ಶರಣ ಸಂಕುಲ: ಸಾಮಾಜಿಕ ನ್ಯಾಯದ ಪರಿಕಲ್ಪನೆ.

Authors

  • MANUR SUDHARANI SHIVAPPA

Keywords:

ವಚನ ಸಾಹಿತ್ಯ, ಸಮಸಮಾಜ, ಸಾಮಾಜಿಕ ನ್ಯಾಯ, ಸಾಮಾಜಿಕ ವೈರುಧ್ಯಗಳು, ವರ್ಗಪ್ರಜ್ಞೆ

Abstract

ಸಾಮಾಜಿಕ ನ್ಯಾಯಕ್ಕಾಗಿ ನಾವು ಮಾನವ ಹಕ್ಕುಗಳ ಕಡೆಗೆ ಗಮನ ಹರಿಸಿದಾಗ ಮತ್ತೆ ಮತ್ತೆ ನಮಗೆ ಶರಣರು ಬಹಳ ವಿಶಿಷ್ಟವಾಗಿ ಕಾಣುತ್ತಾರೆ. ಶರಣ ಸಂಕುಲ ಅನ್ನೋದು ಬಸವಣ್ಣನವರ ನವಸಮಾಜ. ಅಸ್ಪೃಶ್ಯರು, ಮಹಿಳೆಯರು, ಬಡವರು ಮತ್ತು ಎಲ್ಲ ಕಾಯಕಜೀವಿಗಳು ಸರ್ವಸಮಾನತೆಯನ್ನು ಆ ಶರಣ ಸಂಕುಲದಲ್ಲಿ ಅನುಭವಿಸಿದರು. ಎಲ್ಲ ಜಾತಿಗಳ ಎಲ್ಲ ಜನರನ್ನು ತೆಗೆದುಕೊಂಡು ಹೊಸ ಮಾನವನನ್ನು ಶರಣರು ಸೃಷ್ಟಿಸಿದರು. ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸುತ್ತ, ಸಮಾಜದ ಕಟ್ಟಕಡೆಯ ಮನುಷ್ಯರನ್ನು ಮೊಟ್ಟ ಮೊದಲು ಗುರುತಿಸುವುದು ಶರಣರ ಸಾಮಾಜಿಕ ನ್ಯಾಯದ ಪರಿಕಲ್ಪನೆಯಾಗಿದೆ. ಉಳ್ಳವರ ಮತ್ತು ಬಡವರ ಬಗ್ಗೆ ಅರಿವು ಮೂಡಿದಾಗ ಸಾಮಾಜಿಕ ವೈರುಧ್ಯಗಳು ಸ್ಪಷ್ಟವಾಗಿ ಗೋಚರಿಸುವವು. ಒಂದು ಸಮಾಜಕ್ಕೆ ನ್ಯಾಯ ಒದಗಿಸಬೇಕಾದರೆ ಈ ರೀತಿಯಾಗಿ ಸಮಾಜದಲ್ಲಿನ ವೈರುಧ್ಯಗಳನ್ನು ಗುರುತಿಸಬೇಕಾಗುತ್ತದೆ. ಸಕಲ ಜೀವಾತ್ಮರಿಗೆ ಒಳ್ಳೆಯದನ್ನು ಬಯಸುತ್ತಲೇ ನಮ್ಮ ಸಮಾಜದಲ್ಲಿ ಆಳವಾಗಿ ಬೇರೂರಿರುವ ವೈರುಧ್ಯಗಳನ್ನು ಗುರುತಿಸುವ ಕ್ರಿಯೆ ಬಹಳ ಗುರುತರವಾದುದು. ಇಂತಹ ಅದ್ವಿತೀಯವಾದ ಚಿಂತನಾ ಕಾಣಿಕೆಯನ್ನು ಶರಣರು ೧೨ನೇ ಶತಮಾನದಲ್ಲಿಯೇ ನೀಡಿದ್ದು ಐತಿಹಾಸಿಕವಾಗಿದೆ. ಎಲ್ಲ ರೀತಿಯ ಅಸಮಾನತೆಯನ್ನು ಮೆಟ್ಟಿ ನಿಂತು ಮಾನವ ಹಕ್ಕುಗಳ ಧ್ವಜವನ್ನು ಹಾರಿಸಿದ ಸಮಾಜವನ್ನು ಮೊದಲ ಬಾರಿಗೆ ಈ ಭೂಮಿಗೆ ತಂದರು.

Downloads

Published

05.09.2023

How to Cite

MANUR SUDHARANI SHIVAPPA. (2023). ಶರಣ ಸಂಕುಲ: ಸಾಮಾಜಿಕ ನ್ಯಾಯದ ಪರಿಕಲ್ಪನೆ. AKSHARASURYA, 2(10), 115 to 120. Retrieved from https://aksharasurya.com/index.php/latest/article/view/232

Issue

Section

ಸಂಶೋಧನಾ ಲೇಖನಗಳು. | RESEARCH ARTICLE.