ಭಾರತದ ‘ಪಾದ’ ತೋರಬಹುದಾದ ‘ದೀಪ’ ಬಾಬಾಸಾಹೇಬ್ ಅಂಬೇಡ್ಕರ್

Main Article Content

ಕೋಟಿಗಾನಹಳ್ಳಿ ರಾಮಯ್ಯ

Abstract

ಡಾ. ಬಿ.ಆರ್. ಅಂಬೇಡ್ಕರ್ ಅವರು ಕೇವಲ ದಲಿತರ ವಿಮೋಚಕರು ಮಾತ್ರವಲ್ಲ, ಭಾರತೀಯ ಸಮಾಜಶಾಸ್ತ್ರದ ಪಿತಾಮಹ, ಅರ್ಥಶಾಸ್ತ್ರಜ್ಞ ಮತ್ತು ಸಂವಿಧಾನ ಶಿಲ್ಪಿ. ಅವರ ಚಿಂತನೆಗಳ ಪ್ರಸ್ತುತತೆ ಮತ್ತು ದಲಿತ ರಾಜಕಾರಣದ ಇಂದಿನ ನಡೆಯ ನಡುವಿನ ದ್ವಂದ್ವಗಳನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಲಾಗಿದೆ. ಅಂಬೇಡ್ಕರ್ ಅವರ ನೈಜ ಆಶಯಗಳನ್ನು ಮರೆತು, ಅವರನ್ನು ಕೇವಲ ಮೂರ್ತೀಕರಣ ಮತ್ತು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳುತ್ತಿರುವ ಪ್ರಸ್ತುತ 'ಅಂಬೇಡ್ಕರ್‌ವಾದಿ'ಗಳ ಬೌದ್ಧಿಕ ದಾರಿದ್ರ್ಯವನ್ನು ಕಟುವಾಗಿ ಟೀಕಿಸಲಾಗಿದೆ. ಸ್ವಹಿತಾಸಕ್ತಿ ಹಾಗೂ ವಾರಸುದಾರಿಕೆಯ ಕಚ್ಚಾಟದಲ್ಲಿ ಅಂಬೇಡ್ಕರ್ ಚಿಂತನೆಗಳು ಹೇಗೆ ಹಾದಿ ತಪ್ಪುತ್ತಿವೆ ಎಂಬುದನ್ನು ವಿವರಿಸುತ್ತಾ , ಅವರ ನೈಜ ವಿಚಾರಧಾರೆಗಳನ್ನು ಪೂರ್ಣಪ್ರಜ್ಞೆಯೊಂದಿಗೆ ಅರ್ಥಮಾಡಿಕೊಂಡು ಮುನ್ನಡೆಯುವ ಅಗತ್ಯವನ್ನು ಪ್ರತಿಪಾದಿಸಲಾಗಿದೆ.

Article Details

Section

Byway

References

ಕೃಪೆ: ವಾರ್ತಾ ಭಾರತಿ