ಕನ್ನಡ ಛಂದೋ ಗ್ರಂಥಗಳು

Main Article Content

ಮಲ್ಲಪ್ಪ ಚನ್ನಭತ್ತಿ

Abstract

ಕನ್ನಡ ಸಾಹಿತ್ಯ ಚರಿತ್ರೆಯಲ್ಲಿ ಛಂದೋಗ್ರಂಥಗಳ ವಿಕಾಸವು ಅತ್ಯಂತ ಮಹತ್ವದ ಸ್ಥಾನವನ್ನು ಪಡೆದುಕೊಂಡಿದೆ. ಶ್ರೀವಿಜಯನ 'ಕವಿರಾಜಮಾರ್ಗ'ದಲ್ಲಿ ಛಂದಸ್ಸಿನ ಪ್ರಾಥಮಿಕ ಅಂಶಗಳಾದ ಯತಿ, ಪ್ರಾಸ ಮತ್ತು ದೋಷಗಳ ಪ್ರಸ್ತಾಪವಿದೆ. ಒಂದನೇ ನಾಗವರ್ಮನ 'ಛಂದೋಬುಧಿ'ಯು ಕನ್ನಡದ ಮೊದಲ ಸಮಗ್ರ ಛಂದೋಗ್ರಂಥವಾಗಿದ್ದು, ಸಂಸ್ಕೃತ, ಪ್ರಾಕೃತ ಮತ್ತು ಕನ್ನಡದ ವಿಶಿಷ್ಟ ಛಂದಸ್ಸುಗಳನ್ನು ವ್ಯವಸ್ಥಿತವಾಗಿ ನಿರೂಪಿಸಿದೆ. ಇದಲ್ಲದೆ, ಜಯಕೀರ್ತಿಯ 'ಛಂದೋನುಶಾಸನಮ್', ಮೂರನೇ ಸೋಮೇಶ್ವರನ 'ಮಾನಸೋಲ್ಲಾಸ', ಶಾರ್ಙ್ಗದೇವನ 'ಸಂಗೀತ ರತ್ನಾಕರ', ಗುಣಚಂದ್ರನ 'ಛಂದಸ್ಸಾರ' ಮುಂತಾದ ಕೃತಿಗಳು ಕನ್ನಡ ಛಂದಸ್ಸಿನ ಬೆಳವಣಿಗೆಗೆ ವಿಶಿಷ್ಟ ಕೊಡುಗೆ ನೀಡಿವೆ. ಈ ಪರಂಪರೆಯು ಕವಿಗಳಿಗೆ ಮಾರ್ಗದರ್ಶಕವಾಗಿ ಕಾವ್ಯರಚನೆಗೆ ಸುಭದ್ರ ಬುನಾದಿಯನ್ನು ಒದಗಿಸಿದೆ.

Article Details

Section

Research Articles

Author Biography

ಮಲ್ಲಪ್ಪ ಚನ್ನಭತ್ತಿ

ಸಂಶೋಧನ ವಿದ್ಯಾರ್ಥಿ, ಡಾ.ಆ‌ರ್.ಸಿ.ಹಿರೇಮಠ ಕನ್ನಡ ಅಧ್ಯಯನ ಪೀಠ, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ.

References

ಟಿ.ವಿ. ವೆಂಕಟಾಚಲಶಾಸ್ತ್ರಿ – ಕನ್ನಡ ಛಂದಸ್ಸು, ಪು.ಸಂ: 8.

ಟಿ.ವಿ. ವೆಂಕಟಾಚಲಶಾಸ್ತ್ರಿ – ಕನ್ನಡ ಛಂದಸ್ಸು, ಪು.ಸಂ: 9.

ಡಾ. ಎಂ. ವಿ. ರವಿ, ಛಂದಸ್ವಾದ, ಪು.ಸಂ: 18.

ಡಾ. ಎಂ. ವಿ. ರವಿ, ಛಂದಸ್ವಾದ, ಪು.ಸಂ: 22.

ಡಾ. ಎಂ. ವಿ. ರವಿ, ಛಂದಸ್ವಾದ, ಪು.ಸಂ: 24.