ಶರಣ ಸಂಕುಲ: ಸಾಮಾಜಿಕ ನ್ಯಾಯದ ಪರಿಕಲ್ಪನೆ
Main Article Content
Abstract
ಸಾಮಾಜಿಕ ನ್ಯಾಯಕ್ಕಾಗಿ ನಾವು ಮಾನವ ಹಕ್ಕುಗಳ ಕಡೆಗೆ ಗಮನ ಹರಿಸಿದಾಗ ಮತ್ತೆ ಮತ್ತೆ ನಮಗೆ ಶರಣರು ಬಹಳ ವಿಶಿಷ್ಟವಾಗಿ ಕಾಣುತ್ತಾರೆ. ಶರಣ ಸಂಕುಲ ಅನ್ನೋದು ಬಸವಣ್ಣನವರ ನವಸಮಾಜ. ಅಸ್ಪೃಶ್ಯರು, ಮಹಿಳೆಯರು, ಬಡವರು ಮತ್ತು ಎಲ್ಲ ಕಾಯಕಜೀವಿಗಳು ಸರ್ವಸಮಾನತೆಯನ್ನು ಆ ಶರಣ ಸಂಕುಲದಲ್ಲಿ ಅನುಭವಿಸಿದರು. ಎಲ್ಲ ಜಾತಿಗಳ ಎಲ್ಲ ಜನರನ್ನು ತೆಗೆದುಕೊಂಡು ಹೊಸ ಮಾನವನನ್ನು ಶರಣರು ಸೃಷ್ಟಿಸಿದರು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತ, ಸಮಾಜದ ಕಟ್ಟಕಡೆಯ ಮನುಷ್ಯರನ್ನು ಮೊಟ್ಟ ಮೊದಲು ಗುರುತಿಸುವುದು ಶರಣರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಿದೆ. ಉಳ್ಳವರ ಮತ್ತು ಬಡವರ ಬಗ್ಗೆ ಅರಿವು ಮೂಡಿದಾಗ ಸಾಮಾಜಿಕ ವೈರುಧ್ಯಗಳು ಸ್ಪಷ್ಟವಾಗಿ ಗೋಚರಿಸುವವು. ಒಂದು ಸಮಾಜಕ್ಕೆ ನ್ಯಾಯ ಒದಗಿಸಬೇಕಾದರೆ ಈ ರೀತಿಯಾಗಿ ಸಮಾಜದಲ್ಲಿನ ವೈರುಧ್ಯಗಳನ್ನು ಗುರುತಿಸಬೇಕಾಗುತ್ತದೆ. ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸುತ್ತಲೇ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ವೈರುಧ್ಯಗಳನ್ನು ಗುರುತಿಸುವ ಕ್ರಿಯೆ ಬಹಳ ಗುರುತರವಾದುದು. ಇಂತಹ ಅದ್ವಿತೀಯವಾದ ಚಿಂತನಾ ಕಾಣಿಕೆಯನ್ನು ಶರಣರು 12ನೇ ಶತಮಾನದಲ್ಲಿಯೇ ನೀಡಿದ್ದು ಐತಿಹಾಸಿಕವಾಗಿದೆ. ಎಲ್ಲ ರೀತಿಯ ಅಸಮಾನತೆಯನ್ನು ಮೆಟ್ಟಿ ನಿಂತು ಮಾನವ ಹಕ್ಕುಗಳ ಧ್ವಜವನ್ನು ಹಾರಿಸಿದ ಸಮಾಜವನ್ನು ಮೊದಲ ಬಾರಿಗೆ ಈ ಭೂಮಿಗೆ ತಂದರು.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಡಾ. ಚನ್ನಕ್ಕ ಪಾವಟೆ, ಶರಣ ಸಂಸ್ಕೃತಿ: ಮುಖಾಮುಖಿ (ಮೇ 2004), ಚಿತ್ತರಗಿ ಶ್ರೀ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ, ಇಲಕಲ್.
ಡಾ. ವೀರಣ್ಣ ದಂಡೆ, ವಚನ ಸಾಹಿತ್ಯ ಮೀಮಾಂಸೆ (2007), ಬಸವ ಸಮಿತಿ, ಬಸವ ಭವನ, ಶ್ರೀ ಬಸವೇಶ್ವರ ರಸ್ತೆ, ಬೆಂಗಳೂರು.
ಡಾ. ಜಯಶ್ರೀ ದಂಡೆ (ಸಂ), ನಡುಗನ್ನಡ ಸಾಹಿತ್ಯ ಸಂಗ್ರಹ (2009), ಪ್ರಸಾರಾಂಗ, ಗುಲಬರ್ಗಾ ವಿಶ್ವವಿದ್ಯಾಲಯ, ಗುಲಬರ್ಗಾ-585106.
ಪ್ರೊ. ಸಿದ್ದಣ್ಣ ಲಂಗೋಟಿ (ಚಾಂದಕವಠ), ವಿಶ್ವಗುರು ಬಸವಣ್ಣನವರು (2016), ಪ್ರಸಾರಾಂಗ, ವಚನ ವಿಶ್ವವಿದ್ಯಾಲಯ, ಅನುಭವ ಮಂಟಪ, ಬಸವ ಕಲ್ಯಾಣ, ಬೀದರ.
ವಿ.ಎಂ. ಥಾಲಬಾವಡಿ (ಸಂ), ಶರಣರ ವಚನಗಳಲ್ಲಿ ಬಸವಣ್ಣ (2006), ಉತ್ತರ ಕರ್ನಾಟಕ ಯುವ ಲೇಖಕರ ವೇದಿಕೆ, ಶಾಖೆ: ಇಂಡಿ-586209.
ಡಾ. ವಿಜಯಕುಮಾರಿ ಕರಿಕಲ್, ವಚನ ಸಾಹಿತ್ಯದಲ್ಲಿ ವೈಶಿಷ್ಟ್ಯತೆ (2009), ಅಖಿಲ ಕರ್ನಾಟಕ ವಚನ ಸಾಹಿತ್ಯ ಪರಿಷತ್ತು, ಮೈಸೂರು-23.
ಪ್ರೊ. ಎನ್. ಕೆ. ರಾಮಚಂದ್ರಪ್ಪ (ಸಂ), ಅಂಬಿಗರ ಚೌಡಯ್ಯನವರ ಸಮಾಜ ಮತ್ತು ಸಂಸ್ಕೃತಿ (ಡಿಸೆಂಬರ್ 2009), ಸಿಂಚನ ಪ್ರಕಾಶನ, ವಿದ್ಯಾನಗರ, ಪಶ್ಚಿಮ ಬಡಾವಣೆ, ಹಾವೇರಿ.