ತೇರದಾಳದ ಗೊಂಕ ಜಿನಾಲಯ.

Authors

  • MANJUNATH S. PATIL

Abstract

ತೇರದಾಳ, ಬಾಗಲಕೋಟ ಜಿಲ್ಲೆ ಜಮಖಂಡಿ ತಾಲೂಕು ಕೇಂದ್ರದಿಂದ ಪಶ್ಚಿಮಕ್ಕೆ 29 ಕಿ.ಮೀ. ದೂರದಲ್ಲಿದೆ. ಜಮಖಂಡಿ ತಾಲೂಕನ್ನು ಆಡಳಿತದ ದೃಷ್ಠಿಕೋನದಿಂದ ತೇರದಾಳ ಮತ್ತು ಸಾವಳಗಿ ಎಂಬುದಾಗಿ ಎರಡು ಹೋಬಳಿ ಕೇಂದ್ರಗಳಾಗಿ ವಿಭಾಗ ಮಾಡಲಾಗಿದೆ. ಪ್ರಸ್ತುತ ತೇರದಾಳವನ್ನು ತಾಲೂಕು ಕೇಂದ್ರವಾಗಿ ಘೋಷಣೆ ಮಾಡಲಾಗಿದೆ. ಶಾಸನಗಳು ಈ ಪ್ರದೇಶವನ್ನು ತೇರದಾಳ-12 ಎಂದು ಉಲ್ಲೇಖಿಸುತ್ತವೆ. ಹನ್ನೆರಡು ಗ್ರಾಮಗಳನ್ನು ಒಳಗೊಂಡ ಒಂದು ಆಡಳಿತ ವಿಭಾಗವಾಗಿತ್ತೆಂದು ತಿಳಿದುಬರುತ್ತದೆ. ಈ ಊರಿನ ಪರಿಸರದಲ್ಲಿ ಪ್ರಾಗಿತಿಹಾಸ ನೆಲೆಗಳಿವೆ. ಊರಿನ ಪಶ್ಚಿಮಕ್ಕೆ ಐದು ಕಿ.ಮೀ. ದೂರದಲ್ಲಿ ಬೂದಿಮಣ್ಣು ಹಾಗೂ ಇತರ ಜನವಸತಿಯ ನೆಲಗಟ್ಟುಗಳು ಇದ್ದ ಅವಶೇಷಗಳು ತುಂಬಿರುವ ದಿಬ್ಬವಿದೆ. ಉತ್ತರ ಗುಡ್ಡ ಪ್ರದೇಶದಲ್ಲಿ ಸಮೀಪದ ಹನಗಂಡಿ, ಹಳಿಂಗಳಗಿ, ಮದನಮಟ್ಟಿ ಮತ್ತು ಆಸಂಗಿ ಪರಿಸರದೊಳಗೆ ನೂರಾರು ಬೃಹತ್ ಶಿಲಾಗೋರಿಗಳು ಐದು ಕಿ.ಮೀ. ಪ್ರದೇಶದಲ್ಲಿ ಕಂಡುಬರುತ್ತವೆ. ಇದು ಕಲ್ಯಾಣ ಚಾಳುಕ್ಯರ ಕಾಲದಲ್ಲಿ ಪ್ರಮುಖ ಜೈನ ಕೇಂದ್ರವಾಗಿತ್ತೆಂದು ತಿಳಿದು ಬರುತ್ತದೆ.

Downloads

Published

05.07.2023

How to Cite

MANJUNATH S. PATIL. (2023). ತೇರದಾಳದ ಗೊಂಕ ಜಿನಾಲಯ. AKSHARASURYA, 2(07), 57–64. Retrieved from https://aksharasurya.com/index.php/latest/article/view/166

Issue

Section

Article