ಹೊಯ್ಸಳ ಅರಸ ಎರಡನೇ ಬಲ್ಲಾಳನ ಆಡಳಿತದಲ್ಲಿ ಮಾವಂತ ಮನೆತನದ ಕೊಡುಗೆಗಳು.

Authors

  • RAJU KUDAGI

Abstract

ಕರ್ನಾಟಕದ ಮಧ್ಯಕಾಲೀನ ಇತಿಹಾಸದಲ್ಲಿ ಕಂಡುಬರುವ ಪ್ರಸಿದ್ಧ ರಾಜ ಮನೆತನದಲ್ಲಿ ಹೊಯ್ಸಳ ವಂಶವೂ ಒಂದು. ಗಂಗರ ನಂತರ ದಕ್ಷಿಣ ಕರ್ನಾಟಕದಲ್ಲಿ ಸುಮಾರು 300 ವರ್ಷಗಳ ಕಾಲ ಆಳ್ವಿಕೆಯನ್ನು ನಡೆಸಿದ ಇವರು ದೋರಸಮುದ್ರವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದರು. ಈ ವಂಶದವರು ಆರಂಭದಲ್ಲಿ ಕಲ್ಯಾಣಚಾಲುಕ್ಯರ ಮಾಂಡಲಿಕರಾಗಿ ರಾಜಕೀಯ ಜೀವನವನ್ನು ಆರಂಭಿಸಿ, ಮುಂದೆ ಇಮ್ಮಡಿ ಬಲ್ಲಾಳನ ಕಾಲದಲ್ಲಿ ಸ್ವತಂತ್ರರಾದರು. ಈ ವಂಶದ ಮೂಲ ಪುರುಷ ಸಳನಾಗಿದ್ದು ಅವನಿಂದಲೇ ಈ ಮನೆತನಕ್ಕೆ ‘ಹೊಯ್ಸಳ’ ಎಂಬ ಹೆಸರು ಬಂದಿದೆ. ನಂತರ ವಿನಯಾದಿತ್ಯ, ಎರೆಯಂಗ, ಮೊದಲನೆಯ ಬಲ್ಲಾಳ, ವಿಷ್ಣುವರ್ಧನ, ಮೊದಲನೆಯ ನರಸಿಂಹ, ಇಮ್ಮಡಿ ಬಲ್ಲಾಳ, ಇಮ್ಮಡಿ ನರಸಿಂಹ, ಮೂರನೆಯ ಬಲ್ಲಾಳರಂತಹ ಪ್ರಖ್ಯಾತ ದೊರೆಗಳು ಕಂಡುಬರುವರು. ಇವರು ಕರ್ನಾಟಕ ಮಾತ್ರವಲ್ಲದೆ ತಮಿಳುನಾಡಿನವರೆಗೆ ರಾಜ್ಯವನ್ನು ವಿಸ್ತರಿಸಿ ಆಳ್ವಿಕೆಯನ್ನು ನಡೆಸಿದರು. ಕರ್ನಾಟಕದ ಇತಿಹಾಸದಲ್ಲಿ ರಾಜಕೀಯವಾಗಿ, ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಕವಾಗಿ ತಮ್ಮದೆ ಆದ ಕೊಡುಗೆಗಳನ್ನು ನೀಡಿದ್ದಾರೆ.

Downloads

Published

05.07.2023

How to Cite

RAJU KUDAGI. (2023). ಹೊಯ್ಸಳ ಅರಸ ಎರಡನೇ ಬಲ್ಲಾಳನ ಆಡಳಿತದಲ್ಲಿ ಮಾವಂತ ಮನೆತನದ ಕೊಡುಗೆಗಳು. AKSHARASURYA, 2(07), 88–99. Retrieved from https://aksharasurya.com/index.php/latest/article/view/170

Issue

Section

Article