ಕನ್ನಡ ಭಾಷೆಯ ಉಳಿವಿನ ಸವಾಲುಗಳು

Main Article Content

ಶಬೀನಾ

Abstract

ಮಾನವನ ಅತ್ಯುತ್ತಮ ಅಭಿವ್ಯಕ್ತಿ ಮಾಧ್ಯಮವಾದ ಭಾಷೆ, ಕಾಲಕ್ರಮೇಣ ನಾನಾ ರೂಪಗಳನ್ನು ಪಡೆದುಕೊಂಡಿದೆ. ಇವುಗಳಲ್ಲಿ ಕನ್ನಡ ಭಾಷೆಯೂ ಒಂದು, ಇದು ಸುಮಾರು ಎರಡೂವರೆ ಸಾವಿರ ವರ್ಷಗಳಷ್ಟು ಹಳೆಯದಾದ ಶ್ರೀಮಂತ ದ್ರಾವಿಡ ಭಾಷೆಯಾಗಿದೆ. ಆದರೆ ಇಂದು ಆಧುನೀಕರಣ, ಜಾಗತೀಕರಣ ಹಾಗೂ ಅನ್ಯ ಭಾಷೆಗಳ ಪ್ರಭಾವದಿಂದಾಗಿ ಕನ್ನಡ ಭಾಷೆಯ ಸ್ಥಾನಮಾನ ಮತ್ತು ಅದರ ಉಳಿವಿಗೆ ಗಂಭೀರವಾದ ಸವಾಲುಗಳು ಎದುರಾಗಿವೆ. ಕನ್ನಡ ನಾಡಿನಲ್ಲಿಯೇ ಕನ್ನಡಿಗರು ತಮ್ಮ ಭಾಷೆಯನ್ನು ಬಿಟ್ಟು ಇತರ ಭಾಷೆಗಳಿಗೆ ಮಾರುಹೋಗುತ್ತಿರುವುದು ಆತಂಕಕಾರಿ ವಿಷಯವಾಗಿದೆ. ಭಾಷೆಯ ನಿರ್ಲಕ್ಷ್ಯದಿಂದ ಆಗುವ ಅಪಾಯಗಳನ್ನು ಅರಿತು, ಅದನ್ನು ಆಡುಭಾಷೆ ಮತ್ತು ಗ್ರಾಂಥಿಕ ಭಾಷೆಯಾಗಿ ನಿರಂತರವಾಗಿ ಬಳಸುವ ಮೂಲಕ ಉಳಿಸಿ ಬೆಳೆಸುವುದು ಇಂದಿನ ತುರ್ತು ಅಗತ್ಯವಾಗಿದೆ.

Article Details

Section

Research Articles

Author Biography

ಶಬೀನಾ

ಸಹಾಯಕ ಪ್ರಾದ್ಯಾಪಕರು, ಪ್ರಸಿಡೆನ್ಸಿ ವಿಶ್ವವಿದ್ಯಾಲಯ, ಬೆಂಗಳೂರು.

How to Cite

ಶಬೀನಾ. (2023). ಕನ್ನಡ ಭಾಷೆಯ ಉಳಿವಿನ ಸವಾಲುಗಳು. ಅಕ್ಷರಸೂರ್ಯ (AKSHARASURYA), 2(05), 50 to 52. https://aksharasurya.com/index.php/latest/article/view/119

References

ಕನ್ನಡ ಸಾಹಿತ್ಯ ಚರಿತ್ರೆ, ರಂ ಶ್ರೀ ಮುಗಳಿ, ಗೀತಾ ಬುಕ್ ಹೌಸ್, ಮೈಸೂರು. 2014.

ಕನ್ನಡ ನಿಘಂಟು, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, 1995.

ಅಂತರ್‌ಜಾಲ: https://www.sallapa.com/2020/11/blog-post_144.html - 09.3.2023

Most read articles by the same author(s)