ಕುವೆಂಪು ನಾಟಕಗಳಲ್ಲಿ ವೈಚಾರಿಕತೆ.

Authors

  • Shobharani N.

Abstract

ಕುವೆಂಪು ನವೋದಯ ಕಾಲಘಟ್ಟದಲ್ಲಿ ಸಾಹಿತ್ಯ ಕೃಷಿ ಪ್ರಾರಂಭಿಸಿದವರು. ಹೀಗಾಗಿ ನವೋದಯದ ಪ್ರಮುಖ ಮೌಲ್ಯಗಳಾಗಿದ್ದ ಆದರ್ಶ, ದೇಶಪ್ರೇಮ, ನಿಸರ್ಗಾರಾಧನೆ, ಧರ್ಮಶ್ರದ್ಧೆ (ಮತದ ಮೌಢ್ಯವಲ್ಲ), ಪರಂಪರೆಯ ಬಗೆಗಿನ ಅರಿವು/ಗೌರವ ಇವೆಲ್ಲವೂ ಅವರ ಸಾಹಿತ್ಯದ ಭಾಗಗಳೇ ಆಗಿವೆ. ಆದರೆ ಇಲ್ಲಿ ಗಮನಿಸಬಹುದಾದ ಮುಖ್ಯ ವಿಚಾರಗಳೆಂದರೆ, ಕುವೆಂಪುರವರ ಧರ್ಮಶ್ರದ್ಧೆ ಅಂಧಾನುಕರಣೆಯಾಗಿ ಎಂದೂ ರೂಪುಗೊಳ್ಳಲಿಲ್ಲ; ಅವರ ದೈವಾರಾಧನೆ ಕಂದಾಚಾರಗಳಿಗೆ, ಕರ್ಮಠ ಆಚರಣೆಗಳಿಗೆ ದಾರಿ ಮಾಡಲಿಲ್ಲ; ಅವರ ಆದರ್ಶವಾದವು ವಾಸ್ತವ ಸತ್ಯಗಳ ಮೇಲೆ ಮುಸುಕು ಹಾಕಲಿಲ್ಲ; ಪರಂಪರೆಯ ಬಗೆಗಿನ ಗೌರವ ಮೂಢನಂಬಿಕೆಗಳನ್ನು ಪ್ರೋತ್ಸಾಹಿಸಲಿಲ್ಲ. ಕುವೆಂಪುರವರು ತಮ್ಮ ಕಾಲಮಾನದ ಎಲ್ಲ ಮೌಲ್ಯಗಳನ್ನು ವೈಚಾರಿಕತೆಯ ಪ್ರಖರ ಬೆಳಕಿನಲ್ಲಿ ಕಂಡವರು. ಇದನ್ನು ಅಭಿನ್ನವಾಗಿ ತಮ್ಮ ಬರಹ ಮತ್ತು ಬದುಕುಗಳಲ್ಲಿ ಅಳವಡಿಸಿಕೊಂಡವರು. ಇದೇ ಬೆಳಕನ್ನು ತಮ್ಮ ಸುತ್ತಲೂ ಬೀರುವ ಸಾಮಾಜಿಕ ಜವಾಬ್ದಾರಿಯನ್ನು ಹೊತ್ತವರು. ಈ ನಿಟ್ಟಿನಲ್ಲಿ ಎಲ್ಲರನ್ನೂ ‘ವಿಚಾರಕ್ರಾಂತಿ’ಗೆ ಆಹ್ವಾನಿಸಿದವರು.

Downloads

Published

05.06.2023

How to Cite

Shobharani N. (2023). ಕುವೆಂಪು ನಾಟಕಗಳಲ್ಲಿ ವೈಚಾರಿಕತೆ. AKSHARASURYA, 2(06), 129–135. Retrieved from https://aksharasurya.com/index.php/latest/article/view/147

Issue

Section

Article