ವಚನ ಸಾಹಿತ್ಯದಲ್ಲಿ ವೀರರಸ

Main Article Content

ಶ್ರೀ ಸಾಬಣ್ಣ

Abstract

ಶೃಂಗಾರವು ವಿಶೋಹಕ ರಸವಾದರೆ, ವೀರರಸವು ಬದುಕಿನ ಚಾಲನ ಶಕ್ತಿಯಾದ ವಿಶ್ವಪೋಷಕ ರಸವಾಗಿದೆ. ವಚನ ಸಾಹಿತ್ಯದಲ್ಲಿ ಕಂಡುಬರುವ ವೀರರಸವು ಬಾಹ್ಯ ರಣರಂಗದ ಯುದ್ಧವಲ್ಲ, ಬದಲಾಗಿ ಕಾಮ, ಕ್ರೋಧಾದಿ ಇಂದ್ರಿಯ ವಿಕಾರಗಳ ವಿರುದ್ಧ ನಡೆಯುವ ತೀವ್ರವಾದ ಆಂತರಿಕ ಹೋರಾಟವಾಗಿದೆ. ಶಿವನನ್ನು ಒಲಿಸಿಕೊಳ್ಳಲು ಕೇವಲ ಸೌಮ್ಯ ಭಕ್ತಿಯಿಂದ ಸಾಧ್ಯವಿಲ್ಲ; ಅದಕ್ಕೆ ಅಸಿಧಾರಾವ್ರತಕ್ಕಿಂತ ಕಠೋರವಾದ ಛಲ, ಜ್ಞಾನ ಮತ್ತು ಭಯರಹಿತ ಭಕ್ತಿ ಅತ್ಯಗತ್ಯ. ಬಸವಣ್ಣ, ಅಲ್ಲಮಪ್ರಭು, ಅಕ್ಕಮಹಾದೇವಿ ಮುಂತಾದ ಶರಣರು ಇಂದ್ರಿಯ ದಮನದ ಮೂಲಕ 'ಸರ್ವಾಂಗ ಕಲಿ'ಗಳಾಗಿ, ಲೌಕಿಕ-ಪಾರಲೌಕಿಕ ಆಸೆಗಳನ್ನು ತ್ಯಜಿಸಿ ಕಾಯಕ ನಿಷ್ಠೆಯಲ್ಲಿಯೇ ಕರ್ಮವೀರವನ್ನು ಸಾಧಿಸಿದರು. ಈ ಇಹನಿಷ್ಠೆಯ ಛಲ ಮತ್ತು ಆತ್ಮಪೌರುಷವೇ ಶರಣರ ವೀರರಸದ ಅನನ್ಯತೆಯನ್ನು ಎತ್ತಿತೋರಿಸುತ್ತದೆ.

Article Details

Section

Research Articles

Author Biography

ಶ್ರೀ ಸಾಬಣ್ಣ

ತಾತ್ಕಾಲಿಕ ಅಧ್ಯಾಪಕರು, ಕನ್ನಡ ವಿಶ್ವವಿದ್ಯಾಲಯ, ಹಂಪಿ. ವಿಸ್ತರಣಾ ಕೇಂದ್ರ, ದೇವದುರ್ಗ.

How to Cite

ಶ್ರೀ ಸಾಬಣ್ಣ. (2023). ವಚನ ಸಾಹಿತ್ಯದಲ್ಲಿ ವೀರರಸ. ಅಕ್ಷರಸೂರ್ಯ (AKSHARASURYA), 2(05), 20 to 29. https://aksharasurya.com/index.php/latest/article/view/116

References

ವಚನ ಸಾವಿರ, ಪ್ರೋ ಓ. ಎಲ್. ನಾಗಭೂಷಣಸ್ವಾಮಿ (ಸಂ), ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಯಲ, ಹಂಪಿ, 2014.

ಸರಳ ಶೂನ್ಯ ಸಂಪಾದನೆ, ಡಾ. ಎಲ್. ಬಸವರಾಜ (ಸಂ), ಸಪ್ನ ಬುಕ್ ಹೌಸ್, ಬೆಂಗಳೂರು, 2016.

ವಚನ ಕಮ್ಮಟ, ಕೆ. ಮರುಳಸಿದ್ದಪ್ಪ, ಕಿ. ರಂ. ನಾಗರಾಜ (ಸಂ), ಸಪ್ನ ಬುಕ್ ಹೌಸ್, ಬೆಂಗಳೂರು, 2015.

ವೀರಶೈವ ಸಾಹಿತ್ಯ ಸಮೀಕ್ಷೆ, ಪ್ರೋ. ಸದಾನಂದ ಕನವಳ್ಳಿ, ಪ್ರೋ. ಸಿ. ವಿ. ಕೆರಿಮನಿ (ಸಂ), ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು, 2010.

ಕನ್ನಡ ಸಾಹಿತ್ಯ ಚರಿತ್ರೆ, ರಂ.ಶ್ರೀ. ಮುಗಳಿ, ಗೀತಾ ಬುಕ್ ಹೌಸ್, ಮೈಸೂರು, 2011.

ಕನ್ನಡ ಸಾಹಿತ್ಯ ಸಂಗಾತಿ, ಕೀರ್ತಿನಾಥ ಕುರ್ತಕೋಟಿ, ಕುರ್ತಕೋಟಿ ಮೆಮೋರಿಯಲ್‌ ಟ್ರಸ್ಟ್, ಧಾರವಾಡ, 2016.