ಆಧುನಿಕ ಮಹಿಳಾ ಸಾಹಿತ್ಯದ ಕಥಾ ಕಾದಂಬರಿಯ ತೆನೆ-ಎಂ. ಕೆ. ಇಂದಿರಾ.

Authors

  • SOMASHEKAR L. R.

Abstract

ಹೆಣ್ಣು ಮಕ್ಕಳಿಗೆ ಓದು ವಿದ್ಯೆಯ ಕಾಲವಲ್ಲ, ಹೊರ ಜಗತ್ತಿಗೆ ಮುಕ್ತವಾಗಿ ತೆರೆದುಕೊಳ್ಳುವ ಶತಮಾನವೂ ಅಲ್ಲ. ಹೊಸ್ತಿಲಾಚೆಗಿನ ವ್ಯವಹಾರದ ಪರಿಚಯವಿಲ್ಲ. ಈ ಎಲ್ಲಾ ಇಲ್ಲಗಳ ನಡುವೆ ತಮ್ಮ ಒಳಗಿನ ಅದಮ್ಯ ಬರಹದ ತುಡಿತಕ್ಕೆ ತಾವಾಗೇ ಹಾದಿ ಕಂಡುಕೊಳ್ಳಲು ಹೊರಟ ಕೆಲವೇ ಕೆಲವು ಹೆಂಗಳೆಯರಲ್ಲಿ ಎಂ.ಕೆ ಇಂದಿರಾ ಸಾಧಿಸಿದ ಜನಪ್ರಿಯತೆ, ಕೀರ್ತಿ ಕನ್ನಡ ಸಾಹಿತ್ಯ ಲೋಕದಲ್ಲಿ ಅವರ ಸಾಧನೆ ವಿಸ್ಮಯಗೊಳಿಸುವಂಥದ್ದು.

ಇವರ ಬರಹಗಳಲ್ಲಿ ಅಂದಿನ ಕಾಲದ ಸಮಾಜದ ಕಟ್ಟು ಕಟ್ಟಳೆ ಸಂಪ್ರದಾಯದ ಚೌಕಟ್ಟು ಸಂಸ್ಕೃತಿಯೆಂಬ ಹೆಸರಿನಲ್ಲಿ ಮಹಿಳೆಯನ್ನು ಬಂದಿಸಿರುವ ವ್ಯವಸ್ಧೆ ಹಾಗೂ ಪುರುಷ ಪ್ರಧಾನ ಸಮಾಜದ ಬಗ್ಗೆ ಧ್ವನಿ ಎತ್ತುತ್ತಾರೆ. ಬಹುತೇಕ ಕೃತಿಗಳು ನೈಜ ಘಟನೆಗಳಿಂದ ಕೊಡಿವೆ. ತಮ್ಮ ಜೀವನದ ಅನುಭವವು ಬರಹದ ರೂಪುತಾಳಿದೆ. ಮಲೆನಾಡಿನ ಚಿತ್ರಣ, ಮೌಲ್ಯಗಳು, ಸರಳತೆ, ಮೌಢ್ಯತೆ ಕುರುಡು ನಂಬಿಕೆ, ದೌರ್ಜನ್ಯಗಳಂತಹ ವಿಚಾರಗಳಲ್ಲಿ ಹೆಚ್ಚು ಬರೆದಿದ್ದಾರೆ.

Downloads

Published

05.05.2023

How to Cite

SOMASHEKAR L. R. (2023). ಆಧುನಿಕ ಮಹಿಳಾ ಸಾಹಿತ್ಯದ ಕಥಾ ಕಾದಂಬರಿಯ ತೆನೆ-ಎಂ. ಕೆ. ಇಂದಿರಾ. AKSHARASURYA, 2(05), 106–112. Retrieved from https://aksharasurya.com/index.php/latest/article/view/123

Issue

Section

Article