ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಚಿಂತನೆ.

Authors

  • VANAJAKSHI R. HALLIYAVAR

Keywords:

ಕೀರ್ತನಕಾರ, ಹರಿಪ್ರವರ್ತಕ, ಸಮಾಜ ಸುಧಾರಕ, ಆತ್ಮಸಮರ್ಪಕ, ಸದ್ಗುಣಸದಾಚಾರಿ, ಸಮಾನತೆಯ ಹರಿಕಾರ

Abstract

ಮಧ್ಯಕಾಲೀನ ಕನ್ನಡ ಸಾಹಿತ್ಯದಲ್ಲಿ ಪ್ರಧಾನವಾದ ಎರಡು ಪ್ರಮುಖ ಭಕ್ತಿಪಂಥಗಳೆಂದರೆ, ಶೈವ ಭಕ್ತಿಪಂಥ ಹಾಗೂ ಶ್ರೀವೈಷ್ಣವ ಭಕ್ತಿಪಂಥಗಳು. ಹನ್ನೆರಡನೇ ಶತಮಾನದ ವಚನಕಾರರು ಶಿವೋಪಾಸಕರಾಗಿದ್ದು, ಸಮಾಜದ ಅಂಕುಡೊಂಕುಗಳನ್ನು ಧಾರ್ಮಿಕ ತಳಹದಿಯ ಮೇಲೆ ತಿದ್ದಲು ಪ್ರಯತ್ನಿಸಿದರೆ, ಕೀರ್ತನಕಾರರು ಶ್ರೀವೈಷ್ಣವ ಭಕ್ತಿಪಂಥವನ್ನು ಮೂಲವಾಗಿರಿಸಿಕೊಂಡು ಸಾಮಾಜಿಕ ಚಿಂತನೆ ನಡೆಸಲು ಪ್ರಯತ್ನಿಸಿದರು. ಕನಕದಾಸರು ಕೀರ್ತನಕಾರರಷ್ಟೇ ಅಲ್ಲ ಉಗಾಭೋಗ ಸುಳಾದಿಗಳನ್ನೂ, ಮೋಹನ ತರಂಗಿಣಿ, ಹರಿಭಕ್ತಸಾರ, ರಾಮಧಾನ್ಯ ಚರಿತ್ರೆ, ನಳಚರಿತ್ರೆ, ನೃಸಿಂಹಸ್ತವ ಎಂಬ ಕೃತಿಗಳನ್ನು, ಬೆಡಗಿನ ವಚನಗಳಂತಹ ಮಂಡಿಗೆಗಳನ್ನು ರಚಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇಷ್ಟೊಂದು ವಿಸ್ತಾರವಾದ ಅವರ ಸಾಹಿತ್ಯ ಕೃಷಿಯಲ್ಲಿ ಹೆಚ್ಚು ಕಡಿಮೆ ಧರ್ಮದ ತಳಹದಿಯ ಮೇಲೆ ಸಾಮಾಜಿಕ ಚಿಂತನೆ ಕೇಂದ್ರೀಕೃತಗೊಂಡಿರುವುದು ಗಮನಾರ್ಹ ಸಂಗತಿ.

ಪ್ರಸ್ತುತ ಲೇಖನದಲ್ಲಿ ಕನಕದಾಸರ ಕೆಲವು ಪ್ರಮುಖ ಕೀರ್ತನೆಗಳನ್ನು ಕೇಂದ್ರೀಕರಿಸಿ, ಸಾಮಾಜಿಕ ಚಿಂತನೆಗೆ ಅವರು ನೀಡಿದ ಕೊಡುಗೆಯನ್ನು ಕುರಿತು ಅವಲೋಕಿಸುವ ಪ್ರಯತ್ನ ಮಾಡಲಾಗಿದೆ. “ಭಾಗವತ ಮನೋಧರ್ಮದ ಕನಕದಾಸರ ಸಾಮಾಜಿಕ ಚಿಂತನೆ, ಅಧ್ಯಾತ್ಮಕ ತಳಹದಿಯ ಮೇಲೆಯೇ ಅನಾವರಣಗೊಳ್ಳುವಂತಹದ್ದು, ದ್ವೈತ ಮತಭಾವದ ಹರಿನಾಮಸ್ಮರಣೆಯಿಂದ ಆರಂಭವಾದ ಅವರ ಸಾಧನೆ, ಭಕ್ತಿಯ ಆರ್ದತೆ, ಆತ್ಮಶೋಧನೆ, ಆತ್ಮ ಸಮರ್ಪಣೆ, ಸಾಮಾಜಿಕ ಅಗ್ನಿ ದಿವ್ಯಗಳ ಮೂಲಕ ಹಾಯ್ದು ಅದ್ವೈತ ಸಿದ್ದಿಯ ಪರಮಗುರಿಯನ್ನು ತಲುಪಿದೆ.”

