ಅನುವಾದದ ವೈಶಿಷ್ಟ್ಯತೆ

Main Article Content

ಮಲರ್ ವಿಳಿ ಕೆ.

Abstract

ಭಾಷಾಂತರವು ವಿಭಿನ್ನ ಭಾಷಿಕರ ಸಂಸ್ಕೃತಿ, ಜೀವನ ಕ್ರಮ ಮತ್ತು ಆಚಾರ-ವಿಚಾರಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಕಾವ್ಯ, ಕಥೆ ಮುಂತಾದ ಸಾಹಿತ್ಯ ಪ್ರಕಾರಗಳನ್ನು ಮತ್ತೊಂದು ಭಾಷೆಗೆ ತರುವಾಗ, ಮೂಲಭಾಷೆಯ ವ್ಯಾಕರಣ, ನಾಣ್ಣುಡಿ ಹಾಗೂ ಪಾರಿಭಾಷಿಕ ಪದಗಳಿಗೆ ಚ್ಯುತಿ ಬಾರದಂತೆ ಲಕ್ಷ್ಯಭಾಷೆಗೆ ಅಳವಡಿಸುವುದು ಅನುವಾದಕನ ಸೃಜನಶೀಲತೆಯನ್ನು ಅವಲಂಬಿಸಿರುತ್ತದೆ. ಮೂಲದ ಭಾವ, ಅರ್ಥ, ತಾಳ ಮತ್ತು ಲಯಗಳನ್ನು ಕರಾರುವಾಕ್ಕಾಗಿ ಗ್ರಹಿಸಿ, ಅನವಶ್ಯಕ ಸ್ವಾತಂತ್ರ್ಯವನ್ನು ಬಳಸದೆ ಯಥಾವತ್ತಾಗಿ ತದ್ರೂಪಾಗಿ ಅನುವಾದಿಸುವುದು ಅತ್ಯಂತ ಮಹತ್ವದ್ದಾಗಿದೆ. ಕನ್ನಡ ಮತ್ತು ತಮಿಳು ಭಾಷೆಗಳ ನಡುವಿನ ಅನುವಾದ ಪ್ರಕ್ರಿಯೆಯ ಉದಾಹರಣೆಗಳ ಮೂಲಕ, ಅನುವಾದದಲ್ಲಿ ನೈಜತೆ, ಪದಬಳಕೆಯ ಮಿತಿ ಹಾಗೂ ಅನುವಾದಕನ ಜವಾಬ್ದಾರಿಗಳನ್ನು ವಿಸ್ತೃತವಾಗಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ಮಲರ್ ವಿಳಿ ಕೆ.

ಪ್ರಾಧ್ಯಾಪಕರು, ಕನ್ನಡ ವಿಭಾಗ, ಪ್ರೆಸಿಡೆನ್ಸಿ ವಿಶ್ವವಿದ್ಯಾಲಯ, ಬೆಂಗಳೂರು.

References

ಭಾಷೆ ಮತ್ತು ಕನ್ನಡ ಬೋಧನೆ, ಡಾ. ಎನ್. ಬಿ. ಕೊಂಗವಾಡ, ವಿದ್ಯಾ ನಿಧಿ ಪ್ರಕಾಶನ, ದ್ವಿತೀಯ ಆವೃತ್ತಿ, 2012.

ವಿಶ್ವ ಕಥಾ ಕೋಶ, ಸಂಪಾದಕರು: ನಿರಂಜನ, ನವಕರ್ನಾಟಕ, ಬೆಂಗಳೂರು, ಪ್ರಥಮ ಆವೃತ್ತಿ, 1982.

ಕಥೆ ಕಥನ, ಡಾ. ಎಸ್. ಪ್ರಸನ್ನ ಸ್ವಾಮಿ, ಧಾತ್ರಿ ಪುಸ್ತಕಾಲಯ, ಪ್ರಥಮ ಆವೃತ್ತಿ, 2007.

ತಮಿಳಿಲ್ ಸಿರುಕದೈ ವರಲಾರುಂ ವಳರ್ಚಿಯುಂ, ಪೆ. ಕೋ ಸುಂದರರಾಜನ್ (ಸಿಟ್ಟಿ), ಕೋ. ಸಿವಪಾದಸುಂದರಂ, ಮದ್ರಾಸ್, ಪ್ರಥಮ ಆವೃತ್ತಿ, 1989.

ಕದೈಕ್ಕಲೈ, ಅಗಿಲನ್ ತಾಗಂ, ಚೆನ್ನೈ, ಆರನೇ ಆವೃತ್ತಿ, 2002.

ವೈರಮುತ್ತು ಕವಿದೈಗಳ್, ಸೂರ್ಯ, ಚೆನ್ನೈ, ಏಳನೇ ಆವೃತ್ತಿ, 2004.

ಓಮನದಿ, ಮ. ರಾಜೇಂದಿರನ್, ಕವಿತಾ, ಚೆನ್ನೈ, ಪ್ರಥಮ ಆವೃತ್ತಿ, 2001.

ವೈರಮುತ್ತುರವರ 33 ಕವಿತೆಗಳು, ಅನುವಾದ: ಪ್ರೊ. ಮಲರ್ ವಿಳಿ ಕೆ., ಕ್ರೈಸ್ಟ್ ಯೂನಿವರ್ಸಿಟಿ, ಪ್ರಥಮ ಆವೃತ್ತಿ, 2009.

ಕಳ್ಳತನ (ಕಥೆ), ಮ. ರಾಜೇಂದಿರನ್, ಪ್ರೊ. ಮಲರ್ ವಿಳಿ ಕೆ. ತರಂಗ, 2008.

ಮಾತನಾಡುವ ಮಂಚ (ಕಥೆ), ಪುದುಮೈಪ್ಪಿತ್ತನ್, ಅನುವಾದ: ಪ್ರೊ. ಮಲರ್ ವಿಳಿ ಕೆ. ಅನಿಕೇತನ, ಕರ್ನಾಟಕ ಸಾಹಿತ್ಯ ಅಕಾಡೆಮಿ, 2009- 2010.