ಸಮಾಜ ಸಂಸ್ಕೃತಿಯಲ್ಲಿ ಎಂ. ಅಕಬರ ಅಲಿ

Main Article Content

ಶ್ರೀಮತಿ ಅನುರಾಧಾ ಅಶೋಕ ಕಂಚಿ

Abstract

ಕವಿ ಎಂ. ಅಕಬರ ಅಲಿಯವರು ಸಮಾಜದ ಅಂಕು-ಡೊಂಕುಗಳನ್ನು, ವಿಶೇಷವಾಗಿ ಜಾತಿ, ಭಾಷೆ, ಮತ್ತು ಪಂಥಗಳ ಅಸಡ್ಡೆಗಳನ್ನು ತಮ್ಮ ಕಾವ್ಯಗಳಲ್ಲಿ ಅತ್ಯಂತ ಸಾತ್ವಿಕವಾಗಿ ಮತ್ತು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ. ಅವರ ಕವಿತೆಗಳಲ್ಲಿ ಸಮಾಜ ಮತ್ತು ಸಂಸ್ಕೃತಿಯು ಪರಸ್ಪರ ಪೂರಕ ಹಾಗೂ ಪೋಷಕವಾಗಿ ಬೆಸೆದುಕೊಂಡಿವೆ. ಸಾಮಾಜಿಕ ವಾಸ್ತವತೆಯನ್ನೇ ತಮ್ಮ ಪ್ರಧಾನ ಕಾಳಜಿಯನ್ನಾಗಿಟ್ಟುಕೊಂಡು, ಆಶಯಗಳನ್ನು ನೇರವಾಗಿ ಹೇಳುವ ಬದಲಾಗಿ ಸಂಕೇತ, ಪ್ರತಿಮೆ ಹಾಗೂ ಪ್ರತೀಕಗಳ ಮೂಲಕ ಧ್ವನಿಪೂರ್ಣವಾಗಿ ಅಭಿವ್ಯಕ್ತಿಸಿದ್ದಾರೆ. ದ್ವೇಷ, ಆರ್ಥಿಕ ದುಸ್ಥಿತಿ ಮತ್ತು ಸಂಪ್ರದಾಯದ ವೈಪರೀತ್ಯಗಳನ್ನು ವಿಡಂಬಿಸುತ್ತಲೇ, ಮಾನವತಾವಾದವನ್ನು ಮತ್ತು ವಿಶ್ವಶಾಂತಿಯನ್ನು ಎತ್ತಿಹಿಡಿಯುವ ಪ್ರಯತ್ನ ಅವರ ಸಾಹಿತ್ಯದಲ್ಲಿದೆ. ವೈಯಕ್ತಿಕ ಮತ್ತು ಸಾಮುದಾಯಿಕ ನೋವುಗಳನ್ನು ನುಂಗಿ, 'ನುಡಿ' ಹಾಗೂ 'ನಡೆ'ಗಳಲ್ಲಿ ಜೀವನಪ್ರೀತಿಯನ್ನು ಕಾಯ್ದುಕೊಂಡ ಅಪರೂಪದ ಕವಿ ಇವರು.

Article Details

Section

Research Articles

Author Biography

ಶ್ರೀಮತಿ ಅನುರಾಧಾ ಅಶೋಕ ಕಂಚಿ

ಕನ್ನಡ ಸಹಾಯಕ ಪ್ರಾಧ್ಯಾಪಕಿ, ಮಹಾವೀರ ಪಿ. ಮಿರ್ಜಿ ವಾಣಿಜ್ಯ ಮಹಾವಿದ್ಯಾಲಯ, ನೆಹರು ನಗರ, ಬೆಳಗಾವಿ.

References

ಅಕಬರ ಅಲಿ-ಜೀವನಸಾಹಿತ್ಯ-1992 ಅಭಿನಂದನ ಗ್ರಂಥ ಸಂಪಾದನೆ ವಿಷ್ಣು ನಾಯಕ ಕ್ವಾಲಿಟಿ ಪ್ರಿಂಟರ್ಸ್, ಅಂಕೋಲಾ.

ಅಕಬರ ಅಲಿ ಸಮಗ್ರ ಕಾವ್ಯ ವೈದ್ಯವಾರ್ತಾ ಪ್ರಕಾಶನ ಪ್ರಸರಾಂಗ-2006 ಸಂಪಾದನೆ-ಅಕಬರ ಅಲಿ.