ವಸುಧೇಂದ್ರ ಕಥೆಗಳು: ಸಾಮಾಜಿಕತೆ.

Authors

  • DORESHA

Keywords:

ಜಾಗತೀಕರಣ, ವಸಾಹತುಶಾಹಿ, ನಗರ, ಸಂಸ್ಕೃತಿ, ಗ್ರಾಮೀಣ, ರೈತ, ದುಡಿಮೆ, ಬದುಕು

Abstract

ಈ ಶತಮಾನದಲ್ಲಿ ಸಾರಿಗೆ ಮತ್ತು ಸಂಪರ್ಕ ಸಾಧನಗಳು ಹೆಚ್ಚು ಅಭಿವೃದ್ಧಿ ಹೊಂದುತ್ತಿರುವುದನ್ನು ಕಾಣಬಹುದು. ವೈಜ್ಞಾನಿಕ ಮತ್ತು ತಾಂತ್ರಿಕ ಪ್ರಗತಿಯಿಂದಾಗಿ ವಿಶ್ವವು ಒಂದು ಚಿಕ್ಕ ಗ್ರಾಮವಾಗಿ ಗೋಚರಿಸುತ್ತಿದೆ. ಆಧುನಿಕ ತಂತ್ರಜ್ಞಾನವನ್ನು ಬಳಸಿ ಅನೇಕ ಸಾರಿಗೆ ವ್ಯವಸ್ಥೆಗಳು ಲಭ್ಯವಿದ್ದು ಬಹುದೂರದಲ್ಲಿರುವವರನ್ನು ಕಡಿಮೆ ಅವಧಿಯಲ್ಲಿಯೇ ತಲುಪುವ ಮಟ್ಟಕ್ಕೆ ಮಾನವ ಮುಂದುವರೆದಿದ್ದಾನೆ. ಇಷ್ಟೇ ಅಲ್ಲದೇ ಸಂಪರ್ಕ ಕ್ಷೇತ್ರದಲ್ಲಿ ಬೃಹತ್ ಕ್ರಾಂತಿಯನ್ನು ಮಾಡಿದ್ದು ಬಾನುಲಿ, ದೂರದರ್ಶನ, ಇ-ಮೇಲ್, ಅಂತರ್‌ಜಾಲ, ಮೊಬೈಲ್ ಇತ್ಯಾದಿಗಳ ಮೂಲಕ ಬಹುದೂರದ ಪ್ರದೇಶಗಳಿಗೆ ಕಡಿಮೆ ಅವಧಿಯಲ್ಲಿಯೇ ತಲುಪುವ ಮಟ್ಟಕ್ಕೆ ಮಾನವ ಬೆಳೆದಿದ್ದಾನೆ. ಸಾಮಾಜಿಕ ಬದಲಾವಣೆ ಒಂದು ನಿರಂತರ ಪ್ರಕ್ರಿಯೆ, ಯಾವುದೇ ವ್ಯಕ್ತಿ ಅಥವಾ ಸಮಾಜವಾದರೂ ಸಹ ನಿರಂತರ ಬದಲಾವಣೆಯನ್ನು ಬಯಸುವುದು. ಬದಲಾವಣೆ ಇಲ್ಲದೆ ಹೋದಲ್ಲಿ ಜಡತ್ವ ಉಂಟಾಗಿ ಕ್ರಿಯೆಗಳು ಸರಾಗವಾಗಿ ನಡೆಯದೆ ಹೋಗಬಹುದು. ಸಾಮಾಜಿಕ, ಆರ್ಥಿಕ, ಧಾರ್ಮಿಕ, ಸಾಂಸ್ಕೃತಿಕ ಕ್ಷೇತ್ರದಲ್ಲಿ ಇದ್ದ ಬದಲಾವಣೆಯು ಹಿಂದಿನದಕ್ಕೆ ಹೋಲಿಸಿದಾಗ ಪ್ರಸ್ತುತದಲ್ಲಿ ಅಗಾಧವಾದ ವ್ಯತ್ಯಾಸಗಳನ್ನು ಕಾಣಬಹುದು. ಸಾಮಾಜಿಕ ಬದಲಾವಣೆಯು ತತ್‌ಕ್ಷಣದಲ್ಲಿ ಸಂಭವಿಸದು. ಅದು ನಿರಂತರವಾಗಿ ಅಭಿವೃದ್ಧಿ ಹೊಂದುತ್ತಿರುತ್ತದೆ.

Downloads

Published

05.09.2023

How to Cite

DORESHA. (2023). ವಸುಧೇಂದ್ರ ಕಥೆಗಳು: ಸಾಮಾಜಿಕತೆ. AKSHARASURYA, 2(10), 189 to 203. Retrieved from https://aksharasurya.com/index.php/latest/article/view/240

Issue

Section

ಪುಸ್ತಕ ವಿಮರ್ಶೆ. | BOOK REVIEW.