ಕಾವ್ಯ ಕುರಿತ ಕವಿಗಳ ಜಿಜ್ಞಾಸೆಗಳು

Authors

  • J. RAJA GUNDAPURA

Keywords:

ವಿಭಾವಾನುಭವ, ವ್ಯಭಿಚಾರಿ, ಗುಣದೋಷ, ದೀಪಕ, ಜೀಜ್ಞಾಸೆ, ಕಾವ್ಯದರ್ಶನ, ಲಘುಮಾ ಕೌಶಲ, ಸತ್ಯ ಶೋಧನೆ, ಸೌಂದರ್ಯ ಸಮೀಕ್ಷೆ, ನಿಚ್ಚಂ ಹೊಸತು

Abstract

ಲೋಕಾನುಭವ ಮತ್ತು ಕಾವ್ಯಾನುಭವ ಅಥವಾ ಕಲಾನುಭವ ಭಿನ್ನವಾದವು. ಕಲಾ ಮಾಧ್ಯಮಗಳು ಬೇರೆ ಬೇರೆಯಾದರೂ ಅವುಗಳಿಂದ ಉಂಟಾಗುವ ಪರಿಣಾಮ ಮಾತ್ರ ಒಂದೇ ಆಗಿರುತ್ತದೆ. ಅದು ಆನಂದಾನುಭವ. ಚಿತ್ರ, ಸಂಗೀತ, ನೃತ್ಯ, ಸಾಹಿತ್ಯ ಈ ಎಲ್ಲಾ ಕಲಾನುಭವಗಳು ನೀಡುವ ಪರಿಣಾಮವೇ ಆನಂದಾನುಭವ. ಈ ಕಲಾನುಭವಕ್ಕೆ ಕಲಾಭಿವ್ಯಕ್ತಿಗೆ ಮೂಲ ದ್ರವ್ಯವೇ ಲೋಕಾನುಭವ.

ಕಲಾ ಮಾಧ್ಯಮಗಳಲ್ಲಿ ಶಾಬ್ಧಿಕ ಮಾಧ್ಯಮವಾದ ಕಾವ್ಯ ಪ್ರಕಾರಕ್ಕೆ ಬಹಳ ಪ್ರಾಚೀನ ಇತಿಹಾಸವಿದೆ. ಹಾಗೆಯೇ ಕಾವ್ಯವನ್ನು ಕುರಿತ ಚರ್ಚೆ, ಜಿಜ್ಞಾಸೆಗೂ ಅಷ್ಟೇ ಪ್ರಾಚೀನತೆಯಿರುವುದನ್ನು ನಾವು ಕಾಣಬಹುದು. ಕಾವ್ಯದ ಸ್ವರೂಪ, ಕಾವ್ಯದ ಕಾರಣ, ಪರಿಣಾಮ, ಪ್ರಯೋಜನಗಳ ಕುರಿತ ಚರ್ಚೆಯು ಕಾವ್ಯ ಮೀಮಾಂಸೆ ಎಂಬ ಹೆಸರಿನಿಂದ ಪ್ರಚಲಿತವಾಗಿದೆ. ಕಾವ್ಯ ಕಾರಣ ಸಂಬಂಧದ ಚರ್ಚೆಯೇ ಕಾವ್ಯ ಮೀಮಾಂಸೆ. ಇದನ್ನು ಅನೇಕ ವಿದ್ವಾಂಸರು, ಪಂಡಿತರು, ಕವಿಗಳು ನಡೆಸುತ್ತಾ ಬಂದಿದ್ದು ಅನೇಕ ಕಾವ್ಯಮೀಮಂಸಾ ಕೃತಿಗಳ ರಚನೆಯಾಗಿರುವುದನ್ನು ಗಮನಿಸಬಹುದು.

Downloads

Published

05.01.2024

How to Cite

J. RAJA GUNDAPURA. (2024). ಕಾವ್ಯ ಕುರಿತ ಕವಿಗಳ ಜಿಜ್ಞಾಸೆಗಳು. AKSHARASURYA, 3(01), 90–99. Retrieved from https://aksharasurya.com/index.php/latest/article/view/299

Issue

Section

ಸಂಶೋಧನಾ ಲೇಖನಗಳು. | RESEARCH ARTICLE.