ಕನಕದಾಸರು ಕೌಟುಂಬಿಕ ಬದುಕು ಹಾಗೂ ಸಾಮಾಜಿಕ ಸ್ಥಿತಿಗತಿಗಳನ್ನು ತೆರೆದ ಕಣ್ಣಿನಿಂದ ಕಂಡು, ಬಿಚ್ಚುಮನದಿ ಅನುಭವಿಸಿದವರು. ಅವರ ಅನುಭವ ಲೋಕ ವಿಸ್ತಾರ ಹಾಗೂ ವೈವಿದ್ಯಮಯವಾದದ್ದು, ಸಮಾಜದಲ್ಲಿ ಕಾಣುವ ಸರಿ-ತಪ್ಪು, ಒಳಿತು-ಕೆಡಕು, ನೋವು-ನಲಿವು, ನ್ಯಾಯ-ಅನ್ಯಾಯ, ನೀತಿ-ಅನೀತಿ, ಪ್ರಾಮಾಣಿಕ-ಅಪ್ರಾಮಾಣಿಕ, ನಿಷ್ಠೆ-ಮೋಸ, ವಂಚನೆಗಳೆಲ್ಲವನ್ನು ಪ್ರತ್ಯಕ್ಷ ಜ್ಞಾನದಿಂದ ಕಂಡವರು. ಹೀಗಾಗಿ ಇವರ ಕೀರ್ತನೆಗಳಲ್ಲಿ ವೈಯಕ್ತಿಕ ವಿಕಾಸಕ್ಕಾಗಿ, ಭಕ್ತಿಯ ಬೋಧನೆಯೊಂದಿಗೆ ಸಾಮಾಜಿಕ ಜಾಗೃತಿಯು ಒಡಮೂಡಿದೆ. ವ್ಯಕ್ತಿ ಬದುಕಿನ ಸಾರ್ಥಕತೆಗೆ ಅಗತ್ಯವಾದ ಕ್ರಮಗಳನ್ನು ಅವರ ಬಹುತೇಕ ಕೀರ್ತನೆಗಳಲ್ಲಿ ಕಾಣಬಹುದು.

ಪ್ರಸ್ತುತ ಲೇಖನದಲ್ಲಿ ಕನಕದಾಸರು ಚಿಂತಿಸಿದ ಕುಲದ ಪ್ರಶ್ನೆ, ವರ್ಣವ್ಯವಸ್ಥೆಯ ಲೋಪದೋಷ, ಮಾನವನಲ್ಲಿ ಸದ್ಗುಣ ಸದಾಚಾರಗಳು ಹೇಗಿರಬೇಕು ಎಂಬ ಚಿಂತನೆ, ಮನುಷ್ಯ ಸಾಮಾಜಿಕ ಸ್ಥರದಲ್ಲಿ ಪರೋಪಕಾರಿಯಾಗಿ ವಿನಯಶೀಲನಾಗಿ ಹೇಗೆ ಬದುಕಬೇಕು ಎಂಬುದರ ಬಗ್ಗೆ ವಿವೇಚಿಸುತ್ತಾರೆ. ವ್ಯಕ್ತಿ ಹೊಟ್ಟೆ-ಬಟ್ಟೆಗಾಗಿ ಮಾಡುವ ಕಾರ್ಯ ಯಾವುದೇ ಇರಲಿ ಅದು ಪ್ರಾಮಾಣಿಕವಾಗಿರಬೇಕೆಂಬ ಆಶಯ ವ್ಯಕ್ತಪಡಿಸುತ್ತಾರೆ. “ತನ್ನ ಪ್ರಾಪ್ತಿಯ ಫಲವ ತಾನರಿಯದೇ ಅನ್ಯರಿಗೆ ಆಡುವುದು ಅವಗುಣವು ಮರುಳೇ” ಎನ್ನುವ ಕನಕದಾಸರ ಸಾಮಾಜಿಕ ಜವಾಬ್ದಾರಿ ಇತರರಿಗೂ ಮಾದರಿಯಾಗಿದೆ. ಉತ್ತಮ ಸಮಾಜ ನಿರ್ಮಾಣಕ್ಕಾಗಿ ಮನುಷ್ಯ ತನ್ನ ಅಂತರಂಗ ಬಹಿರಂಗಗಳ ಪರಿಶುದ್ದತೆಗಾಗಿ ಶ್ರಮಿಸಬೇಕು” ಎಂಬ ಇವೇ ಮೊದಲಾದ ವಿಷಯಗಳನ್ನು ಪ್ರಸ್ತುತ ಲೇಖನದಲ್ಲಿ ಚರ್ಚಿಸುವ ಪ್ರಯತ್ನ ಮಾಡಲಾಗಿದೆ.

Downloads

Published

05.09.2023

How to Cite

VANAJAKSHI R. HALLIYAVAR. (2023). ಕನಕದಾಸರ ಕೀರ್ತನೆಗಳಲ್ಲಿ ಸಾಮಾಜಿಕ ಚಿಂತನೆ. AKSHARASURYA, 2(10), 121 to 131. Retrieved from https://aksharasurya.com/index.php/latest/article/view/233

Issue

Section

ಸಂಶೋಧನಾ ಲೇಖನಗಳು. | RESEARCH ARTICLE.