ಬೆಸಗರಹಳ್ಳಿ ರಾಮಣ್ಣರವರ ಪ್ರೇಮ ಕಥೆಗಳು: ಮರು ಚಿಂತನೆ

Authors

  • SHIVARAJU N.

Keywords:

ಪ್ರೀತಿ, ಸೌಂದರ್ಯ, ಅಂತಸ್ತು, ಜಾತಿ, ಕುಲ, ಸಮಸ್ಯೆ, ಆತಂಕ, ಜನ್ಮದಾತ

Abstract

ಕಥೆಯನ್ನು ಬರೆಯುವ ಕಥೆಗಾರನಿಗೆ ಕಥಾ ವಸ್ತುವಿನ ಆಯ್ಕೆಯಲ್ಲಿ ಸಾಕಷ್ಟು ಸಮಸ್ಯೆಗಳಿರುತ್ತವೆ. ಸತ್ಯ ಘಟನೆಗಳನ್ನು ಅನುಲಕ್ಷಿಸಿ ಕಥೆಗಳನ್ನು ಬರೆಯುವ ಸಂದರ್ಭದಲ್ಲಿ ಹಲವಾರು ಸಮಸ್ಯೆಗಳು ಎದುರಾಗುತ್ತವೆ. ಕೆಲವು ಸಂದರ್ಭಗಳಲ್ಲಿ ಕಾಲ್ಪನಿಕ ಕಥೆಗಳು ಸತ್ಯ ಘಟನೆಗಳಿಗೆ ಹೋಲಿಕೆಯಾಗುತ್ತವೆ. ಕನ್ನಡ ಸಾಹಿತ್ಯದಲ್ಲಿ ಹಲವಾರು ಪ್ರೇಮ ಸಂಬಂಧಿ ಕಥೆಗಳು ಪ್ರಕಟವಾಗಿದೆ. ಪ್ರೇಮ ಸಂಬಂಧೀ ಕಥೆಗಳನ್ನು ಬರೆದವರ ಸಾಲಿನಲ್ಲಿ ಡಾ. ಬೆಸಗರಹಳ್ಳಿ ರಾಮಣ್ಣನವರು ಸಹ ಪ್ರಮುಖರು.  ಅವರ ಪ್ರೇಮ ಕಥೆಗಳ ಸ್ವರೂಪವನ್ನು ಅಧ್ಯಯನ ಮಾಡುವುದು ಪ್ರಸ್ತುತ ಲೇಖನ ರಚನೆಯ ಹಿಂದಿನ ಉದ್ದೇಶ.

ಗ್ರಾಮಾಂತರ ಪ್ರದೇಶದ ಜನರ ಜೀವನವನ್ನು ಕುರಿತು ಹೊಸ ರೀತಿಯಲ್ಲಿ ಬರೆಯತೊಡಗಿದ ಕಥೆಗಾರರಲ್ಲಿ ಬೆಸಗರಹಳ್ಳಿ ರಾಮಣ್ಣ ಮೊದಲಿಗರಾಗುತ್ತಾರೆ. ಅವರು ಕಥೆಗಳನ್ನು ರಚಿಸುವ ಕಾಲದವರೆಗೂ ಹಳ್ಳೀಗಾಡಿನ ಜೀವನವನ್ನು ಕುರಿತು ಯಾರೂ ಬರೆದಿಲ್ಲವೆಂದು ಇದರ ಅರ್ಥವಲ್ಲ. ಬೆಸಗರಹಳ್ಳಿ ರಾಮಣ್ಣ ಅವರು ಪ್ರೇಮ ಸಂಬಂಧೀ ಕಥೆಗಳನ್ನು ಬರೆಯುವುದರಲ್ಲಿ ಸಿದ್ದ ಹಸ್ತರೆಂಬುದಕ್ಕೆ ಅವರ ಅನೇಕ ಕಥೆಗಳಲ್ಲಿ ನಿದರ್ಶನ ದೊರಕುತ್ತವೆ. ಅವರು ಬರೆದ ಅಪರೂಪದ ಪ್ರೇಮ ಕಥೆಗಳಲ್ಲಿ “ಶೂಲ” ಮುಖ್ಯವಾದದ್ದು. ಗ್ರಾಮೀಣ ಭಾಗದ ಪ್ರೇಮಿಗಳ ದುರಂತ ಅಂತ್ಯಕ್ಕೆ ಜಾತಿ ಕಾರಣವಾಗಿರದೇ ಅಂತಸ್ತು, ಕುಲ ಕಾರಣವಾಗಿರುವುದು ಈ ಕಥೆಯ ವಿಶೇಷತೆ. ‘ಗರ್ಜನೆ’ ಅವರ ವಿಶಿಷ್ಟ ಪ್ರೇಮ ಕಥೆ. ಈ ಕಥೆಯ ನಾಯಕನ ಪ್ರೀತಿಗೆ ಜಾತಿ, ಪ್ರೀತಿ, ಅಂತಸ್ತು ಎಲ್ಲ ಅಡ್ಡಿಯಾಗಿವೆ. ‘ಬೇಲಾ’ ಕತೆಯನ್ನು ಎಪ್ಪತ್ತರ ದಶಕದಲ್ಲಿ ಬಿಹಾರ ರಾಜ್ಯದಲ್ಲಿ ಸಿಡುಬು ರೋಗ ನಿರ್ಮೂಲನಕ್ಕಾಗಿ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಹೋಗಿದ್ದಾಗ ದೊರೆತ ಅನುಭವದಿಂದ ಬರೆದಿದ್ದು ಎಂದು ಕಥಾ ಸಂಕಲನದ ಮುನ್ನುಡಿಯಲ್ಲಿ ಹೇಳಿದ್ದಾರೆ.

Downloads

Published

05.01.2024

How to Cite

SHIVARAJU N. (2024). ಬೆಸಗರಹಳ್ಳಿ ರಾಮಣ್ಣರವರ ಪ್ರೇಮ ಕಥೆಗಳು: ಮರು ಚಿಂತನೆ. AKSHARASURYA, 3(01), 74–81. Retrieved from https://aksharasurya.com/index.php/latest/article/view/297

Issue

Section

ಸಂಶೋಧನಾ ಲೇಖನಗಳು. | RESEARCH ARTICLE.