ಕರ್ನಾಟಕ ಏಕೀಕರಣದಲ್ಲಿ ಪಾಟೀಲ ಪುಟ್ಟಪ್ಪನವರ ಪಾತ್ರ

Main Article Content

ರಾಜು ಕೂಡಗಿ

Abstract

ಹರಿದು ಹಂಚಿಹೋಗಿದ್ದ ಕನ್ನಡ ನಾಡನ್ನು ಒಂದೇ ಆಡಳಿತದಡಿ ತರುವ ಕರ್ನಾಟಕ ಏಕೀಕರಣ ಚಳವಳಿಯಲ್ಲಿ ಖ್ಯಾತ ಪತ್ರಕರ್ತ ಡಾ. ಪಾಟೀಲ ಪುಟ್ಟಪ್ಪನವರ ಪಾತ್ರ ಅತ್ಯಂತ ನಿರ್ಣಾಯಕವಾದದ್ದು. ಬ್ರಿಟಿಷರು ಮತ್ತು ವಿವಿಧ ಸಂಸ್ಥಾನಗಳ ಆಳ್ವಿಕೆಯಲ್ಲಿ ವಿಭಜನೆಗೊಂಡಿದ್ದ ಕನ್ನಡಿಗರನ್ನು ಒಗ್ಗೂಡಿಸಲು ಅವರು 'ವಿಶಾಲ ಕರ್ನಾಟಕ' ಹಾಗೂ 'ನವಯುಗ' ಪತ್ರಿಕೆಗಳ ಮೂಲಕ ನಿರಂತರವಾಗಿ ಜಾಗೃತಿ ಮೂಡಿಸಿದರು. 1953ರಲ್ಲಿ ಹುಬ್ಬಳ್ಳಿಯಲ್ಲಿ ನಡೆದ ಅದರಗುಂಚಿ ಶಂಕರಗೌಡರ ಉಪವಾಸ ಸತ್ಯಾಗ್ರಹ ಮತ್ತು ತತ್ಸಂಬಂಧಿ ಗಲಭೆಗಳ ನೈಜ ವರದಿಗಾರಿಕೆ ಮಾಡುವ ಮೂಲಕ ಏಕೀಕರಣದ ಕೂಗನ್ನು ರಾಷ್ಟ್ರಮಟ್ಟದಲ್ಲಿ ಪ್ರತಿಧ್ವನಿಸುವಂತೆ ಮಾಡಿದರು. ಸಮಗ್ರ ಕರ್ನಾಟಕ ನಿರ್ಮಾಣದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಪುಟ್ಟಪ್ಪನವರ ದೃಢ ನಿಲುವುಗಳು ಹಾಗೂ ಕನ್ನಡ ನಾಡು-ನುಡಿಯ ಬಗೆಗಿನ ಅವರ ಬದ್ಧತೆಯನ್ನು ಇಲ್ಲಿ ವಿಶ್ಲೇಷಿಸಲಾಗಿದೆ.

Article Details

Section

Research Articles

Author Biography

ರಾಜು ಕೂಡಗಿ

ಸಹಾಯಕ ಪ್ರಾಧ್ಯಾಪಕರು, ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯ, ನವನಗರ, ಹುಬ್ಬಳ್ಳಿ.

How to Cite

ರಾಜು ಕೂಡಗಿ. (2023). ಕರ್ನಾಟಕ ಏಕೀಕರಣದಲ್ಲಿ ಪಾಟೀಲ ಪುಟ್ಟಪ್ಪನವರ ಪಾತ್ರ. ಅಕ್ಷರಸೂರ್ಯ (AKSHARASURYA), 2(05), 155 to 164. https://aksharasurya.com/index.php/latest/article/view/132

References

ಪಾಟೀಲ ಪುಟ್ಟಪ್ಪ: ಕನ್ನಡ ನಾಡು ಒಂದಾದ ಕಥೆ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.

ಪಾಟೀಲ ಪುಟ್ಟಪ್ಪ: ಕರ್ನಾಟಕದ ಕಥೆ, ಎಸ್. ಬಿ. ಎಸ್. ಪಬ್ಲಿಕೇಸರ್ಸ್, ಬೆಂಗಳೂರು.

ಪಾಟೀಲ ಪುಟ್ಟಪ್ಪ: ಉಸಿರಾಗಲಿ ಕನ್ನಡ, ಕುವೆಂಪು ವಿದ್ಯಾವರ್ಧಕ ಸಂಘ, ಮೈಸೂರು.

ಪಾಟೀಲ ಪುಟ್ಟಪ್ಪ: ಸಮಗ್ರ ಪಾಪು ಪ್ರಪಂಚ, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.

ಪಾಟೀಲ ಪುಟ್ಟಪ್ಪ: ಗೋಕಾಕ ವರದಿಯ ಹೋರಾಟದ ಕಥೆ, ಕರ್ನಾಟಕ ವಿದ್ಯಾವರ್ಧಕ ಸಂಘ, ಧಾರವಾಡ.

ಪಾಟೀಲ ಪುಟ್ಟಪ್ಪ: ನಮ್ಮ ಚಲುವ ಕನ್ನಡ ನಾಡು, ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ.

ಪಾಟೀಲ ಪುಟ್ಟಪ್ಪ: ನಾಡು-ನುಡಿ, ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

ಸರಜೂ ಕಾಟ್ಕರ: ನಾನು ಪಾಟೀಲ ಪುಟ್ಟಪ್ಪ ಭಾಗ-1 ಮತ್ತು 2, ಲೋಹಿಯಾ ಪ್ರಕಾಶನ, ಬಳ್ಳಾರಿ.

ಮುಖ್ಯಮಂತ್ರಿ ಚಂದ್ರು ಮತ್ತು ಗೋಪಾಲರಾವ್ ಎಚ್. ಎಸ್. (ಸಂ): ಕರ್ನಾಟಕ ಏಕೀಕರಣಕ್ಕೆ ದುಡಿದ ಮಹನೀಯರು, ಕನ್ನಡ ಅಭಿವೃದ್ಧಿಪ್ರಾಧಿಕಾರ, ಬೆಂಗಳೂರು.

ಗೋವಿಂದರಾಜ್ ಸಿ. ಆರ್.: ಕರ್ನಾಟಕ ಏಕೀಕರಣ ಚಳುವಳಿ ಮತ್ತು ಕನ್ನಡ ಸಾಹಿತ್ಯ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಬೆಂಗಳೂರು.

Most read articles by the same author(s)