ಹೆಬ್ಬಾಳ್ ಕೃಷಿ ಪ್ರಯೋಗಾತ್ಮಕ ಫಾರಂ: ಚಾರಿತ್ರಿಕ ಹಿನ್ನೆಲೆ

Authors

  • MANJUKUMAR

Keywords:

ಫಾರಂ, ಪ್ರಾತ್ಯಕ್ಷಿಕ ಪ್ರಯೋಗ, ಕೋಲಾರ ಮಿಷನ್ ನೇಗಿಲು, ಹೆಬ್ಬಾಳ್, ರೋಗಬಾಧೆ

Abstract

ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ವ್ಯವಸಾಯದ ಅಭಿವೃದ್ಧಿಯು ಮೈಸೂರು ಸಂಸ್ಥಾನದ ಏಳಿಗೆಗೆ ಪೂರಕವೆಂದು ಅರಿತಿದ್ದರು. ಆದ್ದರಿಂದ ಆಧುನಿಕ ಯುಗದ ಅಗತ್ಯತೆಗೆ ತಕ್ಕಂತೆ ಕೃಷಿಯನ್ನು ಒಂದು ಲಾಭದಾಯಕ ಉದ್ಯಮವಾಗಿ ಪರಿವರ್ತಿಸಿದರು. ನಾಲ್ವಡಿ ಕೃಷ್ಣರಾಜ ಒಡೆಯರ್‌ರವರು ವೈಜ್ಞಾನಿಕ ಪ್ರಜ್ಞೆಯಿಂದ ಪ್ರಾಯೋಗಿಕ ಕಾರ್ಯ ತಂತ್ರಗಳನ್ನು ರೂಪಿಸಲು ಪ್ರಯತ್ನಿಸಿದರು. ಅಂತೆಯೇ ಪ್ರಾತ್ಯಕ್ಷಿಕ ಪ್ರಯೋಗಗಳ ಮೂಲಕ ರೈತಾಪಿ ವರ್ಗವು ಆಧುನಿಕಾಂಶಗಳನ್ನು ಅನುಕರಣೆ ಮಾಡುವಂತೆ ಉತ್ತೇಜನವನ್ನು ನೀಡಿದರು. ಇಪ್ಪತ್ತನೇ ಶತಮಾನದಲ್ಲಿ ರಾಜಪ್ರಭುತ್ವದಿಂದ ದೊರೆತ ನೀರಾವರಿ ಸೌಲಭ್ಯ, ಆಧುನಿಕ ಕೃಷಿಯ ಸಲಕರಣೆಗಳ ಪೂರೈಕೆ, ಬಿತ್ತನೆ ಬೀಜ ಮತ್ತು ರಸಗೊಬ್ಬರಗಳ ಸರಬರಾಜು, ಬೆಳೆ ಸಾಲ ಸೌಲಭ್ಯ ಮುಂತಾದ ಅಂಶಗಳು ಕೃಷಿಯನ್ನು ಆಧುನೀಕರಣಗೊಳಿಸಿದ್ದವು. ಸರ್ಕಾರವು ಕೃಷಿಯ ಅಭಿವೃದ್ಧಿಗಾಗಿ ಪ್ರಯೋಗಾತ್ಮಕ ಫಾರಂಗಳ ಸ್ಥಾಪನೆ, ಪ್ರಾತ್ಯಕ್ಷಿಕ ಪ್ರಯೋಗಗಳ ಮೂಲಕ ಕೃಷಿಕರಿಗೆ ತರಬೇತಿ, ಕೃಷಿ ಉತ್ಪನ್ನಗಳ ವಸ್ತುಪ್ರದರ್ಶನದ ಆಯೋಜನೆ, ಕಬ್ಬಿನ ವ್ಯವಸಾಯಕ್ಕೆ ಪ್ರೋತ್ಸಾಹ, ಕೃಷಿ ಸಂಬಂಧಿತ ಮಾಹಿತಿಯ ವಿನಿಮಯ ಕಾರ್ಯಕ್ರಮ ಮುಂತಾದ ಕಾರ್ಯಯೋಜನೆಗಳನ್ನು ರೂಪಿಸಿತ್ತು. ಇದು ಮೈಸೂರು ರಾಜ್ಯದ ಆರ್ಥಿಕ ಸದೃಢತೆಗೆ ಅವಕಾಶವನ್ನು ಒದಗಿಸಿತ್ತು. ಪಾಶ್ಚಿಮಾತ್ಯ ಸಂಸ್ಕೃತಿ ಮತ್ತು ಆಧುನಿಕತೆಯ ವೈಚಾರಿಕ ವಿಚಾರಧಾರೆಗಳು ಮೈಸೂರು ರಾಜ್ಯದ ಆರ್ಥಿಕತೆಯ ಸ್ಥಾನಪಲ್ಲಟಕ್ಕೆ ಸುಭದ್ರವಾದ ತಳಹದಿಯನ್ನು ನಿರ್ಮಿಸಿ ಪೋಷಣೆ ಮಾಡಿದ್ದವು. ಪ್ರಸ್ತುತ ಲೇಖನದಲ್ಲಿ ಹೆಬ್ಬಾಳ್ ಫಾರಂನ ಸ್ಥಾಪನೆ ಮತ್ತು ಅದರ ಮಹತ್ವದ ಬಗ್ಗೆ ಚರ್ಚಿಸಲಾಗಿದೆ.

Downloads

Published

01.04.2024

How to Cite

MANJUKUMAR. (2024). ಹೆಬ್ಬಾಳ್ ಕೃಷಿ ಪ್ರಯೋಗಾತ್ಮಕ ಫಾರಂ: ಚಾರಿತ್ರಿಕ ಹಿನ್ನೆಲೆ. AKSHARASURYA, 3(04), 94 to 98. Retrieved from https://aksharasurya.com/index.php/latest/article/view/347