ಐತಿಹಾಸಿಕ ಸುಂದರ ನೆಲೆ ಕಾಗಿನೆಲೆ.

Authors

  • SHIVAYOGI KORISHETTARA

Abstract

ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನ ಕಾಗಿನೆಲೆ ಪ್ರಾಚೀನ ಹಾಗೂ ಮಧ್ಯಕಾಲೀನ ಅವಧಿಯಿಂದಲೂ ತನ್ನದೇ ಆದ ಐತಿಹಾಸಿಕ ಕೌತುಕಗಳನ್ನು ಹೊಂದಿದೆ. ಇದು ಅಂದಿನ ಬನವಾಸಿ-12000 ಆಡಳಿತ ವಿಭಾಗದ ಹಲವಾರು ಕಂಪಣಗಳಲ್ಲಿ ಒಂದಾಗಿದ್ದ ಬಾಸವೂರು-140 ಕಂಪಣದ ಆಧೀನಕ್ಕೆ ಒಳಪಟ್ಟಿತ್ತು. ಕಾಗಿನೆಲೆ ಬಾಸವೂರು ಕಂಪಣದ ಉಪ ಆಡಳಿತ ವಿಭಾಗದ ಕೇಂದ್ರಸ್ಥಾನವೂ ಆಗಿದ್ದು, ಕಾಗಿನೆಲೆ-12 ಎಂಬುದಾಗಿ ಪ್ರಖ್ಯಾತಿ ಹೊಂದಿತ್ತು. ಅಂದರೆ ಸುತ್ತಲಿನ 12 ಗ್ರಾಮಗಳಿಗೆ ಇದು ಕೇಂದ್ರಸ್ಥಾನವಾಗಿತ್ತು. ಈ ವಿಭಾಗಕ್ಕೆ ಒಳಪಟ್ಟಿದ್ದ ಗ್ರಾಮಗಳು ಯಾವವು ಎಂಬುದರ ಬಗ್ಗೆ ಇಲ್ಲಿನ ಶಾಸನಗಳು ಮೌನವಾಗಿದ್ದರೂ, ಗೊಟ್ಟಗಡೆಯಲ್ಲಿನ (ಇಂದಿನ ಹಿರೇಹಳ್ಳಿ) ಶಾಸನವು ಆ ಪ್ರದೇಶವು ಕಾಗಿನೆಲೆ 12 ಆಡಳಿತ ವಿಭಾಗಕ್ಕೆ ಒಳಪಟ್ಟಿದ್ದನ್ನು ಉಲ್ಲೇಖಿಸುತ್ತದೆ. (ಕ.ಇನ್ಸ. ಸಂ.4 ಶಾ.ಸಂ.10 ಕ್ರಿ.ಶ.1121)

Downloads

Published

05.05.2023

How to Cite

SHIVAYOGI KORISHETTARA. (2023). ಐತಿಹಾಸಿಕ ಸುಂದರ ನೆಲೆ ಕಾಗಿನೆಲೆ. AKSHARASURYA, 2(05), 147–154. Retrieved from https://aksharasurya.com/index.php/latest/article/view/127

Issue

Section

Article