ದಲಿತ ಚಳುವಳಿಯ ಭಾಷೆ ಮತ್ತು ಸಾಹಿತ್ಯ.

Authors

  • KANTHARAJYADAV C.

Keywords:

ದಲಿತ, ಭಾಷೆ, ಸಾಹಿತ್ಯ, ಹಸಿವು, ಚಳವಳಿ, ಗ್ರಾಮ್ಯಭಾಷೆ

Abstract

ದಲಿತ ಸಾಹಿತ್ಯದಲ್ಲಿನ ಬಡತನ, ಶೋಷಣೆ, ಹಸಿವು, ಆಕ್ರೋಶ, ಸಿಟ್ಟು, ಸಂಸ್ಕೃತಿ ಇತ್ಯಾದಿ ವಿಷಯಗಳನ್ನು ಕುರಿತು ಹಲವಾರು ಸಾಹಿತಿಗಳು, ವಿಮರ್ಶಕರು ವಿಶ್ಲೇಷಿಸಿದ್ದಾರೆ. ಈ ವಿಷಯಗಳನ್ನು ಮುಖಾಮುಖಿಯಾಗಲು ದಲಿತ ಸಾಹಿತಿಗಳು ಬಳಸಿದ ವಿಭಿನ್ನ ರೀತಿಯ ಭಾಷೆಯನ್ನು ಕುರಿತು ಕೆಲವೇ ಜನರು ಮಾತ್ರ ತಮ್ಮ ಗಮನಹರಿಸಿದ್ದು ವಿಶೇಷ. ಅದರಲ್ಲೂ ಸಿದ್ಧಲಿಂಗಯ್ಯನವರ ಹೊಲೆ-ಮಾದಿಗರ ಹಾಡು, ದೇವನೂರರ ಕುಸುಮಬಾಲೆ ಇತ್ಯಾದಿ ಕೆಲವೇ ಕೃತಿಗಳ ಭಾಷೆಯ ಕುರಿತು ಮಾತನಾಡುತ್ತಾರೆ ಹೊರತು ಅದರಿಂದಾಚೆಗೆ ಒಟ್ಟು ದಲಿತ ಸಾಹಿತ್ಯದ ಭಾಷೆಯ ಭಿನ್ನತೆ, ನಿರೂಪಣೆ ಕುರಿತು ಮಾತನಾಡುವುದು ಕಡಿಮೆ ಎಂದೇ ಹೇಳಬಹುದು. ಸಾಹಿತ್ಯವಾಗಲಿ, ವಿಮರ್ಶೆಯಾಗಲಿ ಭಾಷೆಯ ಅಭಿವ್ಯಕ್ತಿ ಮುಖ್ಯವಾದದ್ದು. ಆ ನಿಟ್ಟಿನಲ್ಲಿ ದಲಿತ ಸಾಹಿತ್ಯದ ಭಾಷೆಯು ಕಟ್ಟಿಕೊಡುವ ವಿಭಿನ್ನ ನೋಟ ವಿಶಿಷ್ಟವಾದದ್ದು. ಈ ರೀತಿಯ ಭಾಷೆಯ ಬಳಕೆಗೆ ತಮ್ಮ ಬದುಕನ್ನು ಮತ್ತು ಸಂಸ್ಕೃತಿಯನ್ನು ಏಕಕಾಲದಲ್ಲಿ ಜನರೆದುರು ತೆರೆದಿಡುವ ಅಗತ್ಯತೆಯನ್ನು ದಲಿತ ಸಾಹಿತಿಗಳು ಕಂಡುಕೊಂಡದ್ದು ಮುಖ್ಯವಾದದ್ದು.

Downloads

Published

05.08.2023

How to Cite

KANTHARAJYADAV C. (2023). ದಲಿತ ಚಳುವಳಿಯ ಭಾಷೆ ಮತ್ತು ಸಾಹಿತ್ಯ. AKSHARASURYA, 2(09), 57–69. Retrieved from https://aksharasurya.com/index.php/latest/article/view/211

Issue

Section

Article