ಕಳಚೂರಿ ಬಿಜ್ಜಳ
Main Article Content
Abstract
ಕನ್ನಡ ಸಾಹಿತ್ಯದ ಕಾಲಗತಿಯಲ್ಲಿ 12ನೇ ಶತಮಾನಕ್ಕೆ ಮಹತ್ವದ ಸ್ಥಾನವುಂಟು. ಈ ಕಾಲದ ಪೂರ್ವದ ಮಹತ್ವದ ಕವಿಗಳಾದ ಪಂಪ, ರನ್ನಾದಿಗಳು ಸಂಸ್ಕೃತಭೂಯಿಷ್ಠ ಮಾರ್ಗಗನ್ನಡದಲ್ಲಿ ತಮ್ಮ ಕಾವ್ಯಗಳನ್ನು ರಚಿಸಿದ್ದರು. ಅದು ಅಂದಿನ ಪರಿಸರದ ಪ್ರೇರಣೆ ಹಾಗೂ ಒತ್ತಡವೂ ಆಗಿರಬಹುದು. ಇದಾದ ಒಂದೆರಡು ಶತಮಾನಗಳಲ್ಲಿ ಕನ್ನಡದ ಮಾರ್ಗಕಾವ್ಯ, ದೇಸಿತನಕ್ಕೆ ತಿರುಗಿ, ಅಚ್ಚಗನ್ನಡದ ಸೊಗಸನ್ನು ಪಡೆದದ್ದು ಆಶ್ಚರ್ಯದ ಸಂಗತಿ. 'ವಚನಗಳು' ಎಂಬ ಪ್ರಕಾರವೊಂದು ಕನ್ನಡ ನೆಲದ ಮೂಲಕ ಹುಟ್ಟಿ ವಿಶ್ವಮಾನ್ಯವಾದುದು ಈಗ ಇತಿಹಾಸ. ಈ ವಚನಕ್ರಾಂತಿಯ ಕಾಲವು ಎರಡು ಕಾರಣಗಳಿಗೆ ಮಹತ್ವ ಪಡೆದುಕೊಂಡಿದೆ. 1. ವಚನ ವಾಹ್ಮಯ 2. ಸಾಮಾಜಿಕ ಆಂದೋಲನ ಮೊದಲನೆಯದು ಸಾಹಿತ್ಯಕ ದೃಷ್ಟಿಯಾದರೆ, ಎರಡನೆಯದು ಸಾಮಾಜಿಕ ದೃಷ್ಟಿ. 12ನೆಯ ಶತಮಾನದ ಈ ವಚನ ಕ್ರಾಂತಿಯ ಕಾಲವು ಸಾಮಾಜಿಕವಾಗಿ ಹಲವು ಸ್ಥಿತ್ಯಂತರಗಳಿಗೆ ಎಡೆ ಮಾಡಿಕೊಟ್ಟ ಕಾಲವಾಗಿದೆ. ಮುಖ್ಯವಾಗಿ ಬಸವಾದಿಗಳ ಹೊಸಕ್ರಾಂತ ದೃಷ್ಟಿಯ ವೀರಶೈವ ಧರ್ಮ ಆಗ ಮುನ್ನೆಲೆಗೆ ಬಂದು ಸಾಮಾಜಿಕ ಕ್ರಾಂತಿಗೆ ಕಾರಣವಾಯಿತು. ಈ ಅವಧಿಯಲ್ಲಿ ಈ ಬಸವಾದಿಗಳ ಕರ್ಮಕ್ಷೇತ್ರವಾಗಿದ್ದ ಕಲ್ಯಾಣವನ್ನು ಆಳುತ್ತಿದ್ದ ಅರಸು ಬಿಜ್ಜಳದೇವರಾಯ. ಇತಿಹಾಸ ಈತನ ಬಗ್ಗೆ ನೇತ್ಯಾತ್ಮಕ ದೃಷ್ಟಿಯಲ್ಲಿ ಹೆಚ್ಚಾಗಿ ಕಾಣಿಸಿದೆ. ಅಂದಿನ ವೀರಶೈವ ಕಾವ್ಯಗಳು ಕೂಡ ಈ ಬಗೆಗೆ ಸರಿಯಾದ ನ್ಯಾಯವನ್ನು ಒದಗಿಸಲಿಲ್ಲ. ಏಕಮುಖ ದೃಷ್ಟಿಯನ್ನು ಅವು ಬಿಂಬಿಸಿವೆ. ಇತಿಹಾಸ ಕೊರೆದಿಟ್ಟ ಗೆರೆಯಂತೆ ಎಂದೂ ಇರುವುದಿಲ್ಲ. ಅದನ್ನು ವಿಶದವಾಗಿ, ಸಾವಧಾನವಾಗಿ ಅಭ್ಯಸಿಸಿದರೆ ಮಾತ್ರ ಸತ್ಯ ದೊರೆತೀತು. ಈ ಸಂಶೋಧನಾ ಲೇಖನ ಕಳಚೂರಿ ಬಿಜ್ಜಳನ ಬಗೆಗೆ ನಿರಪೇಕ್ಷ ದೃಷ್ಟಿಯಿಂದ ನೋಡುವ ಪ್ರಯತ್ನವಾಗಿದೆ. ಸಾಹಿತ್ಯಪಠ್ಯಗಳು, ಐತಿಹಾಸಿಕ ಪರಿಕರಗಳು ಇದರ ಹಿನ್ನೆಲೆಗಿರುವುದು ಅಧ್ಯಯನಕ್ಕೆ ಸಮಗ್ರತೆ ಒದಗಿಸಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕಪಟರಾಳ್ ಕೃಷ್ಣರಾವ್ (1970), ಕರ್ನಾಟಕ ಸಂಸ್ಕೃತಿಯ ಸಂಶೋಧನೆ. ಉಷಾ ಸಾಹಿತ್ಯ ಮಾಲೆ. ಮೈಸೂರು.
