ಕೈವಾರ ಮುನಿಯಮ್ಮನ ಕತೆ: ಒಂದು ಪುನರವಲೋಕನ
Main Article Content
Abstract
ತತ್ತ್ವಪದಕಾರ ಕೈವಾರ ನಾರೇಣಪ್ಪನವರ ಹೆಂಡತಿ ಕೈವಾರ ಮುನಿಯಮ್ಮನನ್ನು ಇತಿಹಾಸ ಮತ್ತು ಸಾಹಿತ್ಯದಲ್ಲಿ ಕೇವಲ ಒಬ್ಬ ಗಯ್ಯಾಳಿಯಾಗಿ, ಪತಿಪೀಡಕಿಯಾಗಿ ಚಿತ್ರಿಸಲಾಗಿದೆ. ಆದರೆ ಆಕೆ ಗಂಡನ ಧ್ಯಾನದ ಸಮಯದಲ್ಲಿ ಸಂಸಾರ ಮತ್ತು ಕಾಯಕದ ಜವಾಬ್ದಾರಿಯನ್ನು ಹೊತ್ತ ದಿಟ್ಟ ಮಹಿಳೆ. ನಾರೇಣಪ್ಪನವರೇ ಆಕೆಯನ್ನು ತಮ್ಮ 'ಮೊದಲ ಗುರು' ಎಂದು ಕರೆದಿದ್ದಾರೆ. ಕಾಯಕ ತತ್ತ್ವದ ಮಹತ್ವವನ್ನು ತಿಳಿಸಿದ ಮುನಿಯಮ್ಮ, ನಾರೇಣಪ್ಪನವರ ಯೋಗಸಾಧನೆಗೆ ಪರೋಕ್ಷವಾಗಿ ಸಹಕರಿಸಿದಳು. ಬದಲಾದ ಚಾರಿತ್ರಿಕ, ಸಾಮಾಜಿಕ ಮೌಲ್ಯಗಳಿಂದಾಗಿ ತತ್ತ್ವಪದ ಮತ್ತು ದಾಸ ಸಾಹಿತ್ಯದಲ್ಲಿ ಸ್ತ್ರೀಯರು ನಿರ್ಲಕ್ಷ್ಯಕ್ಕೆ ಒಳಗಾದರು. ಮಹಿಳಾ ಸಾಧಕಿಯರನ್ನು ಗಯ್ಯಾಳಿಗಳಾಗಿ ಬಿಂಬಿಸಿದ ಚಾರಿತ್ರಿಕ ಕಾರಣಗಳನ್ನು ಶೋಧಿಸಿ, ಮುನಿಯಮ್ಮನ ಕಾಯಕ ನಿಷ್ಠೆ ಮತ್ತು ಆಧ್ಯಾತ್ಮಿಕ ಕೊಡುಗೆಯನ್ನು ಮರುಮೌಲ್ಯಮಾಪನ ಮಾಡುವುದು ಅತ್ಯಗತ್ಯ.
Article Details
Issue
Section

This work is licensed under a Creative Commons Attribution-NonCommercial-ShareAlike 4.0 International License.
References
ಕೈಪು ಲಕ್ಷ್ಮೀನರಸಿಂಹ ಶಾಸ್ತ್ರಿ, ಕೈವಾರ ಶ್ರೀ ನಾರೇಯಣ ಯೋಗಿ ತಾತಯ್ಯನವರ ಜೀವನ ಚರಿತ್ರೆ, ಕೈವಾರ: ಶ್ರೀ ಯೋಗಿ ನಾರೇಯಣ ಮಠ, 2007.
ಕೈವಾರ ಸದ್ಗುರು ಶ್ರೀ ಯೋಗಿ ನಾರೇಯಣ ವಿರಚಿತ ಶ್ರೀ ಅಮರನಾರೇಯಣ ವೇದಾಂತ ಸಾರಾವಳಿ ಕೀರ್ತನೆಗಳು, ಕೈವಾರ: ಸದ್ಗುರು ಶ್ರೀ ಯೋಗಿ ನಾರೇಯಣ ಮಠ, 2004.
ಶ್ರೀ ಕ್ಷೇತ್ರ ಕೈವಾರ ತಾತಯ್ಯ (ಚಲನಚಿತ್ರ)-https://youtu.be/NCh-v7dDqG24