ತೇರದಾಳದ ಗೊಂಕ ಜಿನಾಲಯ

Main Article Content

ಮಂಜುನಾಥ ಎಸ್. ಪಾಟೀಲ

Abstract

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ತೇರದಾಳದಲ್ಲಿರುವ ಪ್ರಾಚೀನ ಗೊಂಕ ಜಿನಾಲಯದ ಐತಿಹಾಸಿಕ ಮತ್ತು ವಾಸ್ತುಶಿಲ್ಪದ ಮಹತ್ವವನ್ನು ಪರಿಚಯಿಸಲಾಗಿದೆ. ಕಲ್ಯಾಣ ಚಾಳುಕ್ಯರ ಸಾಮಂತನಾದ ಗೊಂಕಕ್ಷಿತಿಪನು ಈ ಜಿನಾಲಯವನ್ನು ನಿರ್ಮಿಸಿ ನೇಮಿನಾಥನನ್ನು ಪ್ರತಿಷ್ಠಾಪಿಸಿದನು. ಶಾಸನಗಳ ಆಧಾರದ ಮೇಲೆ, ಕ್ರಿ.ಶ. 1123, 1181 ಮತ್ತು 1187ರ ಕಾಲಘಟ್ಟಗಳಲ್ಲಿ ಈ ಜಿನಾಲಯಕ್ಕೆ ನೀಡಲಾದ ದಾನ-ದತ್ತಿಗಳು ಮತ್ತು ಯಾದವರ ಕಾಲದ ಬೆಳವಣಿಗೆಗಳನ್ನು ವಿಶ್ಲೇಷಿಸಲಾಗಿದೆ. ಗರ್ಭಗೃಹ, ಅಂತರಾಳ, ನವರಂಗ ಮತ್ತು ಮುಖಮಂಟಪಗಳನ್ನು ಒಳಗೊಂಡಿರುವ ಈ ದೇವಾಲಯದ ವಾಸ್ತುಶಿಲ್ಪ, ಕಂಬಗಳ ವಿನ್ಯಾಸ, ಮತ್ತು ಚಾಳುಕ್ಯ ಶೈಲಿಯ ಲಕ್ಷಣಗಳನ್ನು ವಿವರವಾಗಿ ವರ್ಣಿಸಲಾಗಿದೆ.

Article Details

Section

Research Articles

Author Biography

ಮಂಜುನಾಥ ಎಸ್. ಪಾಟೀಲ

ಸಹಾಯಕ ಪ್ರಾಧ್ಯಾಪಕರು, ಇತಿಹಾಸ ಮತ್ತು ಪುರಾತತ್ವ ಶಾಸ್ತ್ರ ವಿಭಾಗ (ಸ್ನಾತಕೋತ್ತರ), ಬಿ.ಎಲ್.ಡಿ.ಇ. ಸಂಸ್ಥೆ, ಜಮಖಂಡಿ.

References

ದೇವರಕೊಂಡಾ ರೆಡ್ಡಿ ಮತ್ತು ಇತರರು, ೨೦೦೬, ಕನ್ನಡ ವಿಶ್ವವಿದ್ಯಾಲಯ ಶಾಸನ ಸಂಪುಟ. ೦೯., ಬಾಗಲಕೋಟೆ ಜಿಲ್ಲೆ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಮನೋಜ್ ಜಿ., ೨೦೧೫, ದೇವಾಲಯ ವಾಸ್ತು ವಿಜ್ಞಾನ, ಸುಬೋಧಿನಿ ಬುಕ್ ಪಬ್ಲಿಷರ್ಸ್ ಮತ್ತು ನಾಲೆಡ್ಜ್ ಅಕಾಡೆಮಿ, ಚಿತ್ರದುರ್ಗ.

ಪ್ರಭಾಕರ್ ಎಂ. ಎನ್., ೨೦೧೧, ದೇವಾಲಯ ವಾಸ್ತು, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಮುನಿಸ್ವಾಮಿ ಆರ್., ೧೯೯೯, ಕರ್ನಾಟಕ ರಾಜ್ಯ ಗ್ಯಾಸೆಟಿಯರ್ ವಿಜಾಪುರ ಜಿಲ್ಲೆ (ಬಾಗಲಕೋಟೆ ಜಿಲ್ಲೆಯೂ ಸೇರಿದಂತೆ), ಕರ್ನಾಟಕ ರಾಜ್ಯ ಗ್ಯಾಸೆಟಿಯ‌ರ್ ಇಲಾಖೆ, ಬೆಂಗಳೂರು.