ವಿಮಲಕೀರ್ತಿ ಎಂಬ ನಿತ್ಯಜ್ಞಾನಿ.

Authors

  • SURESH NAGALAMADIKE

Keywords:

ವಿಮಲಕೀರ್ತಿ, ದಾರ್ಶನಿಕತೆ, ಬುದ್ಧ, ಬೋಧಿಸತ್ವ

Abstract

ಸಂವಾದದ ಅಂತಿಮಗಳಿಗೆಯಲ್ಲಿ ಸೃಷ್ಟಿಸುವ ಅವತಾರಿ ಬೋಧಿಸತ್ವ, ಸುಗಂಧಕೂಟ, ಸುಗಂಧ ಪರಿಮಳ ಇತ್ಯಾದಿ ದಾರ್ಶನಿಕ ರೂಪಕಗಳು, ವಿಮಲಕೀರ್ತಿಯನ್ನು ಮತ್ತಷ್ಟು ಎತ್ತರಕ್ಕೇರಿಸಿವೆ. ಇಲ್ಲಿ ಧರ್ಮ ಮತ್ತೊಮ್ಮೆ ಚರ್ಚೆಯಾಗುತ್ತದೆ. ಸುಗಂಧಕೂಟ ಶಬ್ದ ಮತ್ತು ಭಾಷೆಯ ಮೂಲಕ ಧರ್ಮವನ್ನು ಬೋಧಿಸುವುದಿಲ್ಲ, ಬದಲಿಗೆ ಸುಗಂಧ ಪರಿಮಳದ ಏಕಾಗ್ರತೆ ದಾರಿಯಲ್ಲಿ ಅರಿವನ್ನು ಪಡೆಯುವಂತೆ ಹೇಳುತ್ತಾನೆ. ಅರಿವನ್ನಾಗಲೀ ಗುರುವನ್ನಾಗಲೀ ದಕ್ಕಿಸಿಕೊಳ್ಳುವುದಕ್ಕೆ ಕೇವಲ ಭಾಷೆ ಸಾಕೇ? ಎಂಬ ಪ್ರಶ್ನೆ ತೀರಾ ಅನುಭಾವಿತನದ ಜಿಜ್ಞಾಸೆಯನ್ನು ಉಂಟುಮಾಡುತ್ತದೆ. ಅರಿವು ಮತ್ತು ಸಿದ್ಧಿ ಗಳನ್ನು ಸಾಧಿಸುವ ಪ್ರತಿ ಬೋಧಿಸತ್ವನಿಗೂ ಇದೊಂದು ಸವಾಲು. ಲೋಕದ ಕೊಳಕನ್ನು ನಿವಾರಿಸುವ ಮತ್ತು ಮನದ ಕೆಡಕನ್ನು ದೂರಮಾಡಿಕೊಳ್ಳುವ ಪರಿಯನ್ನು ವಿಮಲ ರೂಪಕ ದಾರಿಯಲ್ಲಿ ಹಿಡಿದಿದ್ದಾನೆ. ಇಂಥ ಕಡೆ ಆತನ ಒಳ ತತ್ವಗಳು ಮನುಷ್ಯ ಮತ್ತು ಲೋಕ ಸಂಬಂಧದ ಕುರುಹುಗಳು ಧರಿಸುತ್ತವ. ಹಲವು ಬಾರಿ ಶಬ್ಧ ಬರಿ ಬುದ್ದಿಯ ವಸ್ತುವಾದಾಗ, ನಿಸರ್ಗವೇ ಮನಸ್ಸನ್ನು ಎಚ್ಚರಿಸುತ್ತದೆ. ಇದರ ಅಂತರಂಗವೇ ಆದ ಸುಗಂಧ ಪರಿಮಳ ಅರಿವಿನ ತಾರಕವನ್ನು ಮುಟ್ಟುವುದಕ್ಕೆ ಸಹಾಯಕವಾಗಬಹುದು. ಸುಗಂಧದ ರೂಪಕಲೋಕ ವಿಮಲಕೀರ್ತೀಯ ಬುದ್ಧಬೂಮಿ ಮತ್ತು ಶುದ್ಧ ಭೂಮಿಯಗಿದೆ. ಇದರಲ್ಲಿ ಬುದ್ಧನ ಸಕಲಜೀವಿಗಳ ಸಮಾನತೆಯ ತತ್ವವನ್ನು ಕಾಣಬಹುದು. ಮೇಲುನೋಟಕ್ಕೆ ಸುಗಂಧಲೋಕ ಸ್ವರ್ಗದ ಕಲ್ಪನೆಯನ್ನು ತೋರಬಹುದು. ಆದರೆ, ಜೀವಿ ಇಲ್ಲಿಗೆ ಮುಟ್ಟಿದ ಮೇಲೆ ಒಳಿತು-ಕೆಡುಕುಗಳ ದ್ವಂದ್ವವನ್ನು ಮೀರಬಲ್ಲ. ಬಹುಶಃ ಇದೇ ಅರಿವಿನ ಉತ್ತುಂಗದ ಸ್ಥಿತಿ. ಆತ್ಯಂತಿಕವಾಗಿ ಬುದ್ಧಲೋಕವನ್ನು ವಿಮಲಕೀರ್ತಿ ಸರಳತತ್ವದ ಮುಖೇನ ವಿಸ್ತರಿಸಿದ್ದಾನೆ. ಈತನ ನಿರ್ದೇಶ ಸೂತ್ರವನ್ನು ಸರಳ ದಾರ್ಶನಿಕತೆಯನ್ನು ಒಳಗೊಡ ಸಾಹಿತ್ಯ ಕೃತಿಯಂತೆ ಗ್ರಹಿಸಬಹುದು. ಹರವೆಯವರು ಸಂಗ್ರಹಿಸಿ ಅನುವಾದಿಸಿರುವ ಕನ್ನಡ ನಿರ್ದೇಶ ಸೂತ್ರವನ್ನು ಓದುವಾಗ, ಈ ಅನುಭವವಂತೂ ಖಂಡಿತ ದಕ್ಕಿಸಿಕೊಳ್ಳಬಹುದು. ನಡೆಗೆಟ್ಟ ಇಂದಿನ ಬದುಕಿಗೆ ವಿಮಲಕೀರ್ತಿ ಸಾಕಷ್ಟು ದಾರಿಗಳನ್ನು ತೋರಬಲ್ಲ. ಜೊತೆಗೆ ಆರೋಗ್ಯಕರ ಬೌದ್ಧಿಕ ಸಂವಾದವೇ ತುಂಡಾಗುತ್ತಿರುವ ಇಂದಿನ ಸಮಯದಲ್ಲಿ, ಇಲ್ಲಿನ ಮಾತು-ಕತೆಗಳು ಎಚ್ಚರಿಸಬಲ್ಲವು. ಬೌದ್ಧಿಕ ಆತ್ಮರತಿಗೆ ಇಲ್ಲಿನ ಸುಗಂಧ ನಮಗೆ ಪಾಠ ಕಲಿಸಲಿ. ವಿಮಲಕೀರ್ತಿಯ ಮೂಲಕ ನನ್ನöನ್ನು ಹಲವು ಆಲೋಚನೆಗಳಿಗೆ ದೂಡಿದ ಹಿರಿಯ ಗೆಳೆಯರಾದ ಹರವೆಯವರಿಗೆ ಕೃತಜ್ಞತೆಗಳು.

Downloads

Published

05.10.2023

How to Cite

SURESH NAGALAMADIKE. (2023). ವಿಮಲಕೀರ್ತಿ ಎಂಬ ನಿತ್ಯಜ್ಞಾನಿ. AKSHARASURYA, 2(11), 28–39. Retrieved from https://aksharasurya.com/index.php/latest/article/view/247

Issue

Section

ಕಾಲುದಾರಿ. | BYWAY.