ಮಾಧವಿ ಕಾದಂಬರಿಯ ನಿರೂಪಣೆ
Main Article Content
Abstract
ಸಮಾಜದಲ್ಲಿ ಶತಮಾನಗಳಿಂದಲೂ ಮಹಿಳೆಯರು ಪುರುಷಪ್ರಧಾನ ವ್ಯವಸ್ಥೆಯ ಶೋಷಣೆಗೆ ಒಳಗಾಗುತ್ತಲೇ ಬಂದಿದ್ದಾರೆ. ಡಾ. ಅನುಪಮಾ ನಿರಂಜನ ಅವರ 'ಮಾಧವಿ' ಕಾದಂಬರಿಯು ಮಹಾಭಾರತದ ಪೌರಾಣಿಕ ಹಿನ್ನೆಲೆಯನ್ನು ಆಧರಿಸಿ, ಹೆಣ್ಣನ್ನು ಕೇವಲ ವಸ್ತುವಾಗಿ, ಭೋಗದ ಪರಿಕರವಾಗಿ ಮತ್ತು ಸಂತಾನೋತ್ಪತ್ತಿಯ ಯಂತ್ರವಾಗಿ ಬಳಸಿಕೊಂಡ ಪರಿಯನ್ನು ವಿಮರ್ಶಾತ್ಮಕವಾಗಿ ಕಟ್ಟಿಕೊಡುತ್ತದೆ. ಯಯಾತಿಯ ಪುತ್ರಿಯಾದ ಮಾಧವಿಯನ್ನು ಗಾಲವನಿಗೆ ದಾನವಾಗಿ ನೀಡುವುದು ಮತ್ತು ತದನಂತರ ಬೇರೆ ಬೇರೆ ರಾಜರಿಗೆ ಕುದುರೆಗಳಿಗಾಗಿ ಆಕೆಯನ್ನು ಒಪ್ಪಿಸುವ ಅಮಾನವೀಯ ಪ್ರಸಂಗಗಳು ಅಂದಿನ ಪಿತೃಪ್ರಧಾನ ಮೌಲ್ಯಗಳ ಕ್ರೌರ್ಯವನ್ನು ಅನಾವರಣಗೊಳಿಸುತ್ತವೆ. ಕೊನೆಗೆ ಸ್ವಯಂವರದ ವೇದಿಕೆಯಲ್ಲಿ ಮಾಧವಿ ತೋರುವ ದಿಟ್ಟ ಪ್ರತಿಭಟನೆ ಮತ್ತು ಅರಣ್ಯದ ಕಡೆಗೆ ಅವಳ ನಿರ್ಗಮನ, ಹೆಣ್ಣಿನ ಸ್ವಾಭಿಮಾನ ಹಾಗೂ ಶೋಷಣೆಯ ವಿರುದ್ಧದ ದನಿಯ ಸಂಕೇತವಾಗಿದೆ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಮಾಧವಿ, ಡಾ. ಅನುಪಮಾ ನಿರಂಜನ, ಡಿ.ವಿ.ಕೆ ಮೂರ್ತಿ ಪ್ರಕಾಶನ, ಮೈಸೂರು, ಹದಿನಾರನೆಯ ಮುದ್ರಣ, 2021.
ಸ್ತ್ರೀವಾದಿ ಚಿಂತನೆ: ಕೆಲವು ಪ್ರಶ್ನೆಗಳು, ಸಂದೇಹಗಳು (ಲೇಖನ), ಎಚ್. ಎಸ್. ಶ್ರೀಮತಿ.
ಸ್ತ್ರೀವಾದ, ಬಿ. ಎನ್. ಸುಮಿತ್ರಾ ಬಾಯಿ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಮೂರನೆಯ ಮುದ್ರಣ, 2021.
ಮಹಿಳೆ ವಸಾಹೋತರ ಸಂದರ್ಭ, ಡಾ. ಕವಿತಾ ರೈ, ಕರ್ನಾಟಕ ಸಾಹಿತ್ಯ ಅಕಾಡೆಮಿ, ಮೊದಲ ಮುದ್ರಣ, 2015.
ಮಾಧವಿ ಮತ್ತು ಇತಿಹಾಸ ಪುನರುಚ್ಚಾರ (ಲೇಖನ), ತೇಜಸ್ವಿ ನಿರಂಜನ ಮತ್ತು ಸೀಮಂತಿನಿ ನಿರಂಜನ.