ಸಾಹಿತ್ಯ ಮತ್ತು ಸಮಾಜದ ಸಂಬಂಧ

Main Article Content

ಗೋವಿಂದರಾಯ ಎಂ.

Abstract

ಸಾಹಿತ್ಯ ಮನುಷ್ಯನ ಆತ್ಮ ಶುದ್ಧಿಗೆ ಇರುವಂತಹ ಅಕ್ಷರ ರೂಪ. ಸಾಹಿತಿ ಸಮಾಜದ ಒಂದು ಭಾಗವಾಗಿರುವುದರಿಂದ, ಆತ ತನ್ನ ಅಂತಃಚಕ್ಷುವಿನಿಂದ ಜಗದ ಎಲ್ಲ ವಿದ್ಯಮಾನಗಳನ್ನು ಗಮನಿಸಿ, ತನ್ನ ವಿಚಾರಶಕ್ತಿಯಿಂದ ಒಳಿತು ಕೆಡುಕನ್ನು ಕುರಿತ ಸಮಾಜದ ಅಭ್ಯುದಯಕ್ಕೆ ಬೇಕಾದ ಏನೆಲ್ಲ ಸಲಹೆಗಳನ್ನು ಸಾಹಿತ್ಯದ ಮೂಲಕ ತಿಳಿಸುತ್ತಾನೆ. ಅದು ಕಲ್ಪನೆಯ ಕೂಸಲ್ಲ. ಕಾಲದಿಂದ ಕಾಲಕ್ಕೆ ಸಾಹಿತಿಗಳು ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಪ್ರಯತ್ನಪಟ್ಟಿದ್ದಾರೆ. ಅಕ್ಷರಗಳು ಆತ್ಮ ಶೋಧನೆಗೆ ಅವಕಾಶ ಮಾಡಿಕೊಡಬೇಕು, ಅವುಗಳ ಮೂಲಕ ಅರಿವು ವಿಸ್ತರಿಸಿ, ಆತ್ಮವಿಶ್ವಾಸ ಬೆಳೆಸಿ ಸಮಾಜದಲ್ಲಿ ಅಹಂಕಾರ ಕಡಿಮೆ ಮಾಡುತ್ತಾ ಸದೃಢ ಸಮಾಜದ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ. ಸಾಹಿತ್ಯ ಸಮಾಜಶಾಸ್ತ್ರ ಮತ್ತು ಇತಿಹಾಸಕ್ಕಿಂತ ಭಿನ್ನವಾದದ್ದು. ಸಮಾಜಶಾಸ್ತ್ರಜ್ಞ ಗಮನಕೊಡದ ಒಳಬಾಳಿಗೂ ಸಾಹಿತ್ಯ ಗಮನ ಕೊಡುತ್ತದೆ. ಇತಿಹಾಸ ಭೂತವನ್ನು ಹಿಡಿದಿಟ್ಟಿರುವ ಒಂದು ದಾಖಲೆಯೂ ಆಗಿರುತ್ತದೆ. ಆದ್ದರಿಂದ ಸಾಹಿತ್ಯ ಸಮಾಜ ವ್ಯಕ್ತಿಗಳ ಬದುಕಿನೊಂದಿಗೆ ಬೆರೆತ ಚೌಕಟ್ಟು. ಕತ್ತಲ ರೂಪದಲ್ಲಿ ಕೊಳೆಯುತ್ತಿರುವ ಕನಸುಗಳು ಇಲ್ಲದೆ ನರಳುತ್ತಿರುವ ಜನತೆಗೆ, ಸಮಾಜಕ್ಕೆ ಒಂದು ತಿರುವನ್ನು ಕೊಡುವುದು, ಅಲ್ಲಿನ ಬದಲಾವಣೆಗೆ ಪ್ರಯತ್ನಿಸುವುದು ಸಾಹಿತ್ಯದ ಆದ್ಯ ಕರ್ತವ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ಜನಪದರು, ಪ್ರಾಚೀನ ಕವಿಗಳು, ವಚನಕಾರರು, ಕೀರ್ತನಕಾರರು, ಆಧುನಿಕ ಕನ್ನಡ ಕವಿಗಳು ಸಾಹಿತ್ಯ ಪ್ರಕಾರಗಳ ಮೂಲಕ 'ಏಕಾಂತತೆಗಿಂತ ಲೋಕಾಂತ ಅಗತ್ಯ' ಎಂಬ ಸಂದೇಶವನ್ನು ಸಾಹಿತ್ಯದ ಮೂಲಕ ಸಮಾಜಕ್ಕೆ ಮಾರ್ಗದರ್ಶನ ನೀಡಿದ್ದಾರೆ. ಸಾಹಿತ್ಯದ ಮುಖ್ಯ ಉದ್ದೇಶ ಬದುಕು ಹಸನಾಗಬೇಕು, ಸಮಾಜ ನೆಮ್ಮದಿಯುತವಾಗಿರಬೇಕು, ಮೋಸ, ವಂಚನೆ, ಅಂಧಕಾರ, ಮೌಡ್ಯದಿಂದ ಹೊರಬಂದು, ವೈಚಾರಿಕತೆಯ ಮೂಲಕ, ಶಾಂತಿ, ಸೌಹಾರ್ದತೆಯಿಂದ ಬಾಳ ಬೇಕೆಂಬ ಸಂದೇಶವನ್ನು ಸಾಹಿತ್ಯದ ಮೂಲಕ ನೀಡುತ್ತಾ ಬಂದಿದ್ದಾರೆ.

Article Details

Section

Essay

Author Biography

ಗೋವಿಂದರಾಯ ಎಂ.

ಸಹ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರು, ಕನ್ನಡ ವಿಭಾಗ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಕುಣಿಗಲ್.

How to Cite

ಗೋವಿಂದರಾಯ ಎಂ. (2023). ಸಾಹಿತ್ಯ ಮತ್ತು ಸಮಾಜದ ಸಂಬಂಧ. ಅಕ್ಷರಸೂರ್ಯ (AKSHARASURYA), 2(10), 236 to 244. https://aksharasurya.com/index.php/latest/article/view/255

References

ಸಾಹಿತ್ಯ, ಸಂಸ್ಕೃತಿ ಮತ್ತು ಸಮಾಜ (1994), ಶ್ರೀರಂಗ, ವೀಸಿ ಸಂಪದ, ಬೆಂಗಳೂರು.

ಸಾಹಿತ್ಯ ಸಂಬಂಧ (2012), ಟಿ. ಪಿ. ಅಶೋಕ, ವಸಂತ ಪ್ರಕಾಶನ, ಬೆಂಗಳೂರು.

ಸಾಹಿತ್ಯ ಮತ್ತು ಸಮಾಜ (2022), ಕಗ್ಗೆರೆ ಪ್ರಕಾಶ್, ಕಗ್ಗೆರೆ ಪ್ರಕಾಶನ, ಬೆಂಗಳೂರು.