ಆದಿಲ್‌ಶಾಹಿ ಶಾಸನಗಳಲ್ಲಿ ಧಾರ್ಮಿಕ ಸಮನ್ವತೆ (ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು).

Authors

  • NAJEEYABEGUM N.

Keywords:

ಕರ್ನಾಟಕ, ಪರ್ಶಿಯನ್, ಅರೇಬಿಕ್ ಮತ್ತುಉರ್ದು ಶಾಸನಗಳು

Abstract

ಪ್ರಾಚೀನ ಕಾಲದಿಂದಲೂ ಭಾರತ ದೇಶವು ಹಲವು ಧರ್ಮಗಳ ಅನುಯಾಯಿಗಳನ್ನು ಸಹಸ್ರಾರು ವರ್ಷಗಳಿಂದಲೂ ಒಂದೇ ತೆಕ್ಕೆಯಲ್ಲಿ ಪೋಷಿಸುತ್ತಾ ಬಂದಿದೆ. ಅಂತೆಯೇ ಕರ್ನಾಟಕವು ಈ ವಿಷಯದಲ್ಲಿ ಬೇರೆಲ್ಲ ರಾಜ್ಯಗಳಿಗಿಂತ ಮುಂಚೂಣಿಯಲ್ಲಿದೆ. ಕ್ರಿ.ಶ. ಪೂರ್ವದಿಂದಲೂ ಕರ್ನಾಟಕವು ಹಲವಾರು ಧರ್ಮಗಳನ್ನು ಪೋಷಿಸುತ್ತಾ, ಈ ಧರ್ಮಗಳಿಗೆ ಸಂಬಂಧಿಸಿದ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಸಲಹುತ್ತಾ-ಬೆಳಗುತ್ತಾ ಬಂದಿದೆ. ಇವುಗಳ ಅಧ್ಯಯನಕ್ಕೆ ನಮಗೆ ಅನೇಕ ಆಕರಗಳು ದೊರಕುತ್ತವೆ. ಆ ಆಕರಗಳಲ್ಲಿ ಶಾಸನ ಆಕರಗಳಿಗೆ ಬಹಳ ಮಹತ್ವವಿದೆ. ಶಾಸನಗಳಲ್ಲಿ ಕನ್ನಡ-ಸಂಸ್ಕೃತ ಶಾಸನಗಳಂತೆಯೇ ಆದಿಲ್‌ಷಾಹಿ ಸಾಮ್ರಾಜ್ಯದ ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳೂ ಸಹ ನಮ್ಮಲ್ಲಿ ನೂರಾರು ದೊರಕುತ್ತವೆ. ಶಾಸನ ಸಂಖ್ಯೆ 220 ಚಿಕ್ಕಮಗಳೂರು ಜಿಲ್ಲೆಯ ಬಾಬಾ ಬುಡೆನ್‌ಗಿರಿಯಲ್ಲಿ ದೊರಕಿದ್ದು, ಹಿಜಿರಿ ವರ್ಷ 396 (ಕ್ರಿ.ಶ.1005)ನ್ನು ಹೊಂದಿದೆ. ದಾದಾ ಹಯಾತ್ ಮೀರ್‌ಖಲಂದರ್ (ಶೇಕ್‌ಅಬ್ದುಲ್ ಅಜೀಜ್) ಅವರು ಈ ಬೆಟ್ಟಕ್ಕೆ ಬಂದು ನೆಲಸಿದ್ದ ಬಗೆಗಿನ ವಿವರಗಳನ್ನೊಳಗೊಂಡ ಮೂಲ ಶಾಸನ ಅಥವಾ ಲಿಖಿತ ದಾಖಲೆಯನ್ನಾಧರಿಸಿದ ಮೌಖಿಕ ಮಾಹಿತಿಯನ್ನು ಈ ಶಾಸನದಲ್ಲಿ ದಾಖಲಿಸಿದಂತಿದೆ. ದಾದಾ ಹಯಾತ್ ಮೀರ್‌ಖಲಂದರ್ ಈ ಸ್ಥಳಕ್ಕೆ ಬಂದು ನೆಲಸಿದ್ದ ಕಾರಣದಿಂದ ಈ ಬೆಟ್ಟಕ್ಕೆ ಬಾಬಾ ಬುಡೆನ್‌ಗಿರಿಯೆಂದು ಹೆಸರಿಸಲಾಗಿದೆ. ದಾದಾ ಹಯಾತ್ ಮೀರ್‌ಖಲಂದರ್ ಇಲ್ಲಿಗೆ ಬಂದು ಧ್ಯಾನಮಗ್ನನಾಗಿ ಕಾಲ ಕಳೆದ ಸಮಯಕ್ಕೆ ಮೊದಲು, ಉತ್ತರ ಮತ್ತು ದಕ್ಷಿಣ ಭಾರತದಲ್ಲಿ ಮುಸಲ್ಮಾನರ ಆಳ್ವಿಕೆಯು ಆರಂಭವಾಗಿರಲಿಲ್ಲವೆಂಬುದು ಗಮನಾರ್ಹ ವಿಷಯವಾಗಿದೆ. ಕರ್ನಾಟಕದ ಮೊದಲ ಸೂಫಿ ಸಂತರ ಪರ್ಶಿಯನ್ ಶಾಸನ ಇದಾಗಿದ್ದು ಈ ಸ್ಥಳಕ್ಕೆ ಇಂದಿಗೂ ಸಹ ಸಾವಿರಾರು ಹಿಂದೂ-ಮುಸಲ್ಮಾನರು ಭಕ್ತಿಯಿಂದ ನಡೆದುಕೂಳ್ಳುತ್ತಾರೆ. ಇದರಂತೆ ಆದಿಲ್‌ಷಾಹಿ ಅವರ ಆಳ್ವಿಕೆ ಕಾಲದಲ್ಲಿ ರಚಿತವಾದ ಶಾಸನಗಳು, ಧರ್ಮ ಸಮನ್ವಯತೆಗೆ ಸಂಬಂಧಿಸಿದಂತೆ ಹಲವಾರು ಶಾಸನಗಳು ನಮಗೆ ಚರಿತ್ರೆಯಲ್ಲಿ ದೊರಕುತ್ತವೆ. ಈ ಲೇಖನಕ್ಕೆ ಸಂಬಂಧಿಸಿದಂತೆ ಇದೂವರೆಗೂ ಪ್ರಕಟಿತವಾದ 7 ಶಾಸನಗಳು ದೊರೆತಿವೆ.

Downloads

Published

05.07.2023

How to Cite

NAJEEYABEGUM N. (2023). ಆದಿಲ್‌ಶಾಹಿ ಶಾಸನಗಳಲ್ಲಿ ಧಾರ್ಮಿಕ ಸಮನ್ವತೆ (ಪರ್ಶಿಯನ್, ಅರೇಬಿಕ್ ಮತ್ತು ಉರ್ದು ಶಾಸನಗಳು). AKSHARASURYA, 2(07), 40–49. Retrieved from https://aksharasurya.com/index.php/latest/article/view/164

Issue

Section

Article