ಡಿವಿಜಿ ಅವರ ಮಂಕುತಿಮ್ಮನ ಕಗ್ಗ-ಒಂದು ಅವಲೋಕನ.

Authors

  • RUKMINI H.S.

Keywords:

ಕಗ್ಗ, ಉಪನಿಷತ್, ಜೀವನ, ನೈತಿಕ ಮೌಲ್ಯ, ವೈಶಿಷ್ಟ್ಯತೆ

Abstract

ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾಗಿರುವ ಡಿ.ವಿ.ಗುಂಡಪ್ಪನವರು ಸೃಜಿಸಿದ “ಮಂಕುತಿಮ್ಮನ ಕಗ್ಗ”ವು ಬದುಕಿನ ಸಾರವನ್ನು ವಿಶ್ಲೇಶಿಸುವ ಅತ್ಯದ್ಭುತವಾದ ಕೃತಿಯಾಗಿದೆ. ಭಗವದ್ಗೀತೆ ಉಪನಿಷತ್‌ಗಳ ಸಾರವೆನ್ನುತ್ತಾರೆ. ಗುಂಡಪ್ಪನವರ ಕಗ್ಗವನ್ನು ಸಮರ್ಪಕವಾಗಿ ಅರ್ಥೈಸಿಕೊಂಡಿದ್ದೇ ಆದಲ್ಲಿ ಇಡೀ ಉಪನಿಷತ್‌ಗಳ ಸಾರವನ್ನೇ ಅರ್ಥೈಸಿಕೊಂಡಂತೆ ಎನ್ನುವ ವಿದ್ವಾಂಸರ ಮಾತೊಂದಿದೆ. ಇದರಲ್ಲಿ ಜನಪದರ ನುಡಿಗಟ್ಟು, ವಚನಕಾರರ ಮಾತಿನ ಬೆಳಕು, ಈ ಮೊದಲಾದವುಗಳ ಸಾರ ಮಡುಗಟ್ಟಿದೆ. ಇದರಲ್ಲಿ ಏನಿಲ್ಲ ಎಂದು ಹೇಳುವಂತಿಲ್ಲ. ಡಿ.ವಿ.ಜಿ ರವರು ತಮ್ಮ ಜೀವನಾನುಭವದ ಸಾರವನ್ನು ಉದಾಹರಣೆ ಸಹಿತ ವಿಶ್ಲೇಷಿಸುತ್ತಾರೆ. ಒಟ್ಟಾರೆಯಾಗಿ ಗುಂಡಪ್ಪನವರ ಜ್ಞಾನದ ಸಾರವೇ ಈ “ಮಂಕುತಿಮ್ಮನ ಕಗ್ಗ” ವಾಗಿದೆ.

‘ಮಂಕುತಿಮ್ಮ’ ಎಂಬ ಅಂಕಿತನಾಮವನ್ನೊಂದಿದ ನಾಲ್ಕು ಸಾಲುಗಳ ವಿಶಿಷ್ಟ ಶೈಲಿಯಲ್ಲಿನ ಪದ್ಯ ರಚನೆ ಜೀವನದ ತಿರುಳನ್ನು ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುವಂತಹ ಮಹತ್ವಪೂರ್ಣ ಕೃತಿಯಾಗಿದೆ. ಗುಂಡಪ್ಪನವರು ಬಹುಷಃ ತಾವು ಹಳೆಯ ವಸ್ತುವಿಷಯ ವಿಚಾರಗಳನ್ನು ಕುರಿತು ಮಾತನಾಡುತ್ತಿದ್ದುದರಿಂದಲೂ ಏನೋ ಹಳೆಯ ಶೈಲಿಯನ್ನೇ ಅಳವಡಿಸಿಕೊಂಡು ಕಗ್ಗವನ್ನು ರಚಿಸಿದ್ದಾರೆ. ಕಗ್ಗದ ಮತ್ತೊಂದು ವೈಶಿಷ್ಟ್ಯತೆಯೆಂದರೆ ಕೃತಿಯ ಆದಿ, ಮಧ್ಯ ಮತ್ತು ಅಂತ್ಯ ಭಾಗದ ಮಧ್ಯ ಮಧ್ಯ ಎಲ್ಲೇ ಯಾವ ಪದ್ಯವನ್ನೇ ಓದಿದರೂ, ಮುಖ್ಯವಿಚಾರ ಸ್ಪಷ್ಟವಾಗಿ ಗ್ರಹಿಕೆಗೆ ಸಿಗುವಂಥದ್ದು. ಜೀವನದ ಆತ್ಮಾನುಭವದ ಪರಿಪಾಕದಿಂದ ಹೊರಹೊಮ್ಮಿದ ಮಂತ್ರ ಸದೃಶವಾದ ಉಕ್ತಿ ಹಾಗೂ ಎಲ್ಲರ ಬಾಳ್ವೆಗೆ ಸಲ್ಲುವ ಕೃತಿಯಿದು.

