ಕರ್ನಾಟಕ ಜಾನಪದ ಸಂಸ್ಕೃತಿ: ಅವಲೋಕನ.

Authors

  • S. M. GOPI

Abstract

ಕರ್ನಾಟಕವು ಸಮೃದ್ಧ ಜಾನಪದ ಸಂಪತ್ತಿನ ಕಣಜವಾಗಿದೆ. ಇಲ್ಲಿನ ಜಾನಪದ ಅಧ್ಯಯನದ ಚರಿತ್ರೆಯನ್ನು ಅವಲೋಕದ ಮಾಡಿದರೆ ಸಾಕಷ್ಟು ವೈವಿಧ್ಯಮಯ ಜಾನಪದ ತವನಿಧಿಯಿರುವುದು ಕಂಡುಬರುತ್ತದೆ. ಕರ್ನಾಟಕ ಜಾನಪದ ಸಂಶೋಧನೆಯಲ್ಲಿ ಇತರ ದೇಶ, ರಾಜ್ಯಗಳಿಗೆ ಹೋಲಿಸಿದರೆ ಉನ್ನತ ಮಟ್ಟದಲ್ಲಿರುವುದು ಕಂಡುಬರುತ್ತದೆ. ಇವೆಲ್ಲದಕ್ಕೂ ಕಳಶಪ್ರಾಯೆಂಬಂತೆ ವಿಶ್ವದ ಮೊದಲ ಜಾನಪದ ವಿಶ್ವವಿದ್ಯಾಲಯ ಆರಂಭವಾಗಿರುವುದು ಕರ್ನಾಟಕದ ಹಾವೇರಿ ಜಿಲ್ಲೆಯ ಗೊಟಗೋಡಿಯಲ್ಲಿ. ಇದು ಕನ್ನಡಿಗರಾದ ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಚಾರವಾಗಿದೆ. 1966ನೇ ಇಸವಿ ಕರ್ನಾಟಕ ಜಾನಪದ ಅಧ್ಯಯನದಲ್ಲಿ ಒಂದು ಐತಿಹಾಸಿಕ ವರ್ಷ, ಜಾನಪದಕ್ಕೆ ಅಕಾಡೆಮಿಕ್ ಮಾನ್ಯತೆ ದೊರೆತ ವರ್ಷ ಅದು. ಹಾಗೆಯೇ ಡಾ.ದೇ.ಜ.ಗೌ ಹಾಗೂ ಡಾ.ಹಾ.ಮಾ.ನಾಯಕರ ಕ್ರಿಯಾಶಕ್ತಿ, ಪರಿಶ್ರಮದಿಂದಾಗಿ ಕರ್ನಾಟಕದಲ್ಲಿ ಮೊದಲಿಗೆ ಮೈಸೂರು ವಿಶ್ವವಿದ್ಯಾಲಯದಲ್ಲಿ ಜಾನಪದ ಅಧ್ಯಯನ ಸ್ನಾತಕೋತ್ತರ ಶಿಕ್ಷಣದಲ್ಲಿ ಸ್ಥಾನ ಪಡೆಯಿತು. 1972ರಲ್ಲಿ ಸ್ನಾತಕೋತ್ತರ ಪದವಿ ಶಿಕ್ಷಣವನ್ನು ಆರಂಭಿಸಿ ಜಾನಪದ ಅಧ್ಯಯನಕ್ಕೆ ಹೊಸ ದಿಕ್ಕನ್ನು ತೆರೆದರು. ದೇ.ಜ.ಗೌ. ಜೀ.ಶಂ.ಪರಮಶಿವಯ್ಯ, ಪಿ.ಆರ್.ತಿಪ್ಪೇಸ್ವಾಮಿಯವರ ನೇತೃತ್ವದಲ್ಲಿ ಮೈಸೂರು ವಿಶ್ವವಿದ್ಯಾಲಯ ಜಾನಪದ ವಸ್ತುಸಂಗ್ರಹಾಲಯವೊಂದನ್ನು ಆರಂಭಿಸಿತು. ಭೌತಿಕ ಜಾನಪದ ಸಂಗ್ರಹದ ಅಧ್ಯಯನದ ದೃಷ್ಟಿಯಿಂದ ಇದೊಂದು ಮಹತ್ವದ ಹೆಜ್ಜೆಯಾಗಿ ದೇಶ-ವಿದೇಶಗಳ ವಿದ್ವಾಂಸರ ಮನ್ನಣೆಯನ್ನು ಗಳಿಸಿತು. ಈ ಹಿನ್ನೆಲೆಯಲ್ಲಿ ಕರ್ನಾಟಕ ಜಾನಪದದ ಸ್ಥಿತ್ಯಂತರ, ಇಟ್ಟ ಹೆಜ್ಜೆ ಗುರುತುಗಳನ್ನು ಪ್ರಾತಿನಿಧಿಕ ಕೃತಿಗಳ ಹಿನ್ನೆಲೆಯಲ್ಲಿ ವಿಶ್ಲೇಷಿಸುವುದು ಪ್ರಸ್ತುತ ಲೇಖನದ ಆಶಯವಾಗಿದೆ.

Downloads

Published

05.04.2023

How to Cite

S. M. GOPI. (2023). ಕರ್ನಾಟಕ ಜಾನಪದ ಸಂಸ್ಕೃತಿ: ಅವಲೋಕನ. AKSHARASURYA, 2(04), 18–22. Retrieved from http://aksharasurya.com/index.php/latest/article/view/99

Issue

Section

Article