ಭಾರತ’, ‘ಭಾಗವತ’ ‘ಶೇಷಧರ್ಮ’ ಮುಂತಾಂದ ಗ್ರಂಥಗಳನ್ನು ಇವರ ಕಾಲದಲ್ಲಿ ರಚನೆಗೊಂಡಿವೆ. ಇವುಗಳನ್ನು ಸ್ವತಃ ತಾವೇ ಬರೆದುದ್ದಾಗಿಯೂ, ಕೆಲವರು ಆಸ್ಥಾನ ಕವಿಗಳು ಅರಸರ ಹೆಸರಿನಲ್ಲಿ ಬರೆದಿರುವುದಾಗಿಯೂ ಅಭಿಪ್ರಾಯ ವ್ಯಕ್ತಪಡಿದ್ದಾರೆ. ಏನೇ ಆಗಿರಲಿ ಕವಿಗಳಿದ್ದುದರಿಂದ ಅವರ ಪ್ರಭಾವದಿಂದಾಗಿ ಈತನೂ ಕೆಲವು ಗ್ರಂಥಗಳನ್ನು ಇಲ್ಲವೇ ಎಲ್ಲ ಗ್ರಂಥಗಳನ್ನೂ ಬರೆದಿರಲು ಸಾಧ್ಯ.

ಇವರ ಆಸ್ಥಾನದಲ್ಲಿ ಮಂತ್ರಿಯೂ, ಕವಿಯೂ ಆಗಿದ್ದ ತಿರುಮಲಾರ್ಯ- ಅಪ್ರತಿಮವೀರ ಚರಿತೆ, ಚಿಕ್ಕದೇವರಾಜ ವಿಜಯ, ಚಿಕ್ಕದೇವರಾಜ ವಂಶಾವಳಿ, ಚಿಕ್ಕದೇವರಾಯ ಶತಕ ಮಂತಾದ ಗ್ರಂಥಗಳನ್ನು ರಚಿಸಿದ್ದಾನೆ.

ಚಿಕ್ಕುಪಾಧ್ಯಾಯ: ಈತ ಅಕ್ಷರಮಾಲಿಕಾ ಸಾಂಗತ್ಯ, ಕಮಲಾಚಲ ಮಹಾತ್ಮ್ಯ, ಅಮರುಶತಕ, ಕಾಮಾಂದಕ ಟೀಕೆ, ಚಿಕ್ಕದೇವರಾಜ ಶೃಂಗಾರ ಪದಗಳು, ಚಿತ್ರಶತಕ ಸಾಂಗತ್ಯ ಮುಂತಾದ 28 ಕೃತಿಗಳನ್ನು ರಚಿಸಿರುವುದು ಕಂಡುಬರುತ್ತದೆ. ತಿಮ್ಮಕವಿ- ಯಾದವಗಿರಿ ಮಹಾತ್ಮ್ಯೆ, ವೆಂಕಟಗಿರಿ ಮಹಾತ್ಮ್ಯೆ, ಪಶ್ಚಿಮರಂಗ ಮಹಾತ್ಮ್ಯೆ.

ಸಿಂಗರರ್ಯ: ಮಿತ್ರವಿಂದ ಗೋವಿಂದ, ಸಂಚಿಹೊನ್ನಮ್ಮ- ಹದಿಬದೆಯಧರ್ಮ, ಮುಮ್ಮಡಿ ಕೃಷ್ಣರಾಜ ಒಡೆಯರ: ಸೌಗಂದಿಕಾ ಪರಿಣಯ, ವತ್ಸರಾಜನ ಕತೆ, ಶಾಂಕುಂತಲ ನಾಟಕ ನವೀನ ಟೀಕೆ, ಪಂಚತಂತ್ರ, ಹರಿಶ್ಚಂದ್ರೋಖ್ಯಾನ, ರಾಮಕಥಾ ಕಲ್ಪವೃಕ್ಷ, ಮುಂತಾದ ಅರವತ್ತಕ್ಕೂ ಎಚ್ಚು ಗ್ರಂಥಗಳನ್ನು ರಚಿಸಿರುತ್ತಾರೆ ಮತ್ತು ಇವರ ಕಾಲದಲ್ಲಿ ನೂರಾರು ಕೃತಿಗಳು ರಚನೆಯಾಗಿವೆ.

ಕೆಂಪುನಾರಾಯಣನ ಮುದ್ರಾಮಂಜೂಷ, ಅಳಿಯ ಲಿಂಗರಾಜನ ನಳಕೂಬರವಿಳಾಸ, ಮತ್ತು ಗಯಾಚರಿತ್ರೆಯನ್ನು ಮಂತಾದ ಕೃತಿಗಳನ್ನು ರಚಿಸಿದ್ದಾನೆ. ಬಸವಪ್ಪಶಾಸ್ತ್ರಿ ಸಾವಿತ್ರಿ ಚರಿತ್ರೆ, ದಮಯಂತಿ ಸ್ವಯಂವರ, ನೀತಿಸಾರ ಸಂಗ್ರಹ, ಶೂರಸೇನಚರಿತ್ರೆ ಮುಂತಾದವುಗಳು. ದೇವಚಂದ್ರನ ರಾಜಾವಳಿಕತೆ ಹೀಗೆ ಮೈಸೂರು ಅರಸ ಕಾಲದಲ್ಲಿ ಸಾವಿರಾರು ಕೃತಿಗಳು ರಚನೆಗೊಂಡಿದ್ದು, ಕನ್ನಡ ಸಾಹಿತ್ಯಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ.

Downloads

Published

01.04.2024

How to Cite

PRASANNA K. P. (2024). ಕನ್ನಡ ಸಾಹಿತ್ಯಕ್ಕೆ ಮೈಸೂರು ಅರಸರ ಕೊಡುಗೆ. AKSHARASURYA, 3(04), 99 to 105. Retrieved from https://aksharasurya.com/index.php/latest/article/view/348