ನೊಂದ ಜೀವಗಳಿಗೆ ಸಾಂತ್ವಾನವನ್ನು ನೀಡುತ್ತಾ, ಜೀವನದ ಉಪದೇಶಗಳನ್ನು ಪ್ರೀತಿಯಿಂದ ಉಪದೇಶಿಸುತ್ತಾ, ಬದುಕಿನ ಸುಗಮ ಪಯಣಕ್ಕೆ ಅಗತ್ಯವಾದ ಜೀವನಾನುಭವವನ್ನು ಉಣಬಡಿಸುತ್ತಿರುವ ‘ಮಂಕುತಿಮ್ಮನ ಕಗ್ಗ’ ಕೇವಲ ಕಾವ್ಯವಷ್ಟೇ ಅಲ್ಲ. ಇದು ಕನ್ನಡದಲ್ಲೇ ಮೈದೆಳೆದು ಬಂದಿರುವ ಉಪನಿಷದ್ವಾಣಿ. ಇಡೀ ಕೃತಿ ಬದುಕಿಗೆ ಗುರಿ ಹೇಗೆ ಇರಬೇಕು, ಮಾನವ ಚಿಂತಾಮುಕ್ತನಾಗಿ ಹೇಗಿರಬೇಕು, ಜೀವನವನ್ನು ಹೇಗೆ ನಡೆಸಬೇಕು ಬದುಕಿನಲ್ಲೆದುರಾಗುವ ಸಂಕಷ್ಟಗಳನ್ನು ಹೇಗೆ ಎದುರಿಸಬೇಕು……… ಈ ಮುಂತಾದ ವಸ್ತುವಿಷಯಗಳನ್ನು ಸಾದೃಷ್ಯವಾಗಿ ವಿಶ್ಲೇಸಿಸುತ್ತದೆ. ಇಂತಹ ಅತ್ಯದ್ಭುತವಾದ ಕೃತಿಯಲ್ಲಿನ ಪ್ರಿಯವೆನಿಸಿದ ಕೆಲವು ಪದ್ಯಗಳ ಆಧಾರದ ಮೇಲೆ ಕಗ್ಗದ ವಿಶ್ಲೇಷಣೆ ಮಾಡುವ ಪುಟ್ಟ ಪ್ರಯತ್ನ ನನ್ನದಾಗಿರುತ್ತದೆ.

Downloads

Published

05.09.2023

How to Cite

RUKMINI H.S. (2023). ಡಿವಿಜಿ ಅವರ ಮಂಕುತಿಮ್ಮನ ಕಗ್ಗ-ಒಂದು ಅವಲೋಕನ. AKSHARASURYA, 2(10), 221 to 227. Retrieved from https://aksharasurya.com/index.php/latest/article/view/243

Issue

Section

ಪ್ರಬಂಧ. | ESSAY.