ಶಾಂತಿನಾಥ ದೇಸಾಯಿ ಅವರ ಕಾದಂಬರಿಗಳ ವಸ್ತು ಮತ್ತು ತಂತ್ರ.

Authors

  • DHANALAKSHMI C.

Keywords:

ಅನಾಥಪ್ರಜ್ಞೆ, ಅಸಹಾಯಕತೆ, ಆಧುನಿಕತೆ, ಯಾಂತ್ರಿಕತೆ, ಪ್ರಜ್ಞಾಪ್ರವಾಹತಂತ್ರ

Abstract

ಶಾಂತಿನಾಥ ದೇಸಾಯಿಯವರು ಪ್ರಮುಖವಾಗಿ ಮನುಷ್ಯನ ಅಸ್ತಿತ್ವದ ಹುಡುಕಾಟ, ಮುಕ್ತಿಯ ಹಂಬಲ, ಆಧುನಿಕತೆಯ ಯಾಂತ್ರಿಕತೆಯಲ್ಲಿ ವಿಕ್ಷಿಪ್ತಗೊಳ್ಳುವ ಯುವಕರ ಮನಸ್ಸು, ಸಂಬಬಂಧಗಳ ಅಗತ್ಯತೆ, ಗಂಡು – ಹೆಣ್ಣಿನ ಸಂಬಂಧದ ಸ್ವರೂಪ, ವೈಯಕ್ತಿಕ ಹುಡುಕಾಟದೊಂದಿಗೆ ಮನುಷ್ಯ ಸಾಮಾಜಿಕತೆಯೊಂದಿಗೆ ಬೆಸೆದುಕೊಳ್ಳುವ ರೀತಿ, ವ್ಯಕ್ತಿಯ ಅಂತರಾಳದ ಮೂಲಕ ವ್ಯಕ್ತಿತ್ವ ಹಾಗೂ ತತ್ವಗಳು ಮಂಥನಗೊಳ್ಳುವ ಬಗೆ-ಈ ವಸ್ತುಗಳನ್ನು ತಮ್ಮ ಕಾದಂಬರಿಗಳ ರಚನೆಯಲ್ಲಿ ಬಳಸಿಕೊಂಡಿದ್ದಾರೆ. ಇವರ ಕಾದಂಬರಿಯ ವಸ್ತುಗಳು ಸೂಕ್ಷ್ಮ ಸಂವೇದನೆಯ ಓದುಗರನ್ನು ಆಳವಾಗಿ ಪ್ರಭಾವಿಸಬಲ್ಲವು. ಆಧುನಿಕತೆಯ ಪರಿಧಿಯಲ್ಲಿ ಬದುಕುತ್ತಿರುವ ನಮಗೆ ಇಂದು ದೇಸಾಯಿಯವರ ಕಾದಂಬರಿಯ ವಸ್ತುಗಳು ನಾವು ಅಥವಾ ನಮ್ಮ ಸುತ್ತಲಿನ ವ್ಯಕ್ತಿಗಳು ಅನುಭವಿಸುತ್ತಿರುವ ಯಾತನೆ, ಬೇಸರ, ಗೊಂದಲ, ಭ್ರಮನಿರಸನ, ಅಸಹಾಯಕತೆ ಇವುಗಳಿಗೆ ಹಿಡಿದ ‘ಕಲಾತ್ಮಕವಾದ ಕನ್ನಡಿ’ ಎಂದು ಅನ್ನಿಸಿದರೆ ಅದಕ್ಕೆ ಆಶ್ಚರ್ಯ ಪಡಬೇಕಾಗಿಲ್ಲ. ದೇಸಾಯಿ ಅವರ ಕಾದಂಬರಿಗಳಲ್ಲಿ ಪ್ರಮುಖವಾಗಿ ಮೂರು ತಂತ್ರಗಳನ್ನು ಗುರುತಿಸಬಹುದು. ಪ್ರಜ್ಞಾಪ್ರವಾಹತಂತ್ರ, ದಿನಚರಿ ಬರೆಯುವ ತಂತ್ರ, ಪತ್ರಗಳ ಮೂಲಕ ಸಂಭಾಷಣೆ.

Downloads

Published

05.09.2023

How to Cite

DHANALAKSHMI C. (2023). ಶಾಂತಿನಾಥ ದೇಸಾಯಿ ಅವರ ಕಾದಂಬರಿಗಳ ವಸ್ತು ಮತ್ತು ತಂತ್ರ. AKSHARASURYA, 2(10), 48 to 55. Retrieved from https://aksharasurya.com/index.php/latest/article/view/225

Issue

Section

ಸಂಶೋಧನಾ ಲೇಖನಗಳು. | RESEARCH ARTICLE.