ರಾಗೌ (1992). ಕನ್ನಡ ಕಾವ್ಯಗಳಲ್ಲಿ ಐತಿಹಾಸಿಕ ವಿಚಾರಗಳು. ಚಿತ್ರಕೂಟ ಪ್ರಕಾಶನ. ಮೈಸೂರು.
ದೇವರಾಜಸ್ವಾಮಿ ಜಿ. ಕೆ. (2017). ಕಳಚೂರಿ ಶಾಸನಗಳು. ಯುವಸಾಧನೆ ಪ್ರಕಾಶನ. ಬೆಂಗಳೂರು.
ಚೆನ್ನಮಲ್ಲಿಕಾರ್ಜುನ (1949), ಶ್ರೀ ಚೆನ್ನಬಸವೇಶ್ವರರ ಕಾಲ. ಮುಪ್ಪಿನಸ್ವಾಮಿ ಮಠ, ಬ್ಯಾಡಗಿ.
ವೆಂಕಣ್ಣಯ್ಯ ಟಿ. ಎಸ್. (1958). ಕನ್ನಡ ಸಾಹಿತ್ಯ ಚರಿತ್ರೆ ಮತ್ತು ಇತರ ಲೇಖನಗಳು. ತಳುಕಿನ ವೆಂಕಣ್ಣಯ್ಯ ಸ್ಮಾರಕ ಗ್ರಂಥಮಾಲೆ. ಮೈಸೂರು.
ದೇಸಾಯಿ ಪಿ. ಬಿ. (ಮೂಲ). ಸದಾನಂದ ಕನವಳ್ಳಿ (ಅನು) (2017). ಬಸವೇಶ್ವರ ಮತ್ತು ಅವನ ಕಾಲ. ಶ್ರೀ ಜಗದ್ಗುರು ತೋಂಟದಾರ್ಯ ಸಂಸ್ಥಾನಮಠ, ಗದಗ.
ದೇಸಾಯಿ ಪಾಂಡುರಂಗರಾಯರು (1951), ಕರ್ನಾಟಕದ ಕಲಚುರಿಗಳು. ಕನ್ನಡ ಸಾಹಿತ್ಯ ಪರಿಷತ್ ಪತ್ರಿಕೆ, ಸಂಪುಟ-36, ಸಂಚಿಕೆ 1-2. ಬೆಂಗಳೂರು.
ಗೋವಿಂದ ಪೈ ಎಂ. (1940), ಮೂರು ಉಪನ್ಯಾಸಗಳು. ಕನ್ನಡ ರೀಸರ್ಚ್ ಆಫೀಸ್. ಧಾರವಾಡ.
ಚಿದಾನಂದಮೂರ್ತಿ ಎಂ. (1970), ಬಸವಣ್ಣನವರು. ಬೆಂಗಳೂರು ವಿಶ್ವವಿದ್ಯಾನಿಲಯ. ಬೆಂಗಳೂರು.
ವೆಂಕಟೇಶಮೂರ್ತಿ ಎಚ್. ಎಸ್. (ಸಂ) (2019). ಟಿ. ಎಸ್. ವೆಂಕಣ್ಣಯ್ಯ ಸಮಗ್ರ ಸಾಹಿತ್ಯ ಸಂಪುಟ. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು.