ಕನ್ನಡ ದಿನ ಪತ್ರಿಕೆಗಳಲ್ಲಿ ಮೂಡಿ ಬರುವ ಪೌರಾಣಿಕ ಕಥೆಗಳ ಕುರಿತು ಒಂದು ಅಧ್ಯಯನ.

Authors

  • Muniswamy
  • T. Sripathy

Keywords:

ಪೌರಾಣಿಕ, ದಿನಪತ್ರಿಕೆ, ವಿಜಯಕರ್ನಾಟಕ, ವಿಜಯವಾಣಿ, ಕಥೆ, ಬರಹಗಾರ

Abstract

ಯಾವುದೇ ಸಂಸ್ಕೃತಿ ಅಥವಾ ಧರ್ಮದಲ್ಲಿನ ದಂತಕಥೆಗಳನ್ನೇ ಪುರಾಣಗಳು ಎನ್ನಲಾಗುತ್ತದೆ. ಪುರಾಣಗಳು ಆಡುಭಾಷೆಯ ರೂಪದಲ್ಲಿ ಅಥವಾ ಲಿಖಿತ ರೂಪದಲ್ಲಿ ಸಾಂಪ್ರದಾಯಿಕವಾಗಿ ತಲೆಮಾರಿನಿಂದ ತಲೆಮಾರಿಗೆ ವರ್ಗಾಯಿಸಲಾಗುತ್ತವೆ. ಅನೇಕ ಬಾರಿ ಇವುಗಳು ಆ ಸಂಸ್ಕೃತಿಯ ಅಥವಾ ಧರ್ಮದ ನಾಯಕರ ಅಥವಾ ದೇವತೆಗಳ ಅತಿಮಾನುಷ ಕಾರ್ಯಗಳನ್ನು ರಂಜಿತವಾಗಿ ವರ್ಣಿಸುತ್ತವೆ. ಇಂಗ್ಲೀಷ್ ಲೇಖಕ ಕ್ಯಾಸಿಡಿ ಅವರ ಪ್ರಕಾರ "ಒಂದು ಪುರಾಣವು ಇಂದ್ರೀಯ ಚಿತ್ರಣ ಮತ್ತು ಪ್ರಾತಿನಿಧ್ಯ, ಒಂದು ರೀತಿಯ ವಿಶ್ವ ದೃಷ್ಟಿಕೋನ ಮತ್ತು ವಿಶ್ವ ದೃಷ್ಟಿಕೋನವಲ್ಲ", ಕಾರಣಕ್ಕೆ ಒಳಪಡದ ಪ್ರಜ್ಞೆ, ಬದಲಿಗೆ ಪೂರ್ವ-ಸಮಂಜಸವಾದ ಪ್ರಜ್ಞೆ. ಕನಸುಗಳು, ಕಲ್ಪನೆಗಳನ್ನು ಒಳಗೊಂಡಿರುತ್ತವೆ. ಪೌರಾಣಿಕ ಕಥೆಗಳ ಬಗ್ಗೆ ಅರಿವು ಮೂಡಿಸುವ ಉದ್ದೇಶದಿಂದ ಖ್ಯಾತ ಸಾಹಿತಿಗಳು ಹಾಗೂ ವಿದ್ವಾಂಸರ ಪೌರಾಣಿಕ ಕುರಿತ ಬರಹಗಳು ದಿನ ಪತ್ರಿಕೆಗಳಲ್ಲಿ ಪ್ರಕಟಣೆಯಾಗಿವೆ. ಸಾಮಾನ್ಯವಾಗಿ ದಿನಪತ್ರಿಕೆಗಳಲ್ಲಿ ಕ್ರೈಂ, ಕ್ರೀಡೆ ಹಾಗೂ ಸಿನಿಮಾಕ್ಕೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತದೆ. ಬಹುತೇಕ ಪತ್ರಿಕೆಗಳು ರಾಜಕೀಯಕ್ಕೆ ಸಂಬಂಧಿಸಿದ ಸುದ್ದಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡುತ್ತಿವೆ. ಆದರೆ ಇತ್ತೀಚಿನ ದಿನದಲ್ಲಿ ಭೌಗೋಳಿಕ ನೆಲದ ಬಗ್ಗೆ ಮತ್ತು ಸಂಸ್ಕೃತಿ ಬಿಂಬಿಸುವ ಪೌರಾಣಿಕ ಕಥೆಗಳನ್ನು ತಿಳಿಸುವಲ್ಲಿ ಪತ್ರಿಕೆಗಳು ಮುಂದೆ ಬರಬೇಕಾಗುತ್ತದೆ. ಇದರಿಂದ ಯುವ ಜನತೆಯಲ್ಲಿ ಸಂಸ್ಕೃತಿ ಕುರಿತಂತೆ ಜಾಗೃತಿ ಮೂಡವಂತಾಗಬೇಕು. ಆದರೆ ಕನ್ನಡದಲ್ಲಿ 9 ಮುಖ್ಯವಾಹಿನಿಯ ಪತ್ರಿಕೆಗಳಿವೆ. ಆದರೆ ಪೌರಾಣಿಕ ಕಥಾ ಹಂದರ ಒಳಗೊಂಡತಹ ಲೇಖನಗಳು ಪ್ರಕಟವಾಗುವ ಪತ್ರಿಕೆಗಳು ಬೆರಳಣಿಕೆಯಷ್ಟು ಮಾತ್ರ. ಆದರಲ್ಲಿ ಕನ್ನಡದ ದಿನ ಪತ್ರಿಕೆಗಳಾದ ವಿಜಯವಾಣಿ ಹಾಗೂ ವಿಜಯ ಕರ್ನಾಟಕ ಪತ್ರಿಕೆಗಳು ಹೆಚ್ಚಾಗಿ ಪ್ರಾಮುಖ್ಯತೆ ನೀಡುತ್ತಿರುವುದು ವಿಶೇಷ.

ಈ ಹಿನ್ನೆಲೆಯಲ್ಲಿ ಪ್ರಸ್ತುತ ಅಧ್ಯಯನವು ವಿಜಯ ಕರ್ನಾಟಕ ಮತ್ತು ವಿಜಯವಾಣಿ ಕನ್ನಡ ದಿನಪತ್ರಿಕೆಯಲ್ಲಿ ಪ್ರಕಟವಾಗುವ ಪೌರಾಣಿಕ ಕಥೆ ಹಂದರಗಳ ಲೇಖನಗಳನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಕನ್ನಡ ದಿನಪತ್ರಿಕೆ ವಾಚಕರು ಪೌರಾಣಿಕ ಕಥೆಗಳನ್ನು ಹೇಗೆ ಸ್ವೀಕರಿಸುತ್ತಾರೆ ಹಾಗೂ ಅವರ ಮೇಲೆ ಯಾವ ರೀತಿ ಪ್ರಭಾವ ಮತ್ತು ಪರಿಣಾಮವನ್ನು ಬೀರಿದೆ ಎಂಬುದನ್ನು ತಿಳಿಯುವ ಉದ್ದೇಶದಿಂದ ಕೂಡಿದೆ. ಮೇಲಿನ ಉದ್ದೇಶವನ್ನು ಅರಿಯಲು ಸಂಶೋಧಕರು, ಪರಿಮಾಣಾತ್ಮಕ ಸಂಶೋಧನ ವಿಧಾನವನ್ನು ಅಳವಡಿಸಿಲಾಗಿದೆ. ಈ ವಿಧದಲ್ಲಿ ಪ್ರಶ್ನಾವಳಿ ತಂತ್ರವನ್ನು ಬಳಸಿ ಜನರಿಂದ ಮಾಹಿತಿ ಪಡೆಯಲಾಗಿದೆ. ಓದುಗರ ಮೇಲೆ ದಿನಪತ್ರಿಕೆಯಲ್ಲಿ ಪ್ರಕಟವಾಗುವ ಪೌರಾಣಿಕ ಕಥೆಗಳ ಓದುಗರ ಮೇಲೆ ಧನಾತ್ಮಕ ಮತ್ತು ಗುಣಾತ್ಮಕ ಪ್ರಭಾವವನ್ನು ಅಧ್ಯಯನದಲ್ಲಿ ಗಮನಿಸಬಹುದಾಗಿದೆ. ಈ ಅಧ್ಯಯನದಿಂದ ಪೌರಣಿಕ ಕಥೆಗಳು ಜನರಲ್ಲಿ ತಮ್ಮ ಸಂಸ್ಕಾರ, ಮೌಲ್ಯ, ಬಾಂಧವ್ಯ ಆದರ್ಶ ಅರಿಯಲು ಸಹಕಾರಿಯಾಗಿದೆ ಎಂದು ತಿಳಿದುಬಂದಿದೆ. ಈ ಮೂಲಕ ಪತ್ರಿಕೆಗಳಿಗೂ ತಾವು ಪ್ರಕಟಿಸುತ್ತಿರುವ ಪೌರಣಿಕ ಕಥೆಗಳ ಪ್ರಭಾವವನ್ನು ಅರಿಯಲು ಸಾಧ್ಯವಾಗಿದೆ.

Downloads

Published

05.06.2023

How to Cite

Muniswamy, & T. Sripathy. (2023). ಕನ್ನಡ ದಿನ ಪತ್ರಿಕೆಗಳಲ್ಲಿ ಮೂಡಿ ಬರುವ ಪೌರಾಣಿಕ ಕಥೆಗಳ ಕುರಿತು ಒಂದು ಅಧ್ಯಯನ. AKSHARASURYA, 2(06), 64–79. Retrieved from https://aksharasurya.com/index.php/latest/article/view/140

Issue

Section

Article