ಸಂಶೋಧನಾ ವಿಧಿ-ವಿಧಾನಗಳಲ್ಲಿನ ವಿದ್ಯಮಾನಗಳು ಹಾಗು ನೈತಿಕ ಕಾಳಜಿಗಳು.

Authors

  • SAVITHA RAVISHANKAR

Abstract

“ಸಂಶೋದನೆ” ಎನ್ನುವುದು ಪ್ರಸ್ಥುತ ಸಂದರ್ಭದಲ್ಲಿ ಮರೀಚಿಕೆಯಾಗಿದೆ. ಕನ್ನಡದ ಮಟ್ಟಿಗಂತೂ ಈವರೆಗಿನ ಸಂಶೋಧನೆಯೂ ಸಾಹಿತ್ಯದ ದಿಗಂತವನ್ನು ವಿಸ್ತರಿಸುವಲ್ಲಿ ಯಾವ ಬಹುಮುಖ್ಯ ಕೊಡುಗೆಯನ್ನು ನೀಡಿಲ್ಲವೆಂಬುದು ಸತ್ಯ. ಪ್ರಸಿದ್ದ ಕವಿ, ಲೇಖಕ, ನಾಟಕಕಾರ, ಶಿಕ್ಷಣದ ಚೌಕ್ಕಟ್ಟಿನಲ್ಲಿ ಸಂಶೋಧನೆ ಕೈಗೊಂಡು ಶ್ರೇಷ್ಠ ಕೃತಿಗಳನ್ನು ರಚಿಸಿಲ್ಲ. ವಯಕ್ತಿಕ ಆಸಕ್ತಿ ಸೂಕ್ಷ್ಮ ಗ್ರಾಹ್ಯ ಮನಸ್ಸು ವಿಸ್ತಾರವಾದ ಓದು, ಶ್ರದ್ಧೆ ಅತ್ಯುತ್ತಮ ಸಮರ್ಪಣೆಯಂತಹ ಗುಣ ವಿಶೇಷಗಳಿಂದ ಸೃಜನಶೀಲ ಕೃತಿಯೊಂದನ್ನು ರಚಿಸಲು ಸಾಧ್ಯವಾಗಿಲ್ಲ. ಅವು ಯಾವುದೇ ವಿಶ್ವವಿದ್ಯಾಲಯದ ಪಿಎಚ್.ಡಿ. ಮಹಾಪ್ರಬಂಧದ ಗುಣಮಟ್ಟಕ್ಕಿಂತ ಮಿಗಿಲಾಗಿಲ್ಲ. ಹಾಗೆಂದು ಈವರೆಗೆ ಉತ್ತಮ ಸಂಶೋಧನೆ ನಡದೆ ಇಲ್ಲ ಎಂಬುದು ನನ್ನ ಅಭ್ರಿಪ್ರಾಯವಲ್ಲ. ಆದರೆ ಅದರ ಸಂಖ್ಯೆ ಅತ್ಯಲ್ಪ. ಶೋಧನೆ ಎಂಬುದು ಒಂದು ಕಾಡುವ ಸ್ಥಿತಿಯಾಗಬೇಕು. ಅದಕ್ಕಾಗಿ ಶೋಧಕನ ಮನಸ್ಸು ಅವಿರತ ತುಡಿಯುತ್ತಿರಬೇಕು. ತಾನು ಕಾಣುವ ದೃಶ್ಯ, ನೋಡುವ ನೋಟ ಎಲ್ಲವೂ ಅದರ ಹುಡುಕಾಟದ ಕಡೆಗೆ ಇರಬೇಕು. ಅವನ ಮನಸ್ಸಿನಲ್ಲಿ ಉದ್ಭವಿಸಿದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಹಾತೊರೆಯುತ್ತಿರಬೇಕು. ಆಗ ಮಾತ್ರ ಪರಿಹಾರ ಸಾಧ್ಯ.

Downloads

Published

05.05.2023

How to Cite

SAVITHA RAVISHANKAR. (2023). ಸಂಶೋಧನಾ ವಿಧಿ-ವಿಧಾನಗಳಲ್ಲಿನ ವಿದ್ಯಮಾನಗಳು ಹಾಗು ನೈತಿಕ ಕಾಳಜಿಗಳು. AKSHARASURYA, 2(05), 101–105. Retrieved from https://aksharasurya.com/index.php/latest/article/view/122

Issue

Section

Article