ರಂಗಿ ವಿವಾಹೇತರ ಲೈಂಗಿಕತೆ.
Abstract
ನವೋದಯ ಸಂದರ್ಭದಲ್ಲಿ ಸಣ್ಣಕತೆಯನ್ನು ಒಂದು ಸಾಹಿತ್ಯ ಪ್ರಕಾರವಾಗಿ ಬೆಳೆಸಿದವರು ಮಾಸ್ತಿ. ಹಾಗಾಗಿ ಅವರನ್ನು ಕನ್ನಡ ಸಾಹಿತ್ಯದಲ್ಲಿ ‘ಸಣ್ಣಕತೆಗಳ ಜನಕ’ ಎಂದು ಕರೆಯಲಾಗುತ್ತದೆ. ಸುಮಾರು ನೂರಕ್ಕು ಹೆಚ್ಚಿನ ಕತೆಗಳನ್ನು ಮಾಸ್ತಿ ಬರೆದಿದ್ದಾರೆ. ರಂಗಣ್ಣನ ಮದುವೆಯಿಂದ ಆರಂಭಗೊಂಡು, ರಂಗಣ್ಣನ ಕನಸಿನ ದಿನಗಳು, ಉಗ್ರಪ್ಪನ ಉಗಾದಿ, ಜೋಗ್ಯೋರ ಅಂಜಪ್ಪನ ಕೋಳಿ ಕತೆ, ಮೊಸರಿನ ಮಂಗಮ್ಮ, ಮಸುಮತ್ತಿ ಹೀಗೆ ಇವರ ಯಶಸ್ವಿ ಕತೆಗಳ ಪಟ್ಟಿ ಮುಂದುವರೆಯುತ್ತದೆ. ಮಾಸ್ತಿ ಅವರ ಕಥನದ ಜೀವಾಳ ಇರುವುದೇ ಅವರ ಬರವಣಿಗೆ ಶೈಲಿ ಹಾಗೂ ನಿರೂಪಣಾ ಕ್ರಮದಲ್ಲಿ. ಇವರ ಕಥನ ಭಾಷೆ ಅತ್ಯಂತ ಸರಳ. ಅವರ ಕತೆಗಳು ನೇರ ಹಾಗೂ ಸರಳ ನಿರೂಪಣೆಯೊಂದಿಗೆ ಓದುಗರ ಮುಂದೆ ತೆರೆದುಕೊಳ್ಳುತ್ತವೆ. ಹಾಗಾಗಿ ಭಾಷೆ ಎಲ್ಲಿಯೂ ಬಿಗಿ ಅನಿಸುವುದಿಲ್ಲ. ಗಂಭೀರ ವಿಚಾರಗಳನ್ನು ಸರಳವಾಗಿ ಹೇಳುವುದು ಮಾಸ್ತಿ ಅವರ ಕಥೆಯ ಮುಖ್ಯ ಲಕ್ಷಣವಾಗಿದೆ.