ಆಧುನಿಕ ಯುಗದ ಮಹಿಳಾ ಕಾವ್ಯದಲ್ಲಿ ಹೆಣ್ಣಿನ ಅಭಿವ್ಯಕ್ತಿಯ ಮೊದಲ ಕೂಗು
Main Article Content
Abstract
ಇಪ್ಪತ್ತನೇ ಶತಮಾನದ ಆರಂಭಿಕ ಕಾಲಘಟ್ಟವು ಕನ್ನಡ ಮಹಿಳಾ ಸಾಹಿತ್ಯದಲ್ಲಿ ಹೊಸ ಕ್ರಾಂತಿಯನ್ನು ಉಂಟುಮಾಡಿತು. ರಾಷ್ಟ್ರೀಯ ಚಳುವಳಿ ಹಾಗೂ ಸಮಾಜ ಸುಧಾರಣಾ ಚಿಂತನೆಗಳಿಂದ ಪ್ರಭಾವಿತರಾದ ಮಹಿಳೆಯರು, ಪಿತೃಪ್ರಧಾನ ವ್ಯವಸ್ಥೆಯ ನಡುವೆಯೂ ತಮ್ಮ ಅಂತಃಕರಣದ ದನಿಗಳಿಗೆ ಕಾವ್ಯರೂಪ ನೀಡಿದರು. ಬೆಳಗೆರೆ ಜಾನಕಮ್ಮ, ಜಯದೇವಿ ತಾಯಿ ಲಿಗಾಡೆ ಮತ್ತು ತಿರುಮಲೆ ರಾಜಮ್ಮ ಅವರಂತಹ ಕವಯತ್ರಿಯರು ಕೌಟುಂಬಿಕ ಚೌಕಟ್ಟಿನಲ್ಲಿದ್ದರೂ, ತಮ್ಮ ಅನುಭವಗಳನ್ನು ಮತ್ತು ಅಸ್ಮಿತೆಯನ್ನು ಕಾವ್ಯದ ಮೂಲಕ ದಾಖಲಿಸುವಲ್ಲಿ ತೋರಿದ ಧೈರ್ಯವು ಗಮನಾರ್ಹವಾಗಿದೆ. ಇವರು ಭಕ್ತಿ, ದೇಶಪ್ರೇಮ ಮತ್ತು ಸ್ತ್ರೀ ಸಹಜ ಸಂಕಟಗಳನ್ನು ತಮ್ಮ ಕೃತಿಗಳಲ್ಲಿ ಹಿಡಿದಿಟ್ಟಿದ್ದಾರೆ. ಆಧುನಿಕ ಕನ್ನಡ ಕಾವ್ಯದಲ್ಲಿ ಸ್ತ್ರೀ ಅಸ್ಮಿತೆಯ ಉದಯ, ಅವರು ಎದುರಿಸಿದ ಸವಾಲುಗಳು ಮತ್ತು ಅವರ ಸಾಹಿತ್ಯಿಕ ಕೊಡುಗೆಯನ್ನು ವಿಶ್ಲೇಷಿಸುವುದು ಈ ಅಧ್ಯಯನದ ಆಶಯವಾಗಿದೆ. ಇದು ಮುಂದಿನ ತಲೆಮಾರಿನ ಸ್ತ್ರೀವಾದಿ ಚಿಂತನೆಗಳಿಗೆ ಭದ್ರ ಬುನಾದಿ ಹಾಕಿಕೊಟ್ಟ ಬಗೆಯನ್ನು ಇಲ್ಲಿ ಚರ್ಚಿಸಲಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಬಯಲುಸೀಮೆಯ ಹಾಡುಹಕ್ಕಿ ಬೆಳಗೆರೆ ಜಾನಕಮ್ಮ - ನೇಮಿಚಂದ್ರ
ಕರ್ನಾಟಕದ ಕವಯತ್ರಿಯರು - ಡಾ. ಸರೋಜಿನಿ ಮಹಿಷಿ
ಜಯದೇವಿ ತಾಯಿ ಲಿಗಾಡೆ - ರಾಮಕೃಷ್ಣ ಮರಾಠ