ಮೌನೇಶ್ವರರ ಹುಷಾರು, ಪರಾಕು, ಡಂಗುರ ಮತ್ತು ಸುದ್ದಿಹಾಡುಗಳು

Main Article Content

ವನಜಾಕ್ಷಿ ಮ. ಬಡಿಗೇರ

Abstract

೧೬-೧೭ನೇ ಶತಮಾನದಲ್ಲಿ ಜನಿಸಿದ ತಿಂಥಣಿ ಮೌನೇಶ್ವರರು ಹಿಂದೂ ಮತ್ತು ಮುಸ್ಲಿಂ ಧರ್ಮಗಳ ನಡುವೆ ಭಾವೈಕ್ಯತೆಯನ್ನು ಸಾರಿದ ಶ್ರೇಷ್ಠ ಸಂತರು. ಅಜ್ಞಾನ ಮತ್ತು ಮೂಢನಂಬಿಕೆಗಳನ್ನು ತೊಡೆದುಹಾಕಲು ಅವರು ಸರಿಸುಮಾರು ೮೦೦ಕ್ಕೂ ಅಧಿಕ ವಚನಗಳನ್ನು ರಚಿಸಿದ್ದಾರೆ. ಮೌನೇಶ್ವರರ ವಚನಗಳಲ್ಲಿ ಪ್ರಧಾನವಾಗಿ ಕಾಲಜ್ಞಾನ, ಖಂಡಜ್ಞಾನ, ನೀತಿ ಮತ್ತು ಬೋಧ ಪ್ರಕಾರಗಳನ್ನು ಗುರುತಿಸಬಹುದು. ವಿಶೇಷವಾಗಿ ಕಾಲಜ್ಞಾನಕ್ಕೆ ಸಂಬಂಧಿಸಿದ 'ಹುಷಾರು', 'ಪರಾಕು', 'ಡಂಗುರ' ಮತ್ತು 'ಸುದ್ದಿಹಾಡುಗಳು' ಸಮಾಜವನ್ನು ಎಚ್ಚರಿಸುವ, ದೈವಿಕ ಶಕ್ತಿಯನ್ನು ಕೊಂಡಾಡುವ ಹಾಗೂ ಸರ್ವ ಸಮಾನತೆಯನ್ನು ಬೋಧಿಸುವ ಆಶಯವನ್ನು ಹೊಂದಿವೆ. ಪ್ರಕೃತಿ, ವೃತ್ತಿ ಉಪಕರಣಗಳು ಮತ್ತು ಜಗತ್ತಿನ ವಾಸ್ತವಗಳನ್ನು ರೂಪಕಗಳನ್ನಾಗಿ ಬಳಸಿಕೊಂಡು, ಮನುಕುಲಕ್ಕೆ ಅಧ್ಯಾತ್ಮಿಕ ಹಾಗೂ ಸಾಮಾಜಿಕ ಜಾಗೃತಿಯ ಸಂದೇಶವನ್ನು ಈ ವಚನಗಳು ನೀಡುತ್ತವೆ.

Article Details

Section

Research Articles

Author Biography

ವನಜಾಕ್ಷಿ ಮ. ಬಡಿಗೇರ

ಸಂಶೋಧನ ವಿದ್ಯಾರ್ಥಿ, ಕನ್ನಡ ವಿಶ್ವವಿದ್ಯಾಲಯ, ಹಂಪಿ.

References

ಜೀವಣ್ಣ ಮಸಳಿ.(ಸಂ). : ಶ್ರೀ ಮೌನೇಶ್ವರ ವಚನಸಂಗ್ರಹ, ವಿಶ್ವದರ್ಶನ ಪ್ರಕಾಶನ ಬಾಗಲಕೋಟೆ 1987.

ಜೀವಣ್ಣ ಮಸಳಿ.(ಸಂ). : ಶ್ರೀ ಮೌನೇಶ್ವರ ತ್ರಿಪದಿಗಳು. ಶ್ರೀ ವಿಶ್ವಮಯ ಸಾಹಿತ್ಯ ಪ್ರಚಾರ ಸಮಿತಿ ಹುಬ್ಬಳ್ಳಿ 2004.

ಪಡಶೆಟ್ಟಿ, ಎಂ. ಎಂ : ತಿಂಥಣಿ ಮೋನಪ್ಪಯ್ಯ: ಒಂದು ಅಧ್ಯಯನ. ಲಿಂಗಾಯತ ಅಧ್ಯಯನ ಸಂಸ್ಥೆ ಶ್ರೀಜಗದ್ಗುರು ತೋಂಟದಾರ್ಯ ಗದಗ 1990.

ವೀರೇಶ ಬಡಿಗೇರ. : ತಿಂತಿಣಿ ಮೌನೇಶ್ವರರ ವಚನಗಳು. ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರ. ಸಂಪಾದಕರು 